ಉಡುಪಿಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ
Team Udayavani, Apr 20, 2021, 4:51 PM IST
ಉಡುಪಿ : ಉಡುಪಿ ವಿವಿಧ ಭಾಗದಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ.
ಉಡುಪಿ ಪರಿಸರದಲ್ಲಿ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ವೇಳೆ ಉತ್ತಮ ಮಳೆ ಸುರಿದಿದೆ. ಉಡುಪಿಯ ಕಟಪಾಡಿ, ಕಾಪು, ಪಡುಬಿದ್ರಿ, ಕುಂದಾಪುರದ ಮಡಾಮಕ್ಕಿ,ಆರ್ಡಿ, ಶೇಡಿಮನೆ,ಅಲ್ವಾಡಿ ಭಾಗದಲ್ಲಿ ಉತ್ತಮ ಮಳೆ ಮಡಾಮಕ್ಕಿ,ಆರ್ಡಿ, ಶೇಡಿಮನೆ,ಅಲ್ವಾಡಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಹಲವಡೆ ಗುಡುಗು, ಸಿಡಿಲು, ಮಿಂಚಿನೊಂದಿಗೆ ಗಾಳಿ ಮಳೆಯಾಗಿದ್ದು, ವಾತಾವರಣದ ಅನಿರೀಕ್ಷಿತ ಬದಲಾವಣೆ ಜನ ಸಂದಣಿ ಕೊಂಚ ತೊಂದರೆಗೆ ಒಳಪಡುವ ಸ್ಥಿತಿ ನಿರ್ಮಾಣವಾಯಿತು.