ನಂದಿನಿ: ಹೊಸ ಐಸ್‌ಕ್ರೀಂ ಬಿಡುಗಡೆ
Team Udayavani, Apr 11, 2019, 6:38 AM IST
ಮಣಿಪಾಲ: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ (ಕೆಎಂಎಫ್) ನಂದಿನಿ ಹೊಸ ಮಾದರಿಯ 23 ಐಸ್‌ಕ್ರೀಂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಮೃತ್ಯುಂಜಯ ಟಿ. ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, 12 ವೆರೈಟಿ ಕಪ್ ಐಸ್‌ಕ್ರೀಂಗಳು, 10-18 ಸ್ಟಿಕ್ಸ್ ಐಸ್‌ಕ್ರೀಂ ವೆರಿಯಂಟ್ಸ್, ವಿಶೇಷವಾದ ನಾವೆಲ್ಟಿàಸ್ ಹಾಗೂ 36 ಟಬ್ಸ್ ಐಸ್‌ಕ್ರೀಂಗಳು ಮಾರುಕಟ್ಟೆಗೆ ಬಿಡುಗಡೆ ಯಾಗಿವೆ ಎಂದರು.
ಮ್ಯಾಂಗೋ ರಿಪ್ಪಲ್ ಸಂಡೇ, ಬ್ಲಾ ಕ್
ಕರೆಂಟ್, ಮಲೈ ಕುಲ್ಫಿ, ಕೇಸರ್ ಬಾದಾಮ್, ಶಾಹೀ ಬೋಗ್, ರಾಜ್ ಬೋಗ್, ಚೀಸಿ ಆಲ್ಮಂಡ್, ನಟ್ಟಿ ಹನೀ, ಫ್ರೂಟ್ ಬೊನಾಂಜಾ ಟಬ್ ಐಸ್‌ಕ್ರೀಂಗಳಿದ್ದು, ಲೆಮನ್ ಲಾಲಿ, ಲೀಚಿ, ಪಿಂಕ್ ಲೆಮನ್ ಕ್ಯಾಂಡಿ, ಸ್ಯಾಂಡ್‌ವಿಚ್ ಐಸ್‌ಕ್ರೀಂ ಮುಂದೆ ಮಾರುಕಟ್ಟೆಗೆ ಬರಲಿವೆ ಎಂದರು.
ಐಸ್‌ಕ್ರೀಂ ಹಬ್ಬ
ಬೆಂಗಳೂರು ಮದರ್ ಡೇರಿ, ಬಳ್ಳಾರಿ ಹಾಗೂ ಹಾಸನ ಹಾಲು ಒಕ್ಕೂಟ ಉತ್ಪಾದಿಸುತ್ತಿರುವ ನಂದಿನಿ ಬ್ರ್ಯಾಂಡ್ ನ 92 ಮಾದರಿ ಐಸ್‌ಕ್ರೀಂಗಳು ಮಾರುಕಟ್ಟೆಯಲ್ಲಿದ್ದು, 23 ಹೊಸ ಐಸ್‌ಕ್ರೀಂ ಉತ್ಪನ್ನಗಳು ಹೊರಬರುತ್ತಿವೆ. ಈ ಎಲ್ಲ ಉತ್ಪನ್ನಗಳು ಎ. 9ರಿಂದ ರಾಜ್ಯಾದ್ಯಂತ ಲಭ್ಯವಿದ್ದು, ಆ ಮೂಲಕ “ನಂದಿನಿ ಐಸ್‌ಕ್ರೀಂ ಹಬ್ಬ’ವನ್ನು ಆಚರಿಸಲಿದ್ದೇವೆ ಎಂದರು.
ಮಾಲ್‌ಗಳಲ್ಲೂ ಲಭ್ಯ
ರಾಜ್ಯ ಹಾಗೂ ದೇಶದ ಪ್ರಮುಖ ನಗರಗಳ ಮಾಲ್‌ಗಳಲ್ಲಿ, ಐಟಿ ಪಾರ್ಕ್‌ಗಳಲ್ಲಿ, ಫುಡ್‌ಕೋರ್rಗಳಲ್ಲಿ, ವಿಮಾನ ನಿಲ್ದಾಣ, ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ನಂದಿನಿ ಬ್ರ್ಯಾಂಡ್ ನ ಇತರ ಉತ್ಪನ್ನಗಳ ಜತೆ ಐಸ್‌ಕ್ರೀಂ ಉತ್ಪನ್ನಗಳನ್ನು ಮಾರಾಟ ಮಾಡಲು ಕ್ರಮ ಕೈಗೊಂಡಿದ್ದೇವೆ. ನೆರೆಯ ಆಂಧ್ರ, ತೆಲಂಗಾಣ, ಗೋವಾ, ಕೇರಳ,
ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಐಸ್‌ಕ್ರೀಂ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರೆಡಿ ಟು ಈಟ್ ಫುಡ್ಸ್
ನಂದಿನಿ ಗ್ರಾಹಕರಿಗೆ ರೆಡಿ ಟು ಈಟ್ಸ್ ಫುಡ್‌ಗಳನ್ನು ಪರಿಚಯಿಸುವ ಉದ್ದೇಶ ಹೊಂದಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ