ಪಿಯುಸಿ ದಾಖಲಾತಿ: ವಾಣಿಜ್ಯ, ವಿಜ್ಞಾನಕ್ಕೆ ಹೆಚ್ಚು ಬೇಡಿಕೆ

Team Udayavani, Jun 3, 2022, 11:02 AM IST

students

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಪ್ರಕಟಗೊಂಡ ಮಾರನೇ ದಿನದಿಂದ ಪ್ರಥಮ ವರ್ಷದ ಪದವಿಪೂರ್ವ ತರಗತಿಗೆ ದಾಖಲಾತಿ ಪ್ರಕ್ರಿಯೆ ಶುರುವಾಗಿದೆ. ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ ದಾಖಲಾತಿಗೆ ವಿದ್ಯಾರ್ಥಿಗಳು ಪಾಲಕ, ಪೋಷಕರೊಂದಿಗೆ ಕಾಲೇಜಿನಲ್ಲಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಬಹುತೇಕ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಿದೆ.

ಜಿಲ್ಲೆಯಲ್ಲಿ 44 ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 24ರಲ್ಲಿ ವಿಜ್ಞಾನ ವಿಭಾಗವಿದ್ದು, ಉಳಿದ 20ರಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗವಿದೆ. ವಿಜ್ಞಾನ ವಿಭಾಗ ಇರುವ ಕೆಲವು ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗವೂ ಇದೆ. 15 ಅನುದಾನಿತ ಪಿಯು ಕಾಲೇಜುಗಳಲ್ಲಿ ವಿಜ್ಞಾನ ಹಾಗೂ 3 ಅನುದಾನಿತ ಪಿಯು ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗ ಬೋಧಿಸಲಾಗುತ್ತಿದೆ. ಕೆಲವು ಕಡೆ ಮೂರೂ ವಿಭಾಗಗಳಿವೆ. 32 ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ವಿಜ್ಞಾನ ಮತ್ತು 13 ಪಿಯು ಕಾಲೇಜುಗಳಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗ ಲಭ್ಯವಿದೆ. ಗ್ರಾಮೀಣ ಭಾಗದ ಬಹುತೇಕ ಪಿಯು ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಹೆಚ್ಚಿದೆ.

ವಾಣಿಜ್ಯ ವಿಭಾಗದಲ್ಲಿ ಆಸಕ್ತಿ

ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಪಿಯುಸಿ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಿದೆ. ಸುಮಾರು ಶೇ.45ಕ್ಕೂ ಅಧಿಕ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗ ಸೇರಿಕೊಳ್ಳುತ್ತಿದ್ದಾರೆ. ಸುಮಾರು ಶೇ.35ರಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಹಾಗೂ ಸುಮಾರು ಶೇ.20ರಷ್ಟು ವಿದ್ಯಾರ್ಥಿಗಳು ಕಲಾ ವಿಭಾಗಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. ವಾಣಿಜ್ಯ ವಿಭಾಗದ ಜತೆಗೆ ಐಟಿಐ, ಡಿಪ್ಲೊಮಾ ಕೋರ್ಸ್‌ಗಳಿಗೂ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಇನ್‌ಟೇಕ್‌ ಹೆಚ್ಚಿಸಲು ಕ್ರಮ

ಸರಕಾರ ಪಿಯು ಕಾಲೇಜುಗಳಲ್ಲಿ ಯಾವ ವಿದ್ಯಾರ್ಥಿಗೂ ದಾಖಲಾತಿ ನಿರಾಕರಣೆ ಮಾಡಲು ಸಾಧ್ಯವಿಲ್ಲ. ಎಸೆಸೆಲ್ಸಿಯಲ್ಲಿ ಕನಿಷ್ಠ ಅಂಕಗಳೊಂದಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗೂ ಪ್ರವೇಶಾತಿ ಕಲ್ಪಿಸಲಾಗುತ್ತದೆ. ಆದರೆ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯ ವಿಭಾಗ ಸಿಗಲಿದೆ. ಖಾಸಗಿ ಮತ್ತು ಅನುದಾನಿತ ಪಿಯು ಕಾಲೇಜುಗಳು ಪ್ರತೀ ವರ್ಷ 80 ಇನ್‌ಟೇಕ್‌ ಇರುತ್ತದೆ. ಶೇ.20ರಷ್ಟು ಇನ್‌ಟೇಕ್‌ ಹೆಚ್ಚಳಕ್ಕೆ ಜಿಲ್ಲಾಮಟ್ಟದಿಂದಲೇ ಅನುಮತಿ ನೀಡಲಾಗುವುದು. ಅದಕ್ಕಿಂತ ಜಾಸ್ತಿ ಇನ್‌ಟೇಕ್‌ಗೆ ಇಲಾಖೆಯ ಕೇಂದ್ರ ಕಚೇರಿಯಿಂದಲೇ ಅನುಮತಿ ಪಡೆಯಬೇಕು. ಇನ್‌ಟೇಕ್‌ ಹೆಚ್ಚಿಸಲು ಪ್ರಸ್ತಾವನೆಗಳು ಬರುತ್ತಿವೆ. ವಾಣಜ್ಯ ವಿಭಾಗಕ್ಕೆ ಇನ್‌ಟೇಕ್‌ ಹೆಚ್ಚಿಸಿಕೊಳ್ಳಲು ಅವಕಾಶ ಕೋರುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದಾಖಲಾತಿ ಪ್ರಕ್ರಿಯೆ

ಜಿಲ್ಲೆಯ ಎಲ್ಲ ಪಿಯು ಕಾಲೇಜುಗಳಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದೆ. ವಿಜ್ಞಾನ ವಿಭಾಗದಲ್ಲೂ ವಿದ್ಯಾರ್ಥಿಗಳು ಆಸಕ್ತಿಯಿಂದ ಸೇರಿಕೊಳ್ಳುತ್ತಿದ್ದಾರೆ. ಕಲಾ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಮಾರುತಿ, ಡಿಡಿಪಿಯು, ಉಡುಪಿ

Ad

ಟಾಪ್ ನ್ಯೂಸ್

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆKasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

“ಶಾಂತಿ’ ಪ್ರಶಸ್ತಿಗೆ ಟ್ರಂಪ್‌ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್‌ ಟೀಕೆ

Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್‌ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharan–high-court

ದ್ವೇಷಭರಿತ ಹೇಳಿಕೆ ಪ್ರಕರಣ: ಹಿಂದೂ ಮುಖಂಡ ಶರಣ್‌ ಪಂಪ್‌ವೆಲ್‌ ಬಂಧನಕ್ಕೆ ಹೈಕೋರ್ಟ್‌ ತಡೆ

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

3

Kundapura: ಹೊಟೇಲ್‌ನಲ್ಲಿ ಹ*ಲ್ಲೆ; ಪ್ರಕರಣ ದಾಖಲು

24

Udyavara: ಕಂಟೈನರ್‌ಗೆ ಪಿಕಪ್‌ ಢಿಕ್ಕಿ; ಓರ್ವ ಸಾವು

death

Malpe: ವ್ಯಕ್ತಿ ಆತ್ಮಹ*ತ್ಯೆ; ದೂರು ದಾಖಲು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆKasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.