

Team Udayavani, Apr 13, 2017, 1:27 PM IST
ಉಡುಪಿ: ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡಿರುವ ಮಲ್ಪೆ ಠಾಣೆಯ ಪೊಲೀಸ್ ಪೇದೆ ಪ್ರಕಾಶ್ ಅವರ ತಾಯಿ ಅಸ್ವಸ್ಥಗೊಂಡು ಬೆಳಗಾವಿ ಜಿಲ್ಲೆಯ ಅವರ ಊರಿನ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಯಿ ಅಸ್ವಸ್ಥರಾದ ವಿಷಯ ತಿಳಿಯುತ್ತಲೇ ಪ್ರಕಾಶ್ ಮತ್ತವರ ಪತ್ನಿ ಊರಿಗೆ ತೆರಳಿದ್ದಾರೆ. ಈ ಬಗ್ಗೆ ಪ್ರಕಾಶ್ ಅವರನ್ನು ಸಂಪರ್ಕಿಸಿ ವಿಷಯ ಕೇಳಿದಾಗ ಟಿ.ವಿ. ಮಾಧ್ಯಮಗಳಲ್ಲಿ ಬಂದ ಘಟನೆಗಳ ವರದಿಯನ್ನು ನೋಡಿದ ನನ್ನ ತಾಯಿ ಅಸ್ವಸ್ಥಗೊಂಡಿದ್ದಾರೆ. ಅವರು ಗುಣಮುಖರಾಗಬೇಕು. ಅಮಾನತು ಆದೇಶ ಹಿಂಪಡೆದರೆ ಉಡುಪಿಗೆ ಬರುವೆ. ಘಟನೆಯ ಆಘಾತದಿಂದ ಪತ್ನಿಯೂ ಹೊರಬಂದಿಲ್ಲ. ಅವಳೂ ಜ್ವರದಿಂದ ಬಳಲಿ ಮನೆಯಲ್ಲೇ ಇದ್ದಾಳೆ ಎಂದು ಪ್ರಕಾಶ್ ಹೇಳಿದ್ದಾರೆ.
ಪೊಲೀಸರಿಂದ ಹಲ್ಲೆಗೊಳಗಾಗಿ ಸೊಂಟದ ಮೂಳೆ ಮುರಿತವಾಗಿರುವ ಮಲ್ಪೆಯ ಕಂಪೆನಿಯೊಂದರ ಉದ್ಯೋಗಿ ಕುಮಾರ್ ಅವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಇನ್ನು 2 ತಿಂಗಳು ಬೆಡ್ ರೆಸ್ಟ್ ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದವರ ಮಿತ್ರರು ತಿಳಿಸಿದ್ದಾರೆ. ಕುಮಾರ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಪ್ರಕಾಶ್ ಅವರ ಪತ್ನಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಪೇದೆಯ ಅಮಾನತು ಆದೇಶ ಯಥಾಸ್ಥಿತಿಯಲ್ಲಿದೆ. ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಎಸ್‌ಪಿ ಎನ್. ವಿಷ್ಣುವರ್ಧನ್ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಎಸ್‌ಪಿ ಕೆ.ಟಿ. ಬಾಲಕೃಷ್ಣ ಅವರು ಬೆಂಗಳೂರಿಗೆ ತೆರಳಿದ್ದಾರೆ.
Ad
ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ
EPFO; ಕಾರ್ಮಿಕರ ಭವಿಷ್ಯನಿಧಿ ಇಎಲ್‌ಐ ಯೋಜನೆ : 25 ಸಾವಿರ ಉದ್ಯೋಗ ನಿರೀಕ್ಷೆ
Udupi: ರಾಜ್ಯದ ಪ್ರಥಮ ಒಡಿಎಫ್ ಪ್ಲಸ್ ಮಾದರಿ ಜಿಲ್ಲೆ: ಸ್ವಚ್ಛತೆಯಲ್ಲಿ ಮುಂಚೂಣಿ ಸ್ಥಾನ
Udupi;ಮತ್ತೆ ಕಳ್ಳರ ಉಪಟಳ : ಕೊಡಂಕೂರಿನಲ್ಲಿ ಸರಣಿ ಕಳವು
Udupi; ಗೀತಾರ್ಥ ಚಿಂತನೆ- 314: ಭಗವದಿಚ್ಛೆ, ಸಾಮೂಹಿಕ ಚರ್ಚೆ ಮುಖ್ಯ
ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ
ಮೈದುಂಬಿದೆ ಬೆಳ್ಕಲ್ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ
ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ FIR ದಾಖಲು
Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು
ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್
You seem to have an Ad Blocker on.
To continue reading, please turn it off or whitelist Udayavani.