ಮಲ್ಪೆ ಉತ್ಸವದಲ್ಲಿ ಸಾಹಸ ಕ್ರೀಡೆಗಳ ವೈಭವ


Team Udayavani, Jan 22, 2023, 12:31 AM IST

ಮಲ್ಪೆ ಉತ್ಸವದಲ್ಲಿ ಸಾಹಸ ಕ್ರೀಡೆಗಳ ವೈಭವ

ಮಲ್ಪೆ: ವಿದೇಶಗಳಲ್ಲಿ ಹೆಚ್ಚು ಪ್ರಚಾರದಲ್ಲಿರುವ ಕ್ಲಿಪ್‌ ಡೈವ್‌, ಫ್ಲೆ„ ಬೋರ್ಡ್‌, ಸ್ಕೂಬಾ ಡೈವ್‌ ಮೊದಲಾದ ಸಾಹಸ ಕ್ರೀಡೆಗಳ ಅನುಭವ ಪಡೆಯಬಹುದಾದ ವ್ಯವ ಸ್ಥೆಯನ್ನು ಮಲ್ಪೆ ಬೀಚ್‌ ಉತ್ಸವ ದಲ್ಲಿ ಕಲ್ಪಿಸಲಾಗಿದೆ. ಈ ಸಾಹಸ ಕ್ರೀಡೆ ಗಳನ್ನು ನಿರಂತರವಾಗಿ ನಡೆಸಲಾಗುವುದು.

ಸೈಂಟ್‌ ಮೇರಿಸ್‌ ದ್ವೀಪದಲ್ಲಿ ರಾಜ್ಯ ದಲ್ಲೇ ಮೊದಲು ಅತ್ಯಂತ ಸುರಕ್ಷಿತ ಕ್ಲಿಪ್‌ಡೈವ್‌ (ಬಂಡೆ ಮೇಲಿಂದ ಸಮುದ್ರಕ್ಕೆ ಹಾರುವುದು) ಸೌಲಭ್ಯ ಕಲ್ಪಿಸಲಾಗಿದೆ. ಸಮುದ್ರದ ನೀರಿನ ಮಟ್ಟದಿಂದ 25 ಅಡಿ ಮೇಲಿಂದ ಹಾರಬಹುದಾದ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.

ಸ್ಲಾಕ್‌ಲೈನ್‌ವಾಕ್‌(ಹಗ್ಗದ ಮೇಲಿನ ನಡಿಗೆ)ಗೂ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಲಿದೆ. ಬೀಚ್‌ನಲ್ಲಿ ಫ್ಲೈಬೋರ್ಡ್‌ ವ್ಯವಸ್ಥೆ ಯಿದೆ. ಇದು ಮುಂದಿನ ಕೆಲವು ದಿನಗಳವರೆಗೂ ಇಲ್ಲಿಯೇ ಇರಲಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು. ಈ ವೇಳೆ ಸುದೇಶ್‌ ಶೆಟ್ಟಿ, ಮಂಜುನಾಥ ಕೊಳ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ವಾಟರ್‌ ನ್ಪೋರ್ಟ್ಸ್ ವಿಷಯದಲ್ಲಿ ಏಷಿಯನ್‌ ಚಾಂಪಿಯನ್‌ಶಿಪ್‌ ನಡೆಸಲು ಸಿದ್ಧರಿದ್ದೇವೆ ಎಂದರು.

ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಜಿಲ್ಲೆಗೊಂದು ಸಾಹಸ ಕ್ರೀಡಾ ಅಕಾಡೆಮಿ ಬರಬೇಕು ಎಂದರು.
ಕೆನರಾ ಬ್ಯಾಂಕ್‌ ಜನರಲ್‌ ಮ್ಯಾನೇ ಜರ್‌ ರಾಮ ನಾಯ್ಕ ಮಾತ ನಾಡಿ, ಉಡುಪಿಯ ಕರಾವಳಿ ಪ್ರದೇಶ ಅಭಿವೃದ್ಧಿಯ ಜತೆಗೆ ಪ್ರವಾ ಸೋದ್ಯಮಕ್ಕೆ ವ್ಯವಸ್ಥಿತವಾಗಿ ಬಳಸಿ ಕೊಳ್ಳಬೇಕು. ವಾಟರ್‌ ನ್ಪೋರ್ಟ್ಸ್ಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದರು.

ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿ ಯೇಶನ್‌ ಅಧ್ಯಕ್ಷ ಗೋಪಾಲ್‌ ಬಿ. ಹೊಸೂರು, ಪೌರಾಯುಕ್ತ ಡಾ| ಉದಯ ಕುಮಾರ್‌ ಶೆಟ್ಟಿ, ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಶೆಟ್ಟಿ, ಅಸೋಸಿ ಯೇಶನ್‌ನ ಸತೀಶ್‌ ಕಾರ್ಯಕ್ರಮ ನಿರ್ವಹಿಸಿದರು.

ಫ‌ಲಿತಾಂಶ
ಈಜು 10 ಕಿ.ಮೀ. ಮಹಿಳಾ ವಿಭಾಗ-ಕರ್ನಾಟಕದ ಪ್ರೀತಾ ವಿ. (ಪ್ರ), ನಿಖೀತಾ ಎಸ್‌.ವಿ. (ದ್ವಿ) ಹಾಗೂ
ಪಶ್ಚಿಮ ಬಂಗಾಲದ ದ್ವಿಪನ್ವಿತ ಮಂಡಲ್‌ (ತೃ). 7.5 ಕಿ.ಮೀ. ವಿಭಾಗ- ಕರ್ನಾಟಕದ ಅಸ್ಮಿತಾ ಚಂದ್ರ (ಪ್ರ), ಮಹಾರಾಷ್ಟ್ರದ ಅನುಷ್ಕಾ ಪಾಟೀಲ್‌ (ದ್ವಿ) ಹಾಗೂ ತಮಿಳುನಾಡಿನ ಮಹಾಲಕ್ಷ್ಮೀ (ತೃ). 10 ಕಿ.ಮೀ. ಪುರುಷರ ವಿಭಾಗ-ಪ. ಬಂಗಾಲದ ಪ್ರತ್ಯಯ್‌ ಭಟ್ಟಾಚಾರ್ಯ (ಪ್ರ), ಕರ್ನಾಟಕದ ಲಿತೇಶ್‌ ಎಸ್‌. ಗೌಡ (ದ್ವಿ) ಹಾಗೂ ಮಹಾರಾಷ್ಟ್ರದ ಸೋಂಪನ್‌ ಸೆಲೋರ್‌ (ತೃ). 7.5 ಕಿ.ಮೀ. ವಿಭಾಗದಲ್ಲಿ ಕರ್ನಾಟಕದ ಪ್ರಶಾಂನ್ಸ್‌ ಎಚ್‌.ಎಂ. (ಪ್ರ), ಮೊಹ್ಮದ್‌ ಅಬ್ದುಲ್‌ ಬಶೀತ್‌ (ದ್ವಿ) ಹಾಗೂ ಛತ್ತೀಸ್‌ಗಢದ ಆಯನ್‌ ಅಲಿಖಾನ್‌ ತೃತೀಯ ಸ್ಥಾನ ಗಳಿಸಿದ್ದಾರೆ.

150 ಈಜುಪಟುಗಳು
ನ್ಯಾಶನಲ್‌ ಓಪನ್‌ ವಾಟರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ ಕೆನರಾ ಬ್ಯಾಂಕ್‌ ಸಹಕಾರದೊಂದಿಗೆ ಮಲ್ಪೆ ಕಡಲ ಕಿನಾರೆಯಲ್ಲಿ ಶನಿವಾರ ಬೆಳಗ್ಗೆ ನಡೆಯಿತು. 150 ಈಜುಪಟುಗಳು ಮುಕ್ತ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅನುಭವಿಗಳ ತಂಡ
ಸೈಂಟ್‌ಮೇರಿಸ್‌ನಲ್ಲಿ ಸಾಹಸ ಕ್ರೀಡೆಗೆ ತರಬೇತಿ ನೀಡಲು ರಾಷ್ಟ್ರೀಯ ಮಟ್ಟದ ಈಜು ತರಬೇತುದಾರರಾದ ಪಾರ್ಥ ವಾರಾಣಸಿ, ಗೋಕುಲ್‌, ಯಾದವ್‌ ಸೇರಿದಂತೆ ಮಹಿಳಾ ತರಬೇತುದಾರರು ಇದ್ದಾರೆ.

ಗಾಳಿಪಟ ಉತ್ಸವ
ಬೀಚ್‌ನಲ್ಲಿ ಶನಿವಾರ ಸಂಜೆ ಗಾಳಿಪಟ ಉತ್ಸವ ಹಾಗೂ ಕುನಾಲ್‌ ಗಾಂಜಾವಾಲ ಅವರ ತಂಡದ ಸಂಗೀತವು ಮೆರುಗು ನೀಡಿತು. ಮಕ್ಕಳಿಂದ ಹಿಡಿದು ವಿವಿಧ ವಯೋಮಾನದವರು ಗಾಳಿಪಟ ಹಾರಿಸಿ ಖುಷಿಪಟ್ಟರು. ವಿವಿಧ ಸಾಹಸ ಕ್ರೀಡೆಗಳು, ಕಯಾ ಕಿಂಗ್‌, ತ್ರೋಬಾಲ್‌, ಕಬಡ್ಡಿ, ಆಹಾರ ಮೇಳ ವಿಶೇಷವಾಗಿತ್ತು.

ಇಂದು ಸಮಾರೋಪ
ಮಲ್ಪೆಯಲ್ಲಿ ನಡೆಯುತ್ತಿರುವ ರಜತ ಉಡುಪಿ- ಬೀಚ್‌ ಉತ್ಸವ ಸಮಾರೋಪ ಜ. 22ರಂದು ನಡೆಯಲಿದೆ. ರಾಜ್ಯದ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಸಚಿವ ಆನಂದ್‌ ಸಿಂಗ್‌ ಭಾಗವಹಿಸಲಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.