
ಶಿರ್ವ: ಗೋ ರಕ್ಷಣೆ ; ಓರ್ವ ಪೊಲೀಸರ ವಶಕ್ಕೆ
Team Udayavani, May 18, 2022, 10:52 PM IST

ಶಿರ್ವ : ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಮುಟ್ಲಪಾಡಿ ಬಳಿ ಗುಡ್ಡದಲ್ಲಿ ಮಾಂಸ ಮಾಡಲು ಕಟ್ಟಿ ಹಾಕಿದ್ದ ದನವನ್ನು ಶಿರ್ವ ಪೊಲೀಸರು ರಕ್ಷಿಸಿದ್ದು, ಶಿರ್ವ ತೋಪನಂಗಡಿಯ ಮೊಹಮ್ಮದ್ ಇಸ್ಮಾಯಿಲ್ ಸಸರ್ಫರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ.
ಮೇ 17ರಂದು ಬೆಳಗ್ಗೆ ಮೊಹಮ್ಮದ್ ಇಸ್ಮಾಯಿಲ್ ಸರ್ಫರಾಜ್ ಮತ್ತು ಮೊಹಮ್ಮದ್ ಖಾಲಿದ್ ಜುಮಾದಿ ಸಾನದ ಸಮೀಪ ರಸ್ತೆ ಬದಿಯಲ್ಲಿದ್ದ ದನವನ್ನು ಕಳವು ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ನಿರ್ಧರಿಸಿ ಆಮ್ನಿ ಕಾರಿಗೆ ತುಂಬಿಸಿ ತಂದು ಕಾಡಿನಲ್ಲಿ ಕಟ್ಟಿ ಹಾಕಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ. ಸ್ಥಳಕ್ಕೆ ತೆರಳಿ ಅಲ್ಲಿದ್ದ ಮೊಹಮ್ಮದ್ ಇಸ್ಮಾಯಿಲ್ ಸರ್ಫರಾಜ್‌ನನ್ನು ವಶಕ್ಕೆ ಪಡೆದು, ಸುಮಾರು 5 ಸಾವಿರ ರೂ. ಮೌಲ್ಯದ ನಿತ್ರಾಣ ಸ್ಥಿತಿಯಲ್ಲಿದ್ದ ದನವನ್ನು ರಕ್ಷಿಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣ: ಚಿನ್ನ ಅಕ್ರಮ ಸಾಗಾಟ ಪತ್ತೆ
ಟಾಪ್ ನ್ಯೂಸ್
