ಕಾಂಗ್ರೆಸ್‌ನವರಿಗೆ ಮತದಾರರೇ ಸರಿಯಿಲ್ಲ ಎನಿಸೀತು: ಸಚಿವ ಸುನಿಲ್‌ ಕುಮಾರ್‌ ವ್ಯಂಗ್ಯ

Team Udayavani, Dec 4, 2022, 5:50 AM IST

ಕಾಂಗ್ರೆಸ್‌ನವರಿಗೆ ಮತದಾರರೇ ಸರಿಯಿಲ್ಲ ಎನಿಸೀತು: ಸಚಿವ ಸುನಿಲ್‌ ಕುಮಾರ್‌ ವ್ಯಂಗ್ಯ

ಉಡುಪಿ : ಕಾಂಗ್ರೆಸ್‌ಗೆ ಆರೋಪ ಮಾಡುವುದರಲ್ಲಿ ಗಂಭೀರತೆ ಇದೆಯೇ ಹೊರತು, ವಾಸ್ತವತೆ ಅರಿಯುವುದರಲ್ಲಿ ಇಲ್ಲ. ಈ ಹಿಂದೆ ಮತದಾನ ಯಂತ್ರ ಸರಿಯಿಲ್ಲ ಎಂದಿದ್ದರು, ಈಗ ಮತದಾರ ಪಟ್ಟಿ ಸರಿಯಿಲ್ಲ ಎನ್ನುತ್ತಿದ್ದಾರೆ. 2024ರ ವೇಳೆಗೆ ಮತದಾರರೇ ಸರಿಯಿಲ್ಲ ಎನ್ನಬಹುದು ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದರು.
ಉಡುಪಿಯಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಜನ ಮಾನಸದಿಂದ ಸಂಪೂರ್ಣ ದೂರವಾಗಿದೆ. ಚುನಾವಣೆಯಲ್ಲಿ ಸೋತಾಗಲೆಲ್ಲ ಒಂದೊಂದು ಆರೋಪ ಮಾಡುವುದು ಸಾಮಾನ್ಯ ವಾಗಿಬಿಟ್ಟಿದೆ. ಈಗ ಮತದಾರರ ಪಟ್ಟಿ ಸರಿಯಿಲ್ಲ ಎನ್ನುತ್ತಿದ್ದಾರೆ ಎಂದರು.

ಕಾರ್ಕಳದಲ್ಲೇ ಸ್ಪರ್ಧೆ
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನವರು ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ವೈಯಕ್ತಿಕ ಟೀಕೆ, ಸರಕಾರ ಹಾಗೂ ಶಾಸಕ, ಸಚಿವರ ವಿರುದ್ಧ ಅಪಪ್ರಚಾರ, ಸುಳ್ಳು ಆರೋಪ ಮಾಡವುದರಲ್ಲಿ ನಿರತರಾಗುತ್ತಾರೆ. ಸುನಿಲ್‌ ಕುಮಾರ್‌ ಬೇರೆ ಕಡೆ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಕಾಂಗ್ರೆಸ್‌ನವರೇ ಹಬ್ಬಿಸಿದ್ದು. ನಾನು ಪಕ್ಷದಿಂದ ಕಾರ್ಕಳದಲ್ಲೇ ಟಿಕೆಟ್‌ ನೀಡಬೇಕು ಎಂದು ಕೋರಿಕೊಂಡಿದ್ದೇನೆ ಹಾಗೂ ಕಾರ್ಕಳದಿಂದಲೇ ರಾಜಕೀಯ ಆರಂಭಿ ಸಿದ್ದು, ಇಲ್ಲಿಯೇ ಮುಂದು ವರಿಯಲಿದ್ದೇನೆ ಎಂದು ತಿಳಿಸಿದರು.

ರೌಡಿಗಳಿಗೆ ಅವಕಾಶವಿಲ್ಲ
ರೌಡಿಗಳನ್ನು ಅಥವಾ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಪಕ್ಷಕ್ಕೆ ಆಹ್ವಾನಿ ಸುವ ಪ್ರಶ್ನೆಯೇ ಇಲ್ಲ ಮತ್ತು ಅಂಥವರನ್ನು ವೈಭವಿಕರಿಸುವುದು ಸರಿಯಲ್ಲ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಸೂಕ್ತ ನಿರ್ದೇಶನ ನೀಡಿದ್ದಾರೆ. ಸಣ್ಣಪುಟ್ಟ ತಪ್ಪುಗಳು ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.

ವಿದ್ಯುತ್‌ ದರ ಇಳಿಸಲು ಕ್ರಮ
ರಾಜ್ಯದಲ್ಲಿ ಇಂಧನ ಇಲಾಖೆಯಿಂದ ಸಾಕಷ್ಟು ಸುಧಾರಣೆ ತರುತ್ತಿದ್ದೇವೆ. ಈಗಾಗಲೇ ಎಲ್‌ಎನ್‌ಡಿಯಿಂದ ಆಗಿರುವ ನಷ್ಟ ಪತ್ತೆ ಮಾಡಿ ಅದನ್ನು ಸರಿದೂಗಿಸುವ ಹಾಗೂ ನಷ್ಟ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳ ಜತೆಗೆ ಮಾತುಕತೆ ಮಾಡಿದ್ದೇವೆ. ಇಂಧನ ಇಲಾಖೆಯ ಶುಲ್ಕ/ಟ್ಯಾರಿಫ್ ಕಡಿಮೆ ಮಾಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದೇವೆ. ಈಗಾಗಲೇ ಎಸ್ಕಾಂ ಇದೇ ವಿಚಾರವಾಗಿ ಮುಂದೆ ಬಂದಿದೆ. 70 ಪೈಸೆಯಿಂದ 20 ರೂ. ವರೆಗೂ ಕಡಿಮೆ ಮಾಡುವ ಪ್ರಸ್ತಾವನೆ ಮುಂದಿಟ್ಟಿದೆ. ಕೆಲವು ದಿನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಈ ಮೂಲಕ ಜನಸ್ನೇಹಿ ಆಡಳಿತ ನೀಡಲಿದ್ದೇವೆ. ಈಗಾಗಲೇ 100ಕ್ಕೂ ಅಧಿಕ ಸಬ್‌ಸ್ಟೇಷನ್‌ ಉನ್ನತೀಕರಿಸಿ, 40 ಹೊಸ ಸಬ್‌ಸ್ಟೇಷನ್‌ ಆರಂಭಿಸಿದ್ದೇವೆ ಎಂದು ಸಚಿವ ಸುನಿಲ್‌ ಕುಮಾರ್‌ ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

1-sadsadsd

ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ: ಮಮತಾ ಬ್ಯಾನರ್ಜಿ

ಅಧಿಕ ಲಾಭಾಂಶ ನೀಡುವುದಾಗಿ ಹಣ ಪಡೆದು ಎನ್ ಐಟಿಕೆ ವಿದ್ಯಾರ್ಥಿಯಿಂದ 27.96 ಲ.ರೂ ವಂಚನೆ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

goa budget

ಗೋವಾ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂದಾರ್ತಿ ದೇವಸ್ಥಾನಕ್ಕೆ ರಜತ ರಥ ಸಮರ್ಪಣೆ

ಮಂದಾರ್ತಿ ದೇವಸ್ಥಾನಕ್ಕೆ ರಜತ ರಥ ಸಮರ್ಪಣೆ

ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ನಾಲ್ವರು ಅಧಿಕಾರಿ, ಸಿಬಂದಿಗೆ ಮುಖ್ಯಮಂತ್ರಿ ಪದಕ

ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ನಾಲ್ವರು ಅಧಿಕಾರಿ, ಸಿಬಂದಿಗೆ ಮುಖ್ಯಮಂತ್ರಿ ಪದಕ

ಆಸ್ಟ್ರೇಲಿಯಾದ ಸ್ಟೀರಿಂಗ್‌ ಕಮಿಟಿ ಸಭೆ: ರಘುವೀರ್‌ ಪೈಗೆ ಆಹ್ವಾನ

ಆಸ್ಟ್ರೇಲಿಯಾದ ಸ್ಟೀರಿಂಗ್‌ ಕಮಿಟಿ ಸಭೆ: ರಘುವೀರ್‌ ಪೈಗೆ ಆಹ್ವಾನ

ಕುತ್ಯಾರು: ತಿಂಗಳ ಹಿಂದೆ ಖರೀದಿಸಿದ ರಿಕ್ಷಾದಲ್ಲಿ ಬಾಡಿಗೆ ಹೋದ ವ್ಯಕ್ತಿ ನಾಪತ್ತೆ

ಕುತ್ಯಾರು: ತಿಂಗಳ ಹಿಂದೆ ಖರೀದಿಸಿದ ರಿಕ್ಷಾದಲ್ಲಿ ಬಾಡಿಗೆ ಹೋದ ವ್ಯಕ್ತಿ ನಾಪತ್ತೆ

ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ

ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-sasdsad

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

1-asdsdsd

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

1-qe21ew2qe

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್