ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ : ಹಂಗಾರಕಟ್ಟೆ – ಮಣಿಪಾಲ ಜಲಮಾರ್ಗ ಅಭಿವೃದ್ಧಿ

Team Udayavani, Aug 6, 2022, 8:49 AM IST

ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ : ಹಂಗಾರಕಟ್ಟೆ – ಮಣಿಪಾಲ ಜಲಮಾರ್ಗ ಅಭಿವೃದ್ಧಿ

ಉಡುಪಿ : ಕೇರಳ, ಗೋವಾ ಮಾದರಿಯಲ್ಲಿ ಕರ್ನಾಟಕದ ಕರಾವಳಿಯಲ್ಲೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಭಾಗವಾಗಿ ಉಡುಪಿ ಜಿಲ್ಲೆಯ ಹಂಗಾರಕಟ್ಟೆಯಿಂದ ಮಣಿಪಾಲದವರೆಗೂ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಜಲಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಹಂಗಾರಕಟ್ಟೆ ಅಳಿವೆ ಮಾರ್ಗವಾಗಿ ಬೆಂಗ್ರೆ, ಕೆಮ್ಮಣ್ಣು, ಕಲ್ಯಾಣಪುರದಿಂದ ಮಣಿಪಾಲದ ವರೆಗೂ ದೋಣಿಗಳು ಸರಾಗವಾಗಿ ಬರಲು ಬೇಕಾದ ವ್ಯವಸ್ಥೆಯನ್ನು ಈ ಯೋಜನೆಯಡಿ ಮಾಡಲಾಗುತ್ತದೆ. ಸದ್ಯ ಬೆಂಗ್ರೆ, ಕೆಮ್ಮಣ್ಣು ಸುತ್ತಲಿನ ಪ್ರದೇಶದಲ್ಲಿ ಒಂದೆರಡು ಬೋಟ್‌ ಹೌಸ್‌ಗಳು ಓಡಾಡುತ್ತಿವೆ. ಸಮುದ್ರದ ನೀರಿನ ಉಬ್ಬರ ಇದ್ದಾಗ ಈ ಬೋಟುಗಳು ಎಲ್ಲೆಡೆ ಸರಾಗವಾಗಿ ಚಲಿಸುತ್ತವೆ. ಇಳಿತ ಇದ್ದಾಗ ಸಂಚಾರ ಕಷ್ಟವಾಗುತ್ತದೆ. ಹೀಗಾಗಿ ಸಾಗರಮಾಲಾ ಯೋಜನೆಯಡಿ ಪ್ರಮುಖವಾಗಿ ಪ್ರವಾಸೋದ್ಯಮ ಬೋಟುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೂಳೆತ್ತುವ ಕಾರ್ಯ ನಡೆಯಲಿದೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

25 ಕೋ.ರೂ.
ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಕರಾವಳಿಯಲ್ಲಿ ಎಸ್‌ಇಝಡ್‌ ಮಿತಿ ಸಡಿಲಿಕೆಗೆ ಕೇಂದ್ರ ಮೀನುಗಾರಿಕೆ ಸಚಿವರ ಜತೆ ಚರ್ಚಿಸಿದ್ದರು. ಹಂಗಾರಕಟ್ಟೆ-ಮಣಿಪಾಲ ಜಲಮಾರ್ಗದ ಅಭಿವೃದ್ಧಿಯ ಬಗ್ಗೆಯೂ ಮಾತುಕತೆ ನಡೆದಿದ್ದು, ಈ ಜಲಮಾರ್ಗ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಲಾಗಿದೆ. ಅಂದಾಜು 25 ಕೋ.ರೂ. ಕಾಮಗಾರಿಗೆ ತಾತ್ವಿಕ ಅನುಮೋದನೆಯೂ ದೊರೆತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕಿಂಡಿ ಅಣೆಕಟ್ಟು ಅಡ್ಡಿ
ಹಂಗಾರಕಟ್ಟೆ-ಮಣಿಪಾಲ ಜಲಮಾರ್ಗವೂ ಬಹುತೇಕ ಸ್ವರ್ಣಾ ನದಿಯಲ್ಲೇ ಇರುವುದರಿಂದ ಹಂಗಾರಕಟ್ಟೆಯಿಂದ ಬೆಂಗ್ರೆ, ಕೆಮ್ಮಣ್ಣು ಮಾರ್ಗವಾಗಿ ಕಲ್ಯಾಣಪುರದ ವರೆಗೂ ಬೋಟುಗಳು ಸರಾಗವಾಗಿ ಬರಲಿವೆ. ಆದರೆ ಕಲ್ಯಾಣಪುರದಲ್ಲಿ ಈಗಾಗಲೇ ಒಂದು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿರುವುದರಿಂದ ಅಲ್ಲಿಂದ ಮಣಿಪಾಲದ (ಸ್ವರ್ಣಾ ನದಿ-ಮಣಿಪಾಲದ ಎಂಡ್‌ಪಾಯಿಂಟ್‌ ಕೆಳಭಾಗ) ಭಾಗಕ್ಕೆ ಬೋಟು ಸಂಚಾರ ಕಷ್ಟವಾಗಲಿದೆ. ಹೀಗಾಗಿ ಕಿಂಡಿ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹಂಗಾರಕಟ್ಟೆಯಿಂದ ಕಲ್ಯಾಣಪುರ ಕಿಂಡಿ ಅಣೆಕಟ್ಟಿನ ವರೆಗೂ ಮೊದಲ ಹಂತದಲ್ಲಿ ಜಲಮಾರ್ಗದ ಅಭಿವೃದ್ಧಿ ಮಾಡುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ.

ಮೀನುಗಾರಿಕೆ ಬೋಟುಗಳಿಗೂ ಅನುಕೂಲ
ಸಾಗರಮಾಲಾ ಯೋಜನೆಯಡಿ ಆರಂಭದಲ್ಲಿ ಪ್ರವಾಸಿ ಬೋಟುಗಳು ಸರಾಗವಾಗಿ ಓಡಾಡಲು ಅನುಕೂಲವಾಗುವಂತೆ ಹೂಳೆತ್ತುವ ಕಾರ್ಯ ನಡೆಯಲಿದೆ. ಇದಾದ ಅನಂತರದಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಬೋಟು ಲಂಗರು ಹಾಕಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮೀನುಗಾರಿಕೆ ಬೋಟುಗಳನ್ನು ಲಂಗರು ಹಾಕಲು ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಜಲಮಾರ್ಗದ ಸಂಪೂರ್ಣ ಅಭಿವೃದ್ಧಿ ಅನಂತರ ಮೀನುಗಾರಿಕೆಯ ಬೋಟುಗಳು, ಭವಿಷ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ವಾಣಿಜ್ಯ ಉದ್ದೇಶಿತ ಬೋಟುಗಳು ಓಡಲು ಅವಕಾಶ ಮಾಡಿಕೊಡುವ ಸಾಧ್ಯೆಯೂ ಇದೆ. ದೂರದೃಷ್ಟಿಯ ಯೋಜನೆಯೊಂದಿಗೆ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಮೂಲಗಳು ತಿಳಿಸಿವೆ.

ಹಂಗಾರಕಟ್ಟೆ -ಮಣಿಪಾಲ ಜಲಮಾರ್ಗದ ಅಭಿವೃದ್ಧಿಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಲ್ಲಿ ಕಾಮಗಾರಿ ನಡೆಯಲಿದೆ. ತಾತ್ವಿಕ ಅನುಮೋದನೆಯೂ ಸಿಕ್ಕಿದೆ.
– ಎಸ್‌. ಅಂಗಾರ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಸಚಿವ

– ರಾಜುಖಾರ್ವಿ ಕೊಡೇರಿ

ಟಾಪ್ ನ್ಯೂಸ್

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಪಾಡಿ: ಸ್ಕೂಟಿಗೆ ಟಿಪ್ಪರ್‌ ಢಿಕ್ಕಿ; ಸಹ ಸವಾರ ಸಾವು

ಕಟಪಾಡಿ: ಸ್ಕೂಟಿಗೆ ಟಿಪ್ಪರ್‌ ಢಿಕ್ಕಿ; ಸಹ ಸವಾರ ಸಾವು

ವಿಮೆ ಪಡೆಯಲು ಸುಳ್ಳು ದಾಖಲೆ, ಕಟ್ಟುಕತೆ: ಕೇಸು

ವಿಮೆ ಪಡೆಯಲು ಸುಳ್ಳು ದಾಖಲೆ, ಕಟ್ಟುಕತೆ: ಕೇಸು

3

ಹಳ್ಳಿಗಳ ಪಶು ಚಿಕಿತ್ಸಾಲಯಗಳಲ್ಲಿ ಸಿಬಂದಿ ಕೊರತೆ; ಲಸಿಕೆ ಅಭಿಯಾನಕ್ಕೆ ಕರ್ತವ್ಯ ನಿಯೋಜನೆ

2

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.