
ಚುನಾವಣೆ ಚಟುವಟಿಕೆ ಬಿರುಸು: ಪೊಲೀಸರ ತಪಾಸಣೆ ಕಾರ್ಯ ಚುರುಕು
Team Udayavani, Apr 2, 2023, 6:32 AM IST

ಉಡುಪಿ: ಚುನಾವಣೆ ಚಟುವಟಿಕೆ ಬಿರುಸುಗೊಂಡಿರುವ ಮಧ್ಯೆ ಪೊಲೀಸರು ತಪಾಸಣೆ ಕಾರ್ಯ ವನ್ನು ಮತ್ತಷ್ಟು ಚುರುಕು ಗೊಳಿಸಿದ್ದಾರೆ.
ಬೈಂದೂರು ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿ, ಕುಂದಾ ಪುರ ಕ್ಷೇತ್ರದ ಹಾಲಾಡಿ, ಕಂಡಲೂರು, ತೆಕ್ಕಟ್ಟೆ, ಉಡುಪಿ ಕ್ಷೇತ್ರದ ನೇಜಾರು, ಉದ್ಯಾವರ ಬಲೈಪಾದೆ, ಅಲೆವೂರು, ಕಾಪು ಕ್ಷೇತ್ರದ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರು, ಕಾರ್ಕಳ ಕ್ಷೇತ್ರದ ನಾಡಾ³ಲು, ಸೋಮೇಶ್ವರ, ಸಾಣೂರು, ಮುರತ್ತಂಗಡಿ, ಈದು, ಹೊಸ್ಮಾರು, ಬೆಳ್ಮಣ್‌ಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ದಿನವಿಡೀ ಮೂರು ತಂಡಗಳು ತಪಾಸಣೆಯಲ್ಲಿ ಕಾರ್ಯ ನಿರತವಾಗಿವೆ.
ವಿವಿಧೆಡೆ ತಪಾಸಣೆ
ಚೆಕ್‌ಪೋಸ್ಟ್‌ಗಳಲ್ಲಷ್ಟೇ ಅಲ್ಲದೆ ನಗರದ ಆಯಕಟ್ಟಿನ ಪ್ರದೇಶಗಳು, ಗೋದಾಮುಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ. ಮತದಾರರಿಗೆ ಆಮಿಷ ವೊಡ್ಡಲು ವಸ್ತುಗಳ ದಾಸ್ತಾನು, ನಗದು, ಮದ್ಯ ಸಾಗಾಟದ ಮೇಲೂ ನಿಗಾ ಇರಿಸಲಾಗಿದೆ. ದಾಖಲೆಗಳಿಲ್ಲದೆ ವಸ್ತುಗಳಿದ್ದರೆ ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
