ಕಳತ್ತೂರು: ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ಎಂದು ಬಾವಿಗೆ ಹಾರಿ ಯುವಕ ಆತ್ಮಹತ್ಯೆ
4 ವರ್ಷದ ಹಿಂದೆ ಸಹೋದರನೂ ಬಾವಿಗೆ ಹಾರಿ ಆತ್ಮಹತ್ಯೆ
Team Udayavani, Nov 20, 2022, 9:40 PM IST
ಶಿರ್ವ : ವಿಪರೀತ ಕುಡಿತದ ಚಟ ಹೊಂದಿದ್ದ ಯುವಕ ಕಳತ್ತೂರು ಶಾಂತಿಗುಡ್ಡೆ ರೈಸ್ ಮಿಲ್ ಬಳಿಯ ದರ್ಕಾಸ್ ನಿವಾಸಿ ಸಚಿನ್ ಮೂಲ್ಯ(29)ನ.20 ರಂದು ತನ್ನ ಮನೆ ಸಮೀಪದ ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾರು 4 ವರ್ಷದ ಹಿಂದೆ ಈತನ ಅಣ್ಣನೂ ಇದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ನಾನು ಬಾವಿಗೆ ಹಾರುತ್ತೇನೆ ಎಂದು ಮನೆಯವರಲ್ಲಿ ಹೇಳಿ ಸಂಜೆ 4-30ರ ವೇಳೆಗೆ ಬಾವಿಗೆ ಹಾರಿದ್ದಾನೆ.
ಆಳವಾದ ಬಾವಿಯಲ್ಲಿ ಸುಮಾರು 25 ಅಡಿ ನೀರಿದ್ದು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ದೆಂದೂರಿನ ಅಶೋಕ್ ಶೆಟ್ಟಿ ಮತ್ತು ತಂಡ ಮೃತ ದೇಹವನ್ನು ರಾತ್ರಿ ಬಾವಿಯಿಂದ ಮೇಲಕ್ಕೆತ್ತಿದ್ದು ಉಡುಪಿಯ ಶವಾಗಾರದಲ್ಲಿಡಲಾಗಿದೆ.
ಶಿರ್ವ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸಿನೆಮಾ ಕ್ಷೇತ್ರದಲ್ಲೂ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡೋಣ: ಸಚಿವ ಅನುರಾಗ ಠಾಕೂರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್