ಕಾರ್ಕಳ: ಆಸ್ತಿಯಲ್ಲಿ ಪಾಲು; ಮೊದಲ ಪತ್ನಿ ಮಗನಿಂದ ಹಲ್ಲೆ, ಬೆದರಿಕೆ
Team Udayavani, Feb 2, 2023, 5:43 PM IST
ಕಾರ್ಕಳ: ಆಸ್ತಿಯಲ್ಲಿ ಪಾಲು ನೀಡುವ ವಿಚಾರದಲ್ಲಿ ತನ್ನ ಗಂಡನ ಮೊದಲ ಪತ್ನಿಯ ಮಗ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದಾಗಿ ಮಿಯ್ಯಾರಿನ ಮಂಗಲಪಾದೆ ನಿವಾಸಿ ಶಕುಂತಲಾ ಎಂಬವರು ದೂರು ನೀಡಿದ ಹಿನ್ನಲೆಯಲ್ಲಿ ನಿತೇಶಕುಮಾರ್, ದೀಪಾ, ರೋಶನ್ ಎಂಬವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಕುಂತಲಾ ಮಂಗಳಪಾದೆ ಎಂಬಲ್ಲಿ ಗಂಡ ಬಾಲಕೃಷ್ಣ ಪೂಜಾರಿ ಎಂಬವರೊಂದಿಗೆ ವಾಸವಾಗಿದ್ದರು. ಗಂಡನ ಮೊದಲ ಪತ್ನಿಯ ಮಗ ನಿತೇಶ್ ಕುಮಾರ್ ಆಗಾಗ ತನ್ನ ಹೆಂಡತಿಯೊಂದಿಗೆ ಬಂದು ಆಸ್ತಿಯಲ್ಲಿ ಪಾಲು ಕೊಡಬೇಕೆಂದು ತಕರಾರು ತೆಗೆಯುತ್ತಿದ್ದು, ಅದರಂತೆ ಫೆ. 1ರಂದು ರಾತ್ರಿ ನಿತೇಶ್‌ಕುಮಾರ್ ತನ್ನ ಹೆಂಡತಿ ದೀಪಾ ಮತ್ತು ರೋಶನ್ ಎಂಬವರೊಂದಿಗೆ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ,ನೀವು ಆಸ್ತಿಯನ್ನು ನಮಗೆ ಬಿಟ್ಟುಕೊಡದಿದ್ದರೆ ನಿಮ್ಮಿಬ್ಬರನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆಯೊಡ್ಡಿ ಮೈಮೇಲೆ ಕೈಹಾಕಿ ಮಾನಭಂಗವುಂಟು ಮಾಡಿ, ಹಲ್ಲೆ ನಡೆಸಿದ್ದಾಗಿ ದೂರಿತ್ತ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ