

Team Udayavani, Jul 28, 2019, 5:50 AM IST
ಉಡುಪಿ: ಕರಾವಳಿ ಬೈಪಾಸ್ ಜಂಕ್ಷನ್ ಮೇಲ್ಸೇತುವೆ ಸಂಚಾರ ಮುಕ್ತವಾಗಿ ವರ್ಷ ಸಮೀಪಿಸುತ್ತಿದೆ. ಆದರೆ ಕಾಮಗಾರಿ ವಹಿಸಿಕೊಂಡಿರುವ ನವಯುಗ ಸಂಸ್ಥೆ ಫ್ಲೈ ಓವರ್‌ಗೆ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಗೋಜಿಗೆ ಹೋಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿ ಗಮನ ಹರಿಸಿಲ್ಲ.
2015ರ ಅಂತ್ಯದಲ್ಲಿ ಆರಂಭವಾದ 800 ಮೀಟರ್ ಮೇಲ್ಸೇತುವೆ ಕಾಮಗಾರಿ ಸತತ ಮೂರು ವರ್ಷಗಳ ಕಾಲ ಕುಂಟುತ್ತಾ ತೆವಳುತ್ತ ಸಾಗಿತ್ತು. ಇದು ಹಲವು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಇದರಿಂದಾಗಿ ನವಯುಗ 2018ರ ಕೊನೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಮೇಲ್ಸೇತುವೆಗೆ ಅಳವಡಿಸಲಾದ ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ.
ಅಂಡರ್‌ಪಾಸ್ ಕತ್ತಲು
ಉಡುಪಿ ನಗರದ ಮೂಲಕ ಮಲ್ಪೆ, ಕುಂದಾಪುರ, ಮುಂಬೈ, ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗೆ ತೆರಳುವ ದ್ವಿಚಕ್ರ, ಕಾರು, ಬಸ್‌ಗಳು ಕರಾವಳಿ ಜಂಕ್ಷನ್ ಫ್ಲೈವರ್ ಅಂಡರ್ ಪಾಸ್ ಮೂಲಕ ಹಾದುಹೋಗಬೇಕಾಗಿದೆ. ಪಾದಚಾರಿಗಳು ಕರಾವಳಿ ಬಸ್ ನಿಲ್ದಾಣಕ್ಕೆ ಅಂಡರ್ ಪಾಸ್ ಅವಲಂಬಿಸಬೇಕಾಗಿದೆ. ಆದರೆ ಅಂಡರ್ ಪಾಸಿನಲ್ಲಿ ಒಳಗಡೆ ಸಹ ವಿದ್ಯುತ್ ದೀಪ ಅಳವಡಿಸದೆ ಇರುವುದರಿಂದ ಸಂಜೆಯಾದರೆ ಸಾಕು ಇಡೀ ಕರಾವಳಿ ಕತ್ತಲ ಕೂಪಕ್ಕೆ ಜಾರುತ್ತದೆ. ಕತ್ತಲಿನಲ್ಲಿ ಮಹಿಳೆಯರು ಅಂಡರ್ ಪಾಸ್ ಮೂಲಕ ಸಂಚರಿಸಲು ಪರದಾಡುತ್ತಿದ್ದಾರೆ.
ಹಗಲಿನಲ್ಲಿ ಉರಿಯುವ ದೀಪ
ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಹೈ ಮಾಸ್ಟ್ ದೀಪ ಹಾಗೂ ಫ್ಲೈಓವರ್ ವಿದ್ಯುತ್ ಕಂಬಗಳು ರಾತ್ರಿಗಿಂತ ಹಗಲಿನಲ್ಲಿ ಹೆಚ್ಚು ಬೆಳಗುತ್ತದೆ. ಈ ಬಗ್ಗೆ ಸ್ಥಳೀಯರು ನವ ಯುಗ ಸಂಸ್ಥೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸೇತುವೆಯಲ್ಲಿ ಬೆಳಗದ ದೀಪಗಳು
ಹೇರೂರು ಹಾಗೂ ಕಲ್ಯಾಣಪುರ ಸೇತುವೆಯಲ್ಲಿ ವಿದ್ಯುತ್ ದೀಪಗಳು ಕೆಟ್ಟು ಆರು ತಿಂಗಳು ಕಳೆದಿದೆ. ಈ ಎರಡು ಸೇತುವೆಗಳಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
Ad
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
ಭಾರತ-ಪಾಕ್ ಯುದ್ಧ ನಿಲ್ಸಿದ್ದು ಟ್ರಂಪ್: ಅಮೆರಿಕ ವಿದೇಶಾಂಗ ಸಚಿವ
Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್
You seem to have an Ad Blocker on.
To continue reading, please turn it off or whitelist Udayavani.