
ಮರವಂತೆ:ಕಡಲಾಮೆ ಮೊಟ್ಟೆಗಳ ಸಂರಕ್ಷಣೆ
Team Udayavani, Mar 21, 2019, 1:00 AM IST

ಉಪ್ಪುಂದ: ಮರವಂತೆ ಸಮೀಪದ ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಸಮುದ್ರ ತೀರದಲ್ಲಿ 101 ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದು ಅವುಗಳನ್ನು ರಕ್ಷಿಸಲಾಗಿದೆ.
ಸಮುದ್ರದಲ್ಲಿರುವ ಅಲಿವ್ ರಿಡ್ಲೆà, ಗ್ರೀನ್ ಟರ್ಟಲ್ ಕಡಲಾಮೆಗಳು ಹೆಚ್ಚಾಗಿ ಮಾರ್ಚ್ ತಿಂಗಳಲ್ಲಿ ಮೊಟ್ಟೆ ಇಡುತ್ತವೆೆ.
ಕಡಲಾಮೆ ಮೊಟ್ಟೆಗಳು ಪತ್ತೆಯಾದ ತಕ್ಷಣ ಸ್ಥಳೀಯರು ಕಡಲಾಮೆ ಸಂರಕ್ಷಣೆ ಕಾರ್ಯನಿರತ ಅಂತಾರಾಷ್ಟ್ರೀಯ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಕಾರ್ಯನಿರತರಿಗೆ ಮಾಹಿತಿ ನೀಡಿದ್ದಾರೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅಧಿಕಾರಿಗಳೊಂದಿಗೆ 101 ಮೊಟ್ಟೆಗಳನ್ನು ಗುರುತಿಸಿ ಸಂರಕ್ಷಿಸಿದ್ದಾರೆ. ಹಾಗೂ ಮೊಟ್ಟೆಗಳ ಬೆಳವಣಿಗೆಗೆ ಹ್ಯಾಚರಿ ನಿರ್ಮಿಸಿದ್ದಾರೆ. ಮೊಟ್ಟೆ ಒಡೆದು ಹೊರಬೀಳುವ ಮರಿಗಳನ್ನು ಪುನಃ ಕಡಲಿಗೆ ಬಿಡಲಾಗುತ್ತದೆ.
ಸ್ಥಳೀಯರಾದ ದಾಮು ಗಣಪತಿ ಖಾರ್ವಿ, ರಾಘವೇಂದ್ರ, ಸದಾಶಿವ, ಸತೀಶ್, ಶೇಖರ ಖಾರ್ವಿ, ಶರತ್, ವಿನೋದ್, ಮಂಜು ಬಿ., ಅಮಿಷಾ, ವಿನೋದ್ ಕಡಲಾಮೆ ಮೊಟ್ಟೆ ರಕ್ಷಣೆಯಲ್ಲಿ ಸಹಕರಿಸಿದ್ದರು.
ಟಾಪ್ ನ್ಯೂಸ್
