“ಸ್ವಚ್ಚ ಕರ್ನಾಟಕ ನಿರ್ಮಾಣಕ್ಕೆ ಕಟಿಬದ್ಧ’


Team Udayavani, Aug 21, 2018, 6:00 AM IST

2008klrmain1a.jpg

ಕೊಲ್ಲೂರು: ವಂಡ್ಸೆಯಲ್ಲಿ ಆರಂಭಗೊಂಡಿರುವ ಘನ, ದ್ರವ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆ ರಾಜ್ಯಕ್ಕೆ ಮಾದರಿ. ಗ್ರಾಮೀಣ ಪ್ರದೇಶಗಳಲ್ಲಿ ಈ ಒಂದು ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದು ದೊಡ್ಡ ಗ್ರಾಮಗಳಿಗೆ ಇದು ಸವಾಲಾಗಿರಬಹುದು. ಅದಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮಸ್ಥರ ಸಹಕಾರದೊಡನೆ ಶ್ರಮಿಸಿದಲ್ಲಿ ಯಶಸ್ಸು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ವಂಡ್ಸೆ ಗ್ರಾ.ಪಂ.ನಲ್ಲಿ ಆರಂಭಗೊಂಡಿರುವ ಎಸ್‌.ಎಲ್‌.ಆರ್‌.ಎಂ. ಘಟಕವನ್ನು ವೀಕ್ಷಿಸಲು ಆ. 20ರಂದು ಇಲ್ಲಿಗೆ ಆಗಮಿಸಿದ ಸಚಿವರು ಸುದ್ದಿಗಾರರೊಡನೆ ಮಾತನಾಡುತ್ತಾ ಈ ಭಾಗದಲ್ಲಿ ಬಹಳಷ್ಟು ಯಶಸ್ಸು ಕಂಡುಕೊಂಡಿರುವ ಈ ಯೋಜನೆಯ ಅನುಷ್ಠಾನ ಕ್ರಮ ಇತರ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ ಎಂದರು.
 
ಸರಕಾರವು ರಾಜ್ಯದ ಎಲ್ಲ ಗ್ರಾಮಗಳಲ್ಲಿ ಎಸ್‌.ಎಲ್‌.ಆರ್‌.ಎಂ. ಘಟಕವನ್ನು ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳುವುದು. ಕೇವಲ ಸರಕಾರದ ಅನುದಾನವನ್ನೇ ಅವಲಂಬಿಸದೇ ಈ ಒಂದು ಘಟಕದ ನಿರ್ವಹಣೆ ಯಿಂದ ಬರುವ ಆರ್ಥಿಕ ವ್ಯವಸ್ಥೆಯನ್ನು ಬಳಸಿದಲ್ಲಿ ಹೆಚ್ಚಿನ ಗುರಿ ಸಾಧನೆಗೆ ಸಾಧ್ಯ ಎಂದು ಸಚಿವರು ಹೇಳಿದರು.

ಕಸ ವಿಲೇವಾರಿಗೆ ಶಾಶ್ವತ ಪರಿಹಾರ: ಚಿಂತನೆ
ಕಸವನ್ನು ತೆಗೆದು ಸಂಪನ್ಮೂಲವಾಗಿಸುವುದರೊಡನೆ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಮೊದಮೊದಲು ಪೇಟೆಯ ಸಮಸ್ಯೆಯಾಗಿದ್ದ ಕಸ ವಿಲೇವಾರಿ ಈಗ ಗ್ರಾಮೀಣ ಪ್ರದೇಶಕ್ಕೂ ಚಾಚಿರುವುದರಿಂದ ಸಾರ್ವತ್ರಿಕವಾಗಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧ್ಯಯನ ನಡೆಸುತ್ತಿದ್ದು ವಂಡ್ಸೆ ಗ್ರಾ.ಪಂ.ನ ಈ ವ್ಯವಸ್ಥೆಯನ್ನು ವೀಕ್ಷಿಸುವುದರೊಡನೆ ಹೆಚ್ಚಿನ ಮಾಹಿತಿ ದೊರಕಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ ಶಿವಾನಂದ ಕಾಪಸಿ, ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ನಿರ್ದೇಶಕರಾದ ಕೆಂಪೇಗೌಡ, ಭುವನಹಳ್ಳಿ ನಾಗರಾಜ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್‌ ಪಡೆ°àಕರ್‌,  ತಾ.ಪಂ. ಸದಸ್ಯ ಉದಯ ಜಿ. ಪೂಜಾರಿ,  ಪಿಡಿಒ ಶಂಕರ ಆಚಾರ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೊನ್ಸೆ, ಗ್ರಾ.ಪಂ. ಸದಸ್ಯರು, ರಾಜು ಪೂಜಾರಿ, ವಂಡಬಳ್ಳಿ ಜಯರಾಮ ಶೆಟ್ಟಿ, ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ
ಭಾರೀ ಗಾಳಿ ಮಳೆಯಿಂದ ತೆಂಕೊಡ್ಗಿಯಲ್ಲಿ ಗುಡ್ಡ ಕುಸಿದು ಜಖಂಗೊಂಡ ಮನೆಗೆ ಭೇಟಿ ನೀಡಿದ ಸಚಿವರು ಮಾಹಿತಿ ಸಂಗ್ರಹಿಸಿದರು.

ಮಾಹಿತಿ, ಸ್ಪಷ್ಟ ಚಿತ್ರಣ ಇಲ್ಲ 
ರಾಜ್ಯದಲ್ಲಿ 45 ಲಕ್ಷ ಶೌಚಾಲಯ ನಿರ್ಮಿಸಲಾಗಿದ್ದು ಇನ್ನೂ 4 ಲಕ್ಷ ಶೌಚಾಲಯ ನಿರ್ಮಾಣ ಕಾರ್ಯ ಬಾಕಿ ಇದೆ. ಬಯಲು ಮುಕ್ತ ಶೌಚಾಲಯ ಜಿಲ್ಲೆಯಾಗಿರುವ ಉಡುಪಿಯನ್ನೇ ಆಧಾರವಾಗಿಟ್ಟು ಬಯಲು ಮುಕ್ತ ಶೌಚಾಲಯಗಳ ರಾಜ್ಯವಾಗಿಸುವಲ್ಲಿ ಪ್ರಯತ್ನಿಸಲಾಗುವುದು. 

– ಕೃಷ್ಣ ಭೈರೇಗೌಡ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ಟಾಪ್ ನ್ಯೂಸ್

New York; Virat Kohli’s statue unveiled at the famous Times Square

New York; ಪ್ರಸಿದ್ದ ಟೈಮ್ಸ್ ಸ್ಕ್ಯಾರ್ ನಲ್ಲಿ ವಿರಾಟ್ ಕೊಹ್ಲಿಯ ಪ್ರತಿಮೆ ಅನಾವರಣ

Team announced for Zimbabwe tour: Rest for seniors; Five first-timers in the team

Zimbabwe ಪ್ರವಾಸಕ್ಕೆ ತಂಡ ಪ್ರಕಟ: ಹಿರಿಯರಿಗೆ ರೆಸ್ಟ್; ಮೊದಲ ಬಾರಿಗೆ ಸ್ಥಾನ ಪಡೆದ ಐವರು

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

1-abbi

Hosanagara: ಅಬ್ಬಿ ಫಾಲ್ಸ್ ನಲ್ಲಿ‌ ನೀರುಪಾಲಾಗಿದ್ದ ಯುವಕನ ಶವ ಪತ್ತೆ

JP-Nadda

Rajya Sabha ಸಭಾ ನಾಯಕರಾಗಿ ಜೆ.ಪಿ.ನಡ್ಡಾ ನೇಮಕ

1-modi

‘Emergency’ ಕುರಿತು ಪ್ರಧಾನಿ ಮೋದಿ ಹೇಳಿಕೆ: ವಿಪಕ್ಷಗಳ ಆಕ್ರೋಶ

zameer

Bidar; ವಕ್ಫ್ ಬೋರ್ಡ್ ಆಸ್ತಿ ಯತ್ನಾಳ್ ಅಪ್ಪನದ್ದೂ ಅಲ್ಲ; ಜಮೀರ್ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Frog ಶಬ್ದ ಗ್ರಹಿಸಲು ಎಐ ಬಳಕೆ: ಕಾರ್ಕಳ ಪಶ್ಚಿಮಘಟ್ಟ ತಪ್ಪಲಿನಲ್ಲಿ ಕಪ್ಪೆ ಸಂಶೋಧನೆ

Frog ಶಬ್ದ ಗ್ರಹಿಸಲು ಎಐ ಬಳಕೆ: ಕಾರ್ಕಳ ಪಶ್ಚಿಮಘಟ್ಟ ತಪ್ಪಲಿನಲ್ಲಿ ಕಪ್ಪೆ ಸಂಶೋಧನೆ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Kanyadi: ರಿಕ್ಷಾ ಪಲ್ಟಿ; ಗಾಯ

Belthangady ಕನ್ಯಾಡಿ: ರಿಕ್ಷಾ ಪಲ್ಟಿ; ಹಲವರಿಗೆ ಗಾಯ

Kundapura: ಲಾರಿಯಡಿಗೆ ಬಿದ್ದ ಸ್ಕೂಟರ್‌ ; ತಾಯಿ – ಮಗಳು ಅಪಾಯದಿಂದ ಪಾರು

Kundapura: ಲಾರಿಯಡಿಗೆ ಬಿದ್ದ ಸ್ಕೂಟರ್‌ ; ತಾಯಿ – ಮಗಳು ಅಪಾಯದಿಂದ ಪಾರು

Theft ಹಾಲಾಡಿ: ಬಾಡಿಗೆ ಮನೆ; ಮಟನ್‌ ಸ್ಟಾಲ್‌ನಲ್ಲಿ ಕಳ್ಳತನ

Theft ಹಾಲಾಡಿ: ಬಾಡಿಗೆ ಮನೆ; ಮಟನ್‌ ಸ್ಟಾಲ್‌ನಲ್ಲಿ ಕಳ್ಳತನ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

1-sadsdasd

“ದೇವರಂತಹ” ಮತದಾರರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ: ಅಯೋಧ್ಯೆ ಸಂಸದ

New York; Virat Kohli’s statue unveiled at the famous Times Square

New York; ಪ್ರಸಿದ್ದ ಟೈಮ್ಸ್ ಸ್ಕ್ಯಾರ್ ನಲ್ಲಿ ವಿರಾಟ್ ಕೊಹ್ಲಿಯ ಪ್ರತಿಮೆ ಅನಾವರಣ

Team announced for Zimbabwe tour: Rest for seniors; Five first-timers in the team

Zimbabwe ಪ್ರವಾಸಕ್ಕೆ ತಂಡ ಪ್ರಕಟ: ಹಿರಿಯರಿಗೆ ರೆಸ್ಟ್; ಮೊದಲ ಬಾರಿಗೆ ಸ್ಥಾನ ಪಡೆದ ಐವರು

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

1-abbi

Hosanagara: ಅಬ್ಬಿ ಫಾಲ್ಸ್ ನಲ್ಲಿ‌ ನೀರುಪಾಲಾಗಿದ್ದ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.