
ಕಡಲಚಿಪ್ಪು ಉತ್ಪಾದನೆಗೆ ಹೆಚ್ಚಿದ ಬೇಡಿಕೆ
Team Udayavani, Apr 2, 2023, 7:12 AM IST

ಉಡುಪಿ: ಸಮುದ್ರ ಮತ್ತು ನದಿಯ ಉಪ್ಪು ನೀರಿನಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಕಡಲ ಚಿಪ್ಪನ್ನು ಈಗ ಮೀನುಗಾರಿಕೆಯ ಉಪಕೃಷಿಯಾಗಿ ವ್ಯಾಪಕವಾಗಿ ಬೆಳೆಸಲಾಗುತ್ತಿದೆ ಮತ್ತು ಬೆಳೆಯು ವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಸಮುದ್ರ, ನದಿಯ ಕಲ್ಲುಗಳಲ್ಲಿ ಇದು ಬೆಳೆಯುತ್ತದೆ. ಕಲ್ಲಿನಿಂದ ಬಿಡಿಸಿ ತರುವುದು ಸವಾಲು. ಇತ್ತೀಚಿನ ವರ್ಷಗಳಲ್ಲಿ ಸಮುದ್ರದಿಂದ ಕಡಲ ಚಿಪ್ಪು ತೆಗೆಯುವವರ ಸಂಖ್ಯೆ ಕಡಿಮೆ ಯಾಗಿದೆ, ನದಿಯಲ್ಲಿ ಇದರ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಉತ್ತಮ ಬೇಡಿಕೆ
ಕಡಲಚಿಪ್ಪಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಸದ್ಯ ಇದರ ಲಭ್ಯತೆ ಕಡಿಮೆ ಇರುವುದರಿಂದ ದರ ಹೆಚ್ಚಿದೆ. 3-4 ಇಂಚು ಗಾತ್ರದ ಕಡಲಚಿಪ್ಪೊಂದಕ್ಕೆ 3ರಿಂದ 5 ರೂ. ದರ ಇರುತ್ತದೆ. ಬೆಳೆಯುವವರಿಂದಲೇ ನೇರವಾಗಿ ಖರೀದಿ ವ್ಯವಸ್ಥೆಯೂ ಈಗ ರೂಪುಗೊಂಡಿದೆ. ಕಪ್ಪು ಮತ್ತು ಹಳದಿ ಬಣ್ಣದಲ್ಲಿ ಲಭ್ಯವಿದೆ ಮತ್ತು ಹಳದಿ ಬಣ್ಣದ್ದಕ್ಕೆ ಬೇಡಿಕೆ ಹೆಚ್ಚಿದೆ.
ಕೃಷಿ ಮಾಡುವುದು ಹೇಗೆ?
ಸಮುದ್ರದಲ್ಲಿ ಲಭ್ಯವಿರುವ ಕಡಲ ಚಿಪ್ಪಿನ ಮರಿಗಳನ್ನು ಅದರ ಮೂಲದಿಂದಲೇ ಬಿಡಿಸಿ ತಂದು, ಪ್ರತ್ಯೇಕ ವ್ಯವಸ್ಥೆಯಲ್ಲಿ ನದಿಯ ನೀರಿ ನಲ್ಲಿ ಶೇಖರಿಸಿಡಬೇಕು. ಗೋಣಿ ಚೀಲ ಅಥವಾ ಅದು ಬೆಳೆಯಲು ಪೂರಕವಾದ ಹಗ್ಗ ಜೋಡಿಸಿಡಬೇಕು. ದ್ರಾಕ್ಷಿ ಗೊಂಚಲು ರೀತಿ ಯಲ್ಲೇ ಬೆಳೆಯುತ್ತದೆ. ವಾರ ದಲ್ಲಿ 2 ದಿನ ಪರಿಶೀಲಿಸುತ್ತಿರಬೇಕು ಎಂದು ಕಡಲಚಿಪ್ಪು ಕೃಷಿಕ ಬೈಂದೂರಿನ ರಮೇಶ್ ಮಾಹಿತಿ ನೀಡಿದರು.
ವರ್ಷಕ್ಕೆ ಒಂದು ಬೆಳೆ
ಕಡಲಚಿಪ್ಪು ಕೃಷಿಗೆ ಸಾಕಷ್ಟು ಜನ ಉತ್ಸಾಹ ತೋರುತ್ತಿದ್ದಾರೆ. ಸದ್ಯ ಕರ್ನಾಟಕದಲ್ಲಿ ಎಲ್ಲಿಯೂ ಇದರ ಮರಿಗಳನ್ನು ನೀಡುವ ವ್ಯವಸ್ಥೆ ಇಲ್ಲ. ಕೇರಳದ ಕೆಲವು ಭಾಗಗಳಲ್ಲಿ ನೀಡಲಾಗುತ್ತದೆ ಎಂಬ ಮಾಹಿತಿಯಿದೆ. ಇಲ್ಲಿನ ವಾತಾ ವರಣದಲ್ಲಿ ವರ್ಷಕ್ಕೆ ಒಂದು ಇಳುವರಿ ಪಡೆಯಬಹುದು. ಮರಿಗಳು ಬಲಿತು ದೊಡ್ಡದಾಗಲು 3-4 ತಿಂಗಳು ಬೇಕಾಗುತ್ತದೆ. ಸಮುದ್ರ ಅಥವಾ ನದಿಯ ಉಪ್ಪು ನೀರಿನಲ್ಲಿ ಮಾತ್ರ ಬೆಳೆಯುತ್ತದೆ. ಮಳೆಗಾಲದ ನದಿ ನೀರಿನಲ್ಲಿ ಬೆಳೆಯಲು ಸಾಧ್ಯವಿಲ್ಲ.
ಸರಕಾರದ ಪ್ರೋತ್ಸಾಹ
ಪ್ರಧಾನ ಮಂತ್ರಿ ಮತ್ಸéಸಂಪದ ಯೋಜನೆಯಡಿ ಕಡಲಚಿಪ್ಪು ಉತ್ಪಾದನೆಗೆ ಸರಕಾರದಿಂದ ಪ್ರೋತ್ಸಾಹ ನೀಡಲಾಗುತ್ತದೆ. 2021-22ನೇ ಸಾಲಿನಲ್ಲಿ ದ.ಕ. ಜಿಲ್ಲೆಯ 25, ಉಡುಪಿಯ 55 ಫಲಾನುಭವಿಗಳಿಗೆ ತಲಾ 20,000 ರೂ. ಘಟಕ ವೆಚ್ಚ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲೂ ಸರಕಾರದಿಂದ ಈ ಯೋಜನೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಮ್ಮೆ ನೀರು ಕಲುಷಿತವಾದರೂ ಪೂರ್ಣ ನಾಶವಾಗು ತ್ತದೆ. ಸದಾ ಎಚ್ಚರಿಕೆ ಅಗತ್ಯ.
– ಶಿವಕುಮಾರ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
