Manipal ಸ್ಕೂಟರ್ ಢಿಕ್ಕಿ: ಮಹಿಳೆಗೆ ಗಾಯ
Team Udayavani, Sep 10, 2023, 8:58 PM IST
ಮಣಿಪಾಲ: ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಗಾಯಗೊಂಡ ಘಟನೆ ಎಂ.ಐ.ಟಿ.ಗೇಟ್ ನಂ 7 ರ ಸಮೀಪ ಸಂಭವಿಸಿದೆ.
ಅಪರಿಚಿತನೋರ್ವ ತನ್ನ ಸ್ಕೂಟಿಯನ್ನು ವಿರುದ್ಧ ದಿಕ್ಕಿನಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಾಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗೆ ಕಾರು ಢಿಕ್ಕಿ: ಗಾಯ
ಮಣಿಪಾಲ: ಬೈಕ್ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರರು ಗಾಯಗೊಂಡ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ.
ರಿತಿಕ್ ಅವರು ತನ್ನ ಬೈಕ್ನಲ್ಲಿ ಶ್ರುತಿ ಭೂಷಣ್ ಅವರೊಂದಿಗೆ ಎಂಐಟಿ ಕಾಲೇಜಿನಿಂದ ಟೈಗರ್ ಸರ್ಕಲ್ ಮೂಲಕ ಸಿಂಡಿಕೇಟ್ ಸರ್ಕಲ್ ಕಡೆಗೆ ತೆರಳುತ್ತಿದ್ದಾಗ ಮಣಿಪಾಲದ ಪೋಸ್ಟ್ ಆಫೀಸ್ ಬಳಿ ಆರ್ಎಸ್ಬಿ ಭವನದ ಕಡೆಯಿಂದ ಅತಿ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.