ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
Team Udayavani, Nov 28, 2022, 9:15 PM IST
ಹೆಬ್ರಿ: ಹೆಬ್ರಿಯ ಖಾಸಗಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪೆರ್ಡೂರು ನಿವಾಸಿ ತೃಪ್ತಿ (17) ನ. 27ರಂದು ತನ್ನ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉತ್ತಮವಾಗಿ ಓದುತ್ತಿದ್ದ ಆಕೆ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದ ಕಾರಣ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ
ಹೆಬ್ರಿ,: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಸಂತೆಕಟ್ಟೆ ಜಡ್ಡುಬೈಲು ನಿವಾಸಿ ರವಿ ನಾಯ್ಕ (38) ನ. 19ರಂದು ಕಾಣೆಯಗಾಗಿದ್ದು, ನ. 27ರಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜಡ್ಡುಬೈಲುವಿನ ರಿಸರ್ವ್ ಫಾರೆಸ್ಟ್ ಗೇರು ಪ್ಲಾಂಟೇಶನ್ ಹಾಡಿಯ ಪೊದೆಯ ಬಳಿಯ ಗೇರು ಮರದ ಕೊಂಬೆಗೆ ನೇಣು ಹಾಕಿಕೊಂಡು ಸಂಪೂರ್ಣ ಕೊಳೆತು ಹೋಗಿರುವ ಸ್ಥಿತಿಯಲ್ಲಿ ರವಿ ನಾಯ್ಕ ಅವರ ಮೃತದೇಹವು ದೊರೆತಿದ್ದು, ಮಾನಸಿಕ ಕಾಯಿಲೆ ಗುಣಮುಖವಾಗದ ವಿಚಾರದಲ್ಲಿ ಮನನೊಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.