Udayavni Special

ಮತ್ತೆರಡು ವಿಶ್ವದಾಖಲೆ ಬರೆದ ತನುಶ್ರೀ


Team Udayavani, Feb 24, 2019, 1:00 AM IST

tanushree.jpg

ಉಡುಪಿ: ಉಡುಪಿ ಪಿತ್ರೋಡಿಯ ಬಾಲ ಯೋಗ ಪ್ರತಿಭೆ ತನುಶ್ರೀ ಶನಿವಾರ ಮತ್ತೆರಡು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಧನುರಾಸನದ ಭಂಗಿಯನ್ನು ಒಂದು ನಿಮಿಷದಲ್ಲಿ 62 ಬಾರಿ ಹಾಗೂ 1.40 ನಿಮಿಷದಲ್ಲಿ 100 ಬಾರಿ ಮಾಡುವ ಮೂಲಕ ಎರಡು ಹೊಸ ದಾಖಲೆಗಳನ್ನು “ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌’ನಲ್ಲಿ ದಾಖಲಿಸಿದರು.

ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ವತಿಯಿಂದ ಪಿತ್ರೋಡಿಯ ವೆಂಕಟರಮಣ ನ್ಪೋರ್ಟ್ಸ್
 ಆ್ಯಂಡ್‌ ಕಲ್ಚರಲ್‌ ಕ್ಲಬ್‌ ಸಹಯೋಗದಲ್ಲಿ ಉಡುಪಿಯ ಸೈಂಟ್‌ ಸಿಸಿಲಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಂದಿಯ ಸಮ್ಮುಖದಲ್ಲಿ ತನುಶ್ರೀ ದಾಖಲೆ ಬರೆದರು. 

ಹಿಂದಿನ ದಾಖಲೆಗಳು
2017ರಲ್ಲಿ ನಿರಾಲಂಭಪೂರ್ಣ ಚಕ್ರಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡಿ “ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌’ ಸಾಧನೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು ಒಂದು ನಿಮಿಷದಲ್ಲಿ 42 ಬಾರಿ ತಿರುಗಿಸಿ ಗಿನ್ನೆಸ್‌ ದಾಖಲೆ ಮಾಡಿದ್ದರು.

ತಂದೆ ಉದಯ ಕುಮಾರ್‌, ತಾಯಿ ಸಂಧ್ಯಾ ಅವರು ತನುಶ್ರೀ ಜತೆಗಿದ್ದು ಹುರಿದುಂಬಿಸಿದರು. ಇಬ್ಬರು ಅತಿಥಿಗಳು ಸ್ಥಳದಲ್ಲಿಯೇ ತಲಾ 10,000 ರೂ. ಬಹುಮಾನ ಕೂಡ ಘೋಷಿಸಿದರು.

ಕಠಿನ ಸಾಧನೆ
“ಈ ಬಾರಿ ತನುಶ್ರೀ ಎರಡು ದಾಖಲೆಗಳನ್ನು ಮಾಡಿದ್ದಾರೆ. ಇದು ಅತ್ಯಂತ ಕಠಿನ, ಅಪರೂಪದ ದಾಖಲೆ ಎಂದು ದಾಖಲೆಯನ್ನು ಘೋಷಿಸಿದ ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರಧಾನ ತೀರ್ಪುಗಾರ ಮನೀಷ್‌ ಬಿಷ್ಣೋಯ್‌ ತಿಳಿಸಿದರು.

ಹುತಾತ್ಮರಿಗೆ ಅರ್ಪಣೆ
“ನನಗೆ ತುಂಬಾ ಖುಷಿಯಾಗುತ್ತಿದೆ. ಎರಡೂ ಸಾಧನೆಗಳನ್ನು ಒಟ್ಟಿಗೆ ಮಾಡಿದ್ದೇನೆ. ಅಪ್ಪ, ಅಮ್ಮ, ಗುರುಗಳು ಮತ್ತು ಎಲ್ಲರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಈ ದಾಖಲೆಯನ್ನು ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಸಮರ್ಪಿಸುತ್ತೇನೆ ಎಂದು ದಾಖಲೆ ಮಾಡಿದ ಅನಂತರ ಹುತಾತ್ಮರ ಭಾವಚಿತ್ರ ಎದುರು ದೀಪ ಬೆಳಗಿದ ತನುಶ್ರೀ ಹೇಳಿದರು.

ಉಡುಪಿ ಸೈಂಟ್‌ ಸಿಸಿಲಿಸ್‌ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ತನುಶ್ರೀ ನೃತ್ಯ, ಯಕ್ಷಗಾನ ತರಬೇತಿ ಕೂಡ ಪಡೆಯು ತ್ತಿದ್ದಾರೆ. ಸಮಾರಂಭದಲ್ಲಿ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಪ್ರಧಾನ ವ್ಯವ ಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್‌, ಫಾ| ವಿಲಿಯಂ ಮಾರ್ಟಿಸ್‌, ಸೈಂಟ್‌ ಸಿಸಿಲೀಸ್‌ ಕನ್ನಡ ಮಾಧ್ಯಮ ವಿಭಾಗದ ಪ್ರಾಂಶುಪಾಲೆ ಸಿ| ವಿಭಾ, ಸಂಚಾಲಕಿ ಸಿ| ಮೇಝಿ, ವೆಂಕಟರಮಣ ನ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್ಸ್‌ನ ಮಲ್ಲೇಶ್‌, ಭರತನಾಟ್ಯ ಗುರು ರಾಮಕೃಷ್ಣ ಕೊಡಂಚ, ವಿಜಯ ಕೋಟ್ಯಾನ್‌, ನಾಗರಾಜ ರಾವ್‌, ನಾರಾಯಣ ಶೆಟ್ಟಿ, ನ್ಯಾಯವಾದಿ ಶಾಂತಾರಾಮ ಶೆಟ್ಟಿ, ವಿಶುಶೆಟ್ಟಿ ಅಂಬಲಪಾಡಿ, ಪ್ರವೀಣ್‌ ಪೂಜಾರಿ, ನಾಗೇಶ್‌ ಉದ್ಯಾವರ, ಪ್ರತಾಪ್‌ ಕುಮಾರ್‌ ಉಪ ಸ್ಥಿತರಿದ್ದರು. ಎರೋಲ್‌ ನಿರ್ವಹಿಸಿದರು.

ಟಾಪ್ ನ್ಯೂಸ್

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಶ್ರೀಕೃಷ್ಣಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

ಶ್ರೀಕೃಷ್ಣಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

ಬಯೋತೆರಪ್ಯುಟಿಕ್ಸ್‌ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ

ಬಯೋತೆರಪ್ಯುಟಿಕ್ಸ್‌ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುಧಾಬಿಯಿಂದ 1 ಮಿಲಿಯನ್ ಅನುದಾನ!

ghfghhyt

ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ “ದುರ್ಗಾ ದೌಡ್”

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

Untitled-1

ಅತ್ತಿಕುಪ್ಪೆಯಲ್ಲಿ ಪಡಿತರ ಉಪಕೇಂದ್ರ ಉದ್ಘಾಟನೆ,ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

Dak Seva Award for Achievers

8 ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರಧಾನ ಮಾಡಿದ ರಾಜ್ಯಪಾಲರು

davanagere news

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

12

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.