

Team Udayavani, Apr 22, 2024, 12:37 AM IST
ಹೆಬ್ರಿ: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಪ್ರಣೀತ ಅವರ ಮನೆಯ ಬಾಗಿಲಿನ ಬೀಗ ಒಡೆದು ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ.
ಪ್ರಣೀತ ಅವರು ಎ. 18ರಂದು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದು 20ರಂದು ಮರಳಿ ಬಂದು ನೋಡಿದಾಗ ಮನೆಯ ಬಾಗಿಲು ಮುರಿದು ಕಪಾಟಿನ ಒಳಗಡೆ ಇಟ್ಟಿದ್ದ ನೆಕ್ಲಸ್ -01, 01 ಜೊತೆ ಬಳೆ (25 ಗ್ರಾಂ), ಚೈನ್ -09 (20 ಗ್ರಾಂ), ಕಿವಿಯ ಬೆಂಡೊಲೆ 02 ಜೊತೆ (20 ಗ್ರಾಂ), ಕಿವಿಯ ಹ್ಯಾಂಗಿಗ್ ಚೈನ್ -04 (3 ಗ್ರಾಂ) ಮಕ್ಕಳ ಉಂಗುರ -03 (05 ಗ್ರಾಂ), ಚಿಕ್ಕ ಕರಿಮಣಿ ಸರ-01 (08 ಗ್ರಾಂ), ಚೈನ್, ಕಾಲುಂಗೂರ, ಸೊಂಟದ ಚೈನ್ ಹಾಗೂ 15,000 ರೂಪಾಯಿ ನಗದು ಒಟ್ಟು 6 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಸ್ವತ್ತುಗಳು ಕಳ್ಳತನವಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad
You seem to have an Ad Blocker on.
To continue reading, please turn it off or whitelist Udayavani.