ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

  ಹೆಚ್ಚಿನ ಸಂಶೋಧನೆಗೆ ಆರ್ಥಿಕ ಅಡಚಣೆ

Team Udayavani, Feb 26, 2021, 8:49 PM IST

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಉಡುಪಿ/ಪಡುಬಿದ್ರಿ:  ಭಾರತದಲ್ಲಿ ಪ್ರಥಮ ಬಾರಿಗೆ ನೀರಿನಿಂದ ಟೇಕ್‌ ಆಫ್ ಆಗಿ ನೀರಿನಲ್ಲೇ ಲ್ಯಾಂಡ್‌ ಆಗುವ ಅತ್ಯಂತ ಹಗುರದ ಮೈಕ್ರೋ ಸೀಪ್ಲೇನ್‌ ಅನ್ನು ಹೆಜಮಾಡಿಯಲ್ಲಿ 8 ಮಂದಿ ಎಂಜಿನಿಯರಿಂಗ್‌ ಪದವೀಧರರ ತಂಡವು ಸಂಶೋಧನೆ ನಡೆಸಿ ಹಾರಿಸಿ ಸಾಧನೆ ಮಾಡಿದೆ.

ಈ ಸೀಪ್ಲೆ„ನ್‌ ದೇಶ ರಕ್ಷಣೆ, ನೆರೆ ಸಂದರ್ಭ ಬಳಕೆ, ಪ್ರವಾಸೋದ್ಯಮ ಬಳಕೆಗೆ  ಅನುಕೂಲವಾಗುವಂತಿದೆ. ಸ್ಥಳೀಯ ನೆರವನ್ನಷ್ಟೇ ಬಳಸಿಕೊಂಡು ಉತ್ಸಾಹಿಗಳ ತಂಡ ಈ ಸಾಧನೆ ಮಾಡಿದ್ದು, ಹೆಚ್ಚಿನ ಸಂಶೋಧನೆಯ ಅಗತ್ಯವನ್ನು ಮನಗಂಡಿದೆ.

ಈ ತಂಡದ ಮುಖ್ಯಸ್ಥರು ಪುಷ್ಪರಾಜ್‌ ಅಮೀನ್‌ ನರಿಕುದ್ರು. ಡ್ರೋನ್‌ ಪೈಲೆಟ್‌ ಆಗಿರುವ ಅಭಿಷೇಕ್‌ ಕೋಟ್ಯಾನ್‌, ಟ್ರೈನಿ ಪೈಲಟ್‌ ಆಗಿರುವ ವಿನಯ್‌ ಯು., ಸಂತ ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿನಿ ಅಶ್ವಿ‌ನಿ ರಾವ್‌, ಏರೋನಾಟಿಕಲ್‌ ಎಂಜಿನಿಯರ್‌ ಆಗಿರುವ ಶಯನಿ ರಾವ್‌, ರೇಶ್ಮಾ ಜೆ. ಬಂಗೇರ ಹೆಜಮಾಡಿ, ವಸುರಾಜ್‌ ಅಮೀನ್‌ ನಡಿಕುದ್ರು, ಏರೋನಾಟಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಆಗಿರುವ ಉತ್ಸವ್‌ ಯು. ಅವರನ್ನು ಸೇರಿಸಿಕೊಂಡು, ಹೊಸ ಅನ್ವೇಷಣೆ ಮಾಡಲಾಗಿದೆ.

ನೆರವಿಗೆ ಯಾಚನೆ  :

ಹೆಚ್ಚಿನ ಸಂಶೋಧನೆ, ಸುಧಾರಿತ ಸೀಪ್ಲೇನ್‌ ತಯಾರಿಗೆ ಆರ್ಥಿಕ ಸಂಕಷ್ಟವಿದ್ದು ಸಂಘ-ಸಂಸ್ಥೆಗಳು, ಸರಕಾರದ ನೆರವಿನ ಅಗತ್ಯವಿದೆ ಎಂದು ತಂಡದ ಮುಖ್ಯಸ್ಥ  ಪುಷ್ಪರಾಜ್‌ ಅಮೀನ್‌ ನರಿಕುದ್ರು ಅವರು ಶುಕ್ರವಾರ ನಡೆದ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಭಿಷೇಕ್‌ ಎಂ. ಕೋಟ್ಯಾನ್‌ ಉಳ್ಳಾಲ ಮಾತನಾಡಿ, ಇನ್ನಷ್ಟು ಸಂಶೋಧನೆಗೆ ಯಂತ್ರೋಪಕರಣಗಳು, ಸೇಫ್ಟಿ ಕಿಟ್‌ ಇನ್ನಿತರ ಸೌಕರ್ಯವನ್ನು ವ್ಯವಸ್ಥೆಗೊಳಿಸಬೇಕಿದೆ. ಇದನ್ನು ಸರಕಾರ ಮಾಡಿದೆ, ಇನ್ನಷ್ಟು ಸಾಧಿಸುವ ಉತ್ಸಾಹವಿದೆ ಎಂದರು. ಸರಕಾರ ವ್ಯವಸ್ಥೆಗೊಳಿಸಿದರೆ ಮತ್ತಷ್ಟು ಸಾಧಿಸುವ ಹುಮ್ಮಸ್ಸಿದೆ ಎಂದರು.

ಉತ್ಸವ್‌ ಉಮೇಶ್‌ ಮಂಗಳೂರು, ಶಯಾನಿ ರಾವ್‌ ಶೃಂಗೇರಿ, ಅಶ್ವಿ‌ನಿ ರಾವ್‌ ಶೃಂಗೇರಿ, ವಿನಯ್‌ ಯು. ಶಿವಮೊಗ್ಗ, ವಸುರಾಜ್‌ ಅಮೀನ್‌ ನರಿಕುದ್ರು, ರೇಷ್ಮಾ ಜೆ. ಬಂಗೇರ ಹೆಜಮಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

7 ಲಕ್ಷ  ರೂ. ವೆಚ್ಚ  :

ಸೀಪ್ಲೇನ್‌ ತಯಾರಿಸಲು ಸರಿಯಾದ ಸ್ಥಳಾವಕಾಶ, ವರ್ಕ್‌ಶಾಪ್‌ ಇಲ್ಲದೆ, 3 ವರ್ಷಗಳಿಂದ ಹೆಜಮಾಡಿಯಲ್ಲಿ ಇದರ ತಯಾರಿ ನಡೆದಿದೆ. ಈವರೆಗೆ ಮನೆಯವರು ಮತ್ತು ನೆರೆಹೊರೆಯವರಿಂದ ಸಾಲ ಮಾಡಿ  7 ಲ.ರೂ. ವೆಚ್ಚ ಮಾಡಲಾಗಿದೆ. ಇದಕ್ಕೆ ಬೇಕಾದ ಅವಶ್ಯ ಕೆಲವು ಸಾಮಗ್ರಿಗಳನ್ನು ಮಾತ್ರ ವಿದೇಶದಿಂದ ತರಿಸಿಕೊಳ್ಳಲಾಗಿದೆ. ಸುಮಾರು 180 ಕೆಜಿ ತೂಕವಿರುವ ಈ ಸೀಪ್ಲೇನ್‌ 5 ಮೀ. ಉದ್ದವಿದ್ದು, ಇದರ ರೆಕ್ಕೆ 5 ಅಡಿ ಉದ್ದವಿದೆ. ಇದಕ್ಕೆ ಇಂಧನವಾಗಿ ಪೆಟ್ರೋಲ್‌ ಬಳಸಲಾಗುತ್ತದೆ. ತಂಡ ಈವರೆಗೆ ಪೇಟೆಂಟ್‌ಗೆ ಮಾಡಿಲ್ಲ. 200 ಕೆ.ಜಿ. ಮೇಲ್ಪಟ್ಟ ಸೀಪ್ಲೇನ್‌, ಸ್ಪೀಡ್‌ಬೋಟ್‌ ಮತ್ತು ಎಲೆಕ್ಟ್ರಿಕ್‌ ಮಾದರಿಯ ತಯಾರಿಕೆಗೆ ಉತ್ಸಾಹ ಹೊಂದಿದ್ದು ಆಗ ಪೇಟೆಂಟ್‌, ಲೈಸೆನ್ಸ್‌ಗಳಿಗೆ ಪ್ರಯತ್ನಿಸುವುದಾಗಿ ತಂಡ ಹೇಳಿಕೊಂಡಿದೆ.

ಟಾಪ್ ನ್ಯೂಸ್

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Udupi; ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.