Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿ ಪ್ರಾರಂಭ

Team Udayavani, Jun 18, 2024, 11:57 PM IST

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್‌- 2024ರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆನ್‌ಲೈನ್‌ ಅಥವಾ ಏಜೆಂಟರ ಮೂಲಕ ನೋಂದಣಿ ಮಾಡಬಹುದು. ಕಳೆದ ವರ್ಷ 3.60 ಲಕ್ಷ ಮಂದಿ ಸೇವೆ ಪಡೆದಿದ್ದು, 16 ಕೋ.ರೂ. ವರೆಗೂ ರಿಯಾಯಿತಿ ನೀಡಲಾಗಿದೆ. ಈ ಬಾರಿ 4 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಹೇಳಿದರು.

ವಿ.ವಿ.ಯ ಆಡಳಿತ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಆರೋಗ್ಯ ಕಾರ್ಡ್‌ ಇಡೀ ಕುಟುಂಬದ ಸದಸ್ಯರಿಗೆ ಸಮಗ್ರ ಆರೋಗ್ಯ ಪ್ರಯೋ ಜನಗಳನ್ನು ಒದಗಿಸಲಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ದಾರ್ಶನಿಕ ಎಂದು ಗುರುತಿಸಲ್ಪಡುವ ದಿ| ಡಾ| ಟಿಎಂಎ ಪೈ ಅವರ ಸಮಾಜಪರ ನಿಲುವು ಸದಾ ಪ್ರೇರಣೆ. ಡಾ| ರಾಮದಾಸ್‌ ಪೈ ನೇತೃತ್ವ ದಲ್ಲಿ 2000ರಲ್ಲಿ ಪ್ರಾರಂಭವಾದ ಈ ಕಾರ್ಡ್‌ ಪರಿಕಲ್ಪನೆ ಜನರಿಗೆ ಕೈಗೆಟ ಕುವ ದರದಲ್ಲಿ ಆರೋಗ್ಯ ಸೇವೆಯನ್ನು ಕಲ್ಪಿಸುವ ಗುರಿ ಹೊಂದಿದೆ ಎಂದರು.

ಗ್ರಾಹಕಸ್ನೇಹಿ ಗುರಿ: ಡಾ| ಶರತ್‌ ಕುಮಾರ್‌
ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜತೆಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು, ಬಳ್ಳಾರಿ ಮತ್ತು ನೆರೆಯ ಕೇರಳ, ಗೋವಾಕ್ಕೆ ಈ ಕಾರ್ಡ್‌ ಅನ್ನು ವಿಸ್ತರಿಸಲಾಗಿದೆ. 2019ರಲ್ಲಿ ಡಿಜಿಟಲ್‌ ಮಾಡಿದ್ದು, ಮುಂಬರುವ ವರ್ಷಗಳಲ್ಲಿ ಸಂಪೂರ್ಣ ಕಾರ್ಡ್‌ ರಹಿತ ಮತ್ತು ಗ್ರಾಹಕ ಸ್ನೇಹಿ ಆಗಿಸು ವುದಾಗಿ ತಿಳಿಸಿದರು.

ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಲಭ್ಯ
ವೈದ್ಯಕೀಯ ಅಧೀಕ್ಷಕ ಡಾ| ಅವಿ ನಾಶ್‌ ಶೆಟ್ಟಿ ಮಾತನಾಡಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರಿನ ಕೆಎಂಸಿ, ಅತ್ತಾವರದ ಕೆಎಂಸಿ, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಹಾಗೂ ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ಈ ಕಾರ್ಡ್‌ನ ಲಾಭ ಪಡೆಯಬಹುದು ಎಂದರು.

ಮಾಹೆ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್‌ ವೇಣುಗೋಪಾಲ್‌, ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್‌ ಉಮಾಕಾಂತ್‌, ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಕೀರ್ತಿ ನಾಥ್‌ ಬಲ್ಲಾಳ್‌, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆ. ಸಚಿನ್‌ ಕಾರಂತ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್‌ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಡ್‌ನ ಸೌಲಭ್ಯಗಳೇನು?
ಮಣಿಪಾಲ ಆರೋಗ್ಯ ಕಾರ್ಡ್‌ಗೆ ಸಂಬಂಧಿಸಿದ ಪೂರ್ಣ ಮಾಹಿತಿ http://www.manipalhealthcard.com ನಲ್ಲಿ ಲಭ್ಯವಿದೆ. ಈ ಕಾರ್ಡ್‌ ದಾರರಿಗೆ ತಜ್ಞ ಮತ್ತು ಸೂಪರ್‌ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ ಶೇ.50 ರಷ್ಟು, ರೋಗನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳಲ್ಲಿ ಶೇ.25, ವಿಕಿರಣಶಾಸ್ತ್ರದ ತನಿಖೆಗಳು, ಹೊರರೋಗಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ.20,ಡಯಾಲಿಸಿಸ್‌ನಲ್ಲಿ 100 ರೂ., ಆಸ್ಪತ್ರೆಯ ಔಷಧಾಲಯಗಳ ಔಷಧಗಳ ಮೇಲೆ ಶೇ.10 ಹಾಗೂ ಜನರಲ್‌ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗ‌ಳಲ್ಲಿ (ಕನ್ಸುಮಬೆಲ್ಸ್ ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ) ಶೇ.25 ರಷ್ಟು ರಿಯಾಯಿತಿ ದೊರೆಯಲಿದೆ.

ಟಾಪ್ ನ್ಯೂಸ್

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Kota-poojary

CM Siddaramaiah; ನನ್ನ ಮೇಲಿನ ಆರೋಪವನ್ನು ಹಿಂಪಡೆಯಬೇಕು: ಕೋಟ

1-sadsad

Udupi ಪ್ರವಾಹ ನಿಗಾಕ್ಕೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ

1-asaas

Udupi ಪ್ರವಾಸೋದ್ಯಮ: ನಿನ್ನೆ, ಇಂದು, ನಾಳೆ ವಿಚಾರಗೋಷ್ಠಿ

Kapu-Accident

Kapu: ಬೈಕ್‌ -ಕಾರು ಮುಖಾಮುಖಿ ಢಿಕ್ಕಿ; ಬೈಕ್‌ ಸವಾರ ಮೃತ್ಯು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Bajpe ಎಕ್ಕಾರು: ಕಲ್ಲಿನ ಕೋರೆ ಕಾರ್ಮಿಕ ಆತ್ಮಹತ್ಯೆ

Bajpe ಎಕ್ಕಾರು: ಕಲ್ಲಿನ ಕೋರೆ ಕಾರ್ಮಿಕ ಆತ್ಮಹತ್ಯೆ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.