ಕಿರಿಮಂಜೇಶ್ವರ: ಮಲಗಿದಲ್ಲೇ ವ್ಯಕ್ತಿ ಸಾವು
Team Udayavani, Dec 6, 2022, 12:08 AM IST
ಉಪ್ಪುಂದ: ಬೆಳಗ್ಗೆ ಮಲಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಕಿರಿಮಂಜೇಶ್ವರದಲ್ಲಿ ಡಿ. 4ರಂದು ಸಂಭವಿಸಿದೆ. ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಗಂಗೈಬೈಲು ಬಾಡಿ ಮನೆ ಚಂದ್ರ ಮೊಗವೀರ (39) ಮೃತಪಟ್ಟ ವ್ಯಕ್ತಿ.
ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಚಂದ್ರ ಮೊಗವೀರ ಅವರು ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದು ಬೋಟಿಗೆ ರಜೆ ಇದ್ದ ಕಾರಣ ಡಿ. 4 ರಂದು ಬೆಳಗ್ಗೆ ಮನೆಯಲ್ಲಿ ಮದ್ಯಪಾನ ಸೇವಿಸಿ ಮಲಗಿದ್ದು ಮನೆಯವರು ಮಧ್ಯಾಹ್ನ ಊಟದ ಸಮಯದಲ್ಲಿ ಎಬ್ಬಿಸಲು ಹೊದಾಗ ಏಳದೇ ಇದ್ದಾಗ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.