ಹೆಬ್ರಿ- ಕಾರ್ಕಳ ಪರಿಸರದ ಅಡಿಕೆ ತೋಟಕ್ಕೆ ದುಂಬಿ ಬಾಧೆ : ವಿಜ್ಞಾನಿಗಳಿಂದ ಪರಿಶೀಲನೆ

Team Udayavani, Oct 17, 2022, 9:46 AM IST

ಅಡಿಕೆ ತೋಟಕ್ಕೆ ದುಂಬಿ ಬಾಧೆ : ವಿಜ್ಞಾನಿಗಳಿಂದ ಪರಿಶೀಲನೆ

ಕಾರ್ಕಳ/ಹೆಬ್ರಿ : ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಅಂಬ್ರೋಸಿಯಾ ಕೀಟ ಬಾಧೆ ಕಾಣಿಸಿಕೊಂಡಿದೆ.

2018ರಲ್ಲಿ ಪುತ್ತೂರು, ಸುಳ್ಯ ಭಾಗಗಳಲ್ಲಿ ಕಂಡುಬಂದಿದ್ದ ಈ ಬಾಧೆ ಪ್ರಸ್ತುತ ಹೆಬ್ರಿ ತಾಲೂಕಿನ ಮಾಗದ್ದೆ ಹಾಗೂ ಕಾರ್ಕಳದ ಶಿರ್ಲಾಲು ಭಾಗದ ಕೆಲವು ರೈತರ ತೋಟಗಳಲ್ಲಿ ಕಾಣಿಸಿಕೊಂಡಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪ್ರಾದೇಶಿಕ ಕೃಷಿ ಹಾಗೂ ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರದ ವಿಜ್ಞಾನಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ.

ಇದು ಕುಟ್ಟೆ ಜಾತಿಯ ದುಂಬಿ ಯಾಗಿದ್ದು ಯೂಪ್ಲಾಟಿ ಪಸ್ಪಾ ರಾಲ್ಲೆಲಸ್‌ ಎಂದು ಗುರುತಿಸಲ್ಪಟ್ಟಿದೆ. ಸುಮಾರು 4 ಮಿ.ಮೀ. ಉದ್ದವಿದ್ದು ಕಂದು ಬಣ್ಣದ ಶರೀರದೊಂದಿಗೆ ಹಳದಿ ಬಣ್ಣದ ರೋಮಗಳನ್ನು ಹೊಂದಿರುತ್ತದೆ. ಈ ದುಂಬಿಗಳು ಸಸಿ ಗಿಡಗಳಿಗೆ ಹೆಚ್ಚಾಗಿ ಬಾಧೆ ಉಂಟುಮಾಡುತ್ತಿದ್ದು ಪ್ರೌಢ ಹೆಣ್ಣು ದುಂಬಿಯು ಅಡಿಕೆ ಮರದ ಕಾಂಡಗಳ ಮೇಲೆ 1.50 ಮಿ.ಮೀ. ಸುತ್ತಳತೆಯ 1.20ರಿಂದ 4.60 ಸೆ.ಮೀ.ನಷ್ಟು ಅಳದ ರಂದ್ರಗಳನ್ನು ಕೊರೆದು ಪ್ರವೇಶಿಸಿ ಸಂತಾನೋತ್ಪತ್ತಿ ಮುಂದುವರಿಸುತ್ತವೆ. ಪ್ರಥಮ ಹಂತದಲ್ಲಿ ಅಡಿಕೆ ಮರಗಳ ಕಾಂಡದ ಭಾಗದಲ್ಲಿ ಅಲ್ಲಲ್ಲಿ ಕಂದುಬಣ್ಣದ ಅಂಟು ದ್ರವ ಸೋರಿಕೆ ಕಂಡು ಬಂದು ಅಂಟು ದ್ರವದ ತಳಭಾಗದಲ್ಲಿ ಸಣ್ಣ ಗಾತ್ರದ ರಂಧ್ರಗಳು ಕಾಣುತ್ತವೆ. ಇದರಿಂದ ಮರದ ಬೆಳವಣಿಗೆ ಕುಂಠಿತವಾಗುತ್ತದೆ. ಅನಂತರದ ಹಂತಗಳಲ್ಲಿ ನೂರಾರು ರಂದ್ರಗಳಿಂದ ಬಿಳಿ ಬಣ್ಣದ ಪುಡಿ ಉದುರುವಿಕೆ ಪ್ರಾರಂಭವಾಗುತ್ತದೆ. ಮುಂದಿನ ಹಂತದಲ್ಲಿ ಅಡಿಕೆಮರದ ಕೆಳಭಾಗದ ಎಲೆಗಳು ಹಳದಿಯಾಗಿ ಕಳಚಿ ಬೀಳುವ ಸಂಭವವಿರುತ್ತದೆ.

ಈ ದುಂಬಿಯ ಬಾಧೆಯು ಸಾಮಾ ನ್ಯವಾಗಿ ಕಡಿಮೆ ಪ್ರಾಯದ ಗಿಡಗಳಲ್ಲಿ ಹೆಚ್ಚು ಕಂಡುಬರುತ್ತಿದ್ದು ಹೆಚ್ಚು ನೀರಾವರಿ ನೀಡುವ ತೋಟಗಳಲ್ಲಿ, ತಗ್ಗು ಪ್ರದೇಶದ ತೋಟಗಳಲ್ಲಿ ಹಾಗೂ ಅತೀ ಹೆಚ್ಚು ಪೋಷಕಾಂಶ ನೀಡುತ್ತಿರುವ ರೈತರ ತೋಟಗಳಲ್ಲಿ (ಪ್ರಮುಖವಾಗಿ ಸಾರಜನಕಯುಕ್ತ ಸಾವಯವ ಹಾಗೂ ರಾಸಾಯನಿಕ ಗೊಬ್ಬರ) ಹೆಚ್ಚಾಗಿ ಕಂಡು ಬರುತ್ತದೆ. ದುಂಬಿಯ ನಿಯಂತ್ರಣಕ್ಕೆ ಸಮ ತೋಲನ ಸಾವಯವ ಹಾಗೂ ರಾಸಾ ಯನಿಕ ರಸಗೊಬ್ಬರ ಬಳಕೆ, ಸಮರ್ಪಕ ಬಸಿ ಕಾಲುವೆ ಹಾಗೂ ಹದವಾದ ನೀರಾವರಿ ಅವಶ್ಯ. ಬಾಧಿತ ಮರ ಹಾಗೂ ಸುತ್ತಲಿನ ಮರಗಳಿಗೆ ಕ್ಲೋರೊಪೈರಿಫಾಸ್‌ 20 ಇ.ಸಿ. ಕೀಟನಾಶಕವನ್ನು 2 ಮಿ.ಲೀ. ಲೀಟರ್‌ ನೀರಿಗೆ ಬೆರೆಸಿ ಕಾಂಡದ ಭಾಗಕ್ಕೆ ಹಚ್ಚಿ ನಿಯಂತ್ರಿಸಬಹುದು.

ಟಾಪ್ ನ್ಯೂಸ್

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Udupi; ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

15

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.