ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ
Team Udayavani, May 20, 2022, 8:08 PM IST
ಕಾಪು : ಕಟಪಾಡಿ ಮೂಡಬೆಟ್ಟು ಗ್ರಾಮದ ಪಲ್ಲಮಾರು ನಿವಾಸಿ ಶಶಿಧರ್ ಪೂಜಾರಿ (45) ಮೇ 18 ರಾತ್ರಿಯಿಂದ ಮನೆಯಿಂದ ನಾಪತ್ತೆಯಾಗಿದ್ದಾರೆ.
ಪತ್ನಿ, ಮಗ ಮತ್ತು ತಾಯಿಯೊಂದಿಗೆ ವಾಸವಾಗಿದ್ದ ಶಶಿಧರ್ ಪೂಜಾರಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಮೇ 18 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಉಳಿದಿದ್ದರು. ರಾತ್ರಿ ಊಟವಾದ ಬಳಿಕ ಮಲಗದೆ ನನಗೆ ಹೊರಗೆ ಹೋಗಬೇಕು ಎಂದು ಹೇಳಿದ್ದು, 11.30ರ ವೇಳೆಗೆ ಮನೆಯ ಬಾಗಿಲನ್ನು ತೆರೆದಿದ್ದು ತಡೆಯಲು ಹೋದಾಗ ಪತ್ನಿಯನ್ನು ಕೈಯಿಂದ ದೂಡಿ ಹೊರಗೆ ಹೋಗಿದ್ದರು.
ಮನೆಯಿಂದ ಹೊರಗೆ ಹೋಗಿದ್ದ ಅವರನ್ನು ಮನೆಯವರು ಮೂಡಬೆಟ್ಟು, ಶಂಕರಪುರ, ಕಟಪಾಡಿ, ಉದ್ಯಾವರ ಮೊದಲಾದ ಕಡೆಗಳಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದೇ ಕಾಣೆಯಾಗಿದ್ದಾರೆ.
ಈಗ ಬಗ್ಗೆ ಅವರ ಪತ್ನಿ ರೇವತಿ ಪೂಜಾರಿ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಗುಜರಾತ್, ಹಿಮಾಚಲದಲ್ಲೂ ಕಾಂಗ್ರೆಸ್ ಸೋಲು ಖಚಿತ: ಪ್ರಶಾಂತ್ ಕಿಶೋರ್