ಕಾಪು: ಪುತ್ತಿಗೆ ಮಠ, ಗುರ್ಮೆ ಫೌಂಡೇಶನ್ ವತಿಯಿಂದ 4 ಆಂಬ್ಯುಲೆನ್ಸ್ ಲೋಕಾರ್ಪಣೆ


Team Udayavani, May 20, 2021, 2:47 PM IST

kapu-1

ಕಾಪು: ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಹಾಗೂ ತುರ್ತು ಸೇವೆಯ ನಿಮಿತ್ತ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಗುರ್ಮೆ ಫೌಂಡೇಶನ್‌ನ ಪ್ರವರ್ತಕ ಸುರೇಶ್ ಶೆಟ್ಟಿ ಗುರ್ಮೆ ಇವರ ವತಿಯಿಂದ ಕಾಪು ಮತ್ತು ಉಡುಪಿ ತಾಲೂಕು ವ್ಯಾಪ್ತಿಯ ಕಾಪು, ಶಿರ್ವ, ಪಡುಬಿದ್ರಿ, ಹಿರಿಯಡ್ಕ ಸೇರಿದಂತೆ ನಾಲ್ಕು ಕೇಂದ್ರಗಳಿಗೆ ಕೊರೊನಾ ತುರ್ತು ಸೇವೆಗಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಯಿತು.

ಉಚಿತ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಕೊರೊನಾ ಮಹಾಮಾರಿಯಿಂದಾಗಿ ಜಗತ್ತು ತತ್ತರಿಸಿ ಹೋಗಿದೆ. ಕೊರೊನಾ ಸಂಕಷ್ಟದಿಂದ ಜನರ ಜೀವವನ್ನು ರಕ್ಷಿಸಲು ಸರಕಾರ ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದು, ಸರಕಾರದ ಪ್ರಯತ್ನಕ್ಕೆ ಪೂರಕವಾಗಿ ನಾವೂ ಕೂಡಾ ಕೈ ಜೋಡಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಮ್ಮ ಸೇವೆಯಿಂದ ಪ್ರೇರಿತರಾಗಿ ಇನ್ನಷ್ಟು ಮಂದಿ ದಾನಿಗಳು ಮತ್ತು ಸಂಘ – ಸಂಸ್ಥೆಗಳು ಇಂತಹ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸುವಂತಾಗಲಿ ಎಂಬ ಮಹದಾಸೆಯನ್ನು ಹೊಂದಿದ್ದು, ಶ್ರೀ ಕೃಷ್ಣ ದೇವರ ಅನುಗ್ರಹ ಮತ್ತು ಜನರ ಸಹಕಾರದೊಂದಿಗೆ ಭಾರತ ಶೀಘ್ರ ಕೊರೊನಾ ಮುಕ್ತ ರಾಷ್ಟವಾಗಿ ಮೂಡಿ ಬರಲಿ ಎಂದು ಆಶೀರ್ವದಿಸಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕೋವಿಡ್ ಸಂಕಷ್ಟವನ್ನು ಎದುರಿಸಲು ಮತ್ತು ರೋಗಿಗಳಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ಅಗತ್ಯವಾಗಿ ಬೇಕಿದ್ದ ನಾಲ್ಕು ಆಂಬುಲೆನ್ಸ್‌ಗಳನ್ನು ಪುತ್ತಿಗೆ ಮಠ ಮತ್ತು ಗುರ್ಮೆ ಫೌಂಡೇಷನ್ ಜೊತೆಗೂಡಿ ನೀಡುತ್ತಿರುವುದು ಶ್ಲಾಘನೀಯವಾಗಿದೆ. ವಾರದೊಳಗೆ ಬೆಳ್ಳೆ ಭಾಗಕ್ಕೆ ದಾನಿಯೊಬ್ಬರಿಂದ ಆಂಬುಲೆನ್ಸ್ ಬರಲಿದ್ದು, ಪಡುಬಿದ್ರಿಯಲ್ಲಿ ದಾನಿಗಳ ನೆರವಿನೊಂದಿಗೆ ಶೀಥಲೀಕೃತ ಶವಾಗಾರ ನಿರ್ಮಿಸಲಾಗುವುದು. ಶಾಸಕರ ನಿಧಿಯಿಂದಲೂ ಆರೋಗ್ಯ ಕೇಂದ್ರಗಳ ಬೇಡಿಕೆಗೆ ಅನುಗುಣವಾಗಿ ಮಿನಿ ವ್ಯಾನ್ ಮಾದರಿಯ ಆಂಬುಲೆನ್ಸ್ ಒದಗಿಸಲಾಗುವುದು ಎಂದರು.

ಗುರ್ಮೆ ಫೌಂಡೇಶನ್‌ನ ಪ್ರವರ್ತಕ ಗುರ್ಮೆ ಸುರೇಶ್ ಶೆಟ್ಟಿ ಪ್ರಸ್ತಾವನೆಗೈದು ಮಾತನಾಡಿ, ಕೊರೊನಾ ಸಂಕಷ್ಟದ ನಡುವೆಯೇ ನನ್ನ ಆತ್ಮೀಯಾಗಿದ್ದ ನೂರಾರು ಮಂದಿಯನ್ನು ನಾವು ಕಳೆದು ಕೊಂಡಿದ್ದು ಕಳೆದ ವಾರವಷ್ಟೇ ಆಂಬುಲೆನ್ಸ್ ಸಿಗದೇ ಪರಿಚಿತರಿಬ್ಬರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದಾಗ ಆಂಬುಲೆನ್ಸ್ ಕೊರತೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ತತ್‌ಕ್ಷಣ ಕಾರ್ಯಪ್ರವೃತ್ತನಾಗಿ ಪುತ್ತಿಗೆ ಶ್ರೀಗಳ ಸಹಕಾರದೊಂದಿಗೆ ಪುತ್ತಿಗೆ ಮಠ ಮತ್ತು ಗುರ್ಮೆ ಫೌಂಡೇಷನ್‌ನ ವತಿಯಿಂದ ಜಂಟಿಯಾಗಿ 4 ಆಂಬುಲೆನ್ಸ್‌ಗಳನ್ನು ಜನರ ಸೇವೆಗಾಗಿ ಉಚಿತವಾಗಿ ಒದಗಿಸಲು ಯೋಜನೆ ರೂಪಿಸಿದ್ದೇವೆ. ತುರ್ತು ವೈದ್ಯಕೀಯ ಸೇವೆಗಾಗಿ ಆಂಬುಲೆನ್ಸ್ ನೀಡುತ್ತಿದ್ದರೂ ಇದರಲ್ಲಿ ಸಂಚರಿಸುವ ಅವಕಾಶ ಆದಷ್ಟು ಕಡಿಮೆ ಜನರಿಗೆ ಲಭಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಕಿರಣ್ ಆಳ್ವ, ರಮೇಶ್ ಹೆಗ್ಡೆ, ವಿಜಯ ಕರ್ಕೇರ, ಕಾಪು ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಮೀನುಗಾರಿಕಾ ಫೆಡರೇಷನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಪ್ರಶಾಂತ್ ಪಿ. ಶೆಟ್ಟಿ, ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಾಯ ಕಾಮತ್, ಉದ್ಯಮಿಗಳಾದ ಸಂತೋಷ್ ಶೆಟ್ಟಿ ಪುಣೆ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಅಶೋಕ್ ಶೆಟ್ಟಿ, ಸಮಾಜ ಸೇವಕ ಲೀಲಾಧರ ಶೆಟ್ಟಿ, ಆಂಬುಲೆನ್ಸ್ ಯೋಜನೆಯ ಪ್ರಮುಖರಾದ ಸತೀಶ್ ಪಿ. ಶೆಟ್ಟಿ ಗುರ್ಮೆ, ಸೌರಭ್ ಎಸ್. ಶೆಟ್ಟಿ ಗುರ್ಮೆ, ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ನಯೇಶ್ ಪಿ. ಶೆಟ್ಟಿ, ಕಿಶೋರ್ ಕುಮಾರ್ ಗುರ್ಮೆ, ಜಿತೇಂದ್ರ ಶೆಟ್ಟಿ ಉದ್ಯಾವರ, ಸಂತೋಷ್ ಆರ್. ಶೆಟ್ಟಿ, ಬಿಜೆಪಿ ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ವೀಣಾ ಕೆ. ಶೆಟ್ಟಿ, ಸುರೇಂದ್ರ ಪಣಿಯೂರು, ಪ್ರವೀಣ್ ಕುಮಾರ್ ಗುರ್ಮೆ, ಗಂಗಾಧರ ಸುವರ್ಣ, ಸಂದೀಪ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಕಾಪು ಪ್ರಾಥಮಿಕ ಆರೋಗ್ಯ ಕ್ಷೇತ್ರಾರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ವಂದಿಸಿದರು.

ಆಂಬುಲೆನ್ಸ್ ಸೇವೆಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ದಿನದ 24 ಗಂಟೆಯೂ ಆಂಬುಲೆನ್ಸ್ ಸೇವೆ ಲಭ್ಯವಿದ್ದು, ತುರ್ತು ಸೇವೆಗೆ ಸಂಪರ್ಕಿಸದ ಬೇಕಾದ ದೂರವಾಣಿ ಸಂಖ್ಯೆಗಳು ಹೀಗಿವೆ. :-  ಜಿಯಾನಂದ್ ಹೆಗ್ಡೆ -9880688023, ಸಂದೀಪ್ ಬಡಬೆಟ್ಟು – 8310580714, ರಾಜೇಶ್ ನಾಯಕ್-9448723341, ಜಯಪ್ರಕಾಶ ಪ್ರಭು-9964897382, ನಯೇಶ್ ಶೆಟ್ಟಿ-6360201817, ಶಶಿಕಾಂತ್ ಪಡುಬಿದ್ರಿ-9945383543, ಅನಿಲ್ ಕುಮಾರ್-9880914875, ಸಂದೀಪ್ ಶೆಟ್ಟಿ ಕಲ್ಯ-9880295376 ಹಾಗೂ 4 ಆಂಬುಲೆನ್ಸ್‌ಗಳ ಚಾಲಕರ ಮೊಬೈಲ್ ಸಂಖ್ಯೆ 6363047409, 9380586998, 7483931229, 8296247139 ತುರ್ತು ಸೇವೆಗಾಗಿ ಸಂಪರ್ಕಿಸಿದರೆ ಸೇವಾ ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಟಾಪ್ ನ್ಯೂಸ್

NIA

ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್

joginder sharma

ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ

Supreme Court

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ

1-sadsdasd

ಅದಾನಿ ಗ್ರೂಪ್ ವಿಚಾರದಲ್ಲಿ ಸಂಸತ್ ಉಭಯ ಸದನದಲ್ಲಿ ಕೋಲಾಹಲ

1-saddasd

ರಾಜ್ಯಸಭೆಯ ಕೊನೆಯ ಸಾಲಿಗೆ ಶಿಫ್ಟ್ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ

1-fasdsadsa

ಹಿಂದೂಗಳ ಪರವಾದ ಯಾವುದೇ ಸರ್ಕಾರ ಇಲ್ಲ: ವಿಜಯ್ ರೇವಣ್ಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಶುಲ್ಕ ವಸೂಲಿಗೆ ಸೂಚನೆ

ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಶುಲ್ಕ ವಸೂಲಿಗೆ ಸೂಚನೆ

ಮಣಿಪಾಲ: ಅಮೃತ್‌ ಯುವ ಕಲೋತ್ಸವ ಸಮಾರೋಪ

ಮಣಿಪಾಲ: ಅಮೃತ್‌ ಯುವ ಕಲೋತ್ಸವ ಸಮಾರೋಪ

ಬ್ರಹ್ಮಾವರ: ಮದುವೆಗೆಂದು ತಂದಿಟ್ಟ 7.26 ಲಕ್ಷ ರೂ.ನ ಚಿನ್ನಾಭರಣ ಕಳವು

ಬ್ರಹ್ಮಾವರ: ಮದುವೆಗೆಂದು ತಂದಿಟ್ಟ 7.26 ಲಕ್ಷ ರೂ.ನ ಚಿನ್ನಾಭರಣ ಕಳವು

ಕಲ್ಯಾಣಪುರ ಸಂತೆಕಟ್ಟೆ; ಓವರ್‌ಪಾಸ್‌ ಕಾಮಗಾರಿ ಶುರು

ಕಲ್ಯಾಣಪುರ-ಸಂತೆಕಟ್ಟೆ; ಓವರ್‌ಪಾಸ್‌ ಕಾಮಗಾರಿ ಶುರು

ಮಾಳ ಚೆಕ್ ಪೋಸ್ಟ್ ಬಳಿ ಬೈಕ್, ಟ್ಯಾಂಕರ್ ನಡುವೆ ಅಪಘಾತ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮಾಳ ಚೆಕ್ ಪೋಸ್ಟ್ ಬಳಿ ಬೈಕ್, ಟ್ಯಾಂಕರ್ ನಡುವೆ ಅಪಘಾತ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

MUST WATCH

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

ಹೊಸ ಸೇರ್ಪಡೆ

NIA

ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್

ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

joginder sharma

ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ

Supreme Court

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ

ello jogappa ninna aramane movie

ಅರಮನೆ ಹುಡುಕಾಟದಲ್ಲಿ ಜೋಗಪ್ಪ; ಕಂಬ್ಳಿಹುಳ ನಾಯಕನ ಹೊಸ ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.