

Team Udayavani, Nov 12, 2019, 5:28 AM IST
ಶಿರ್ವ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಿರ್ವ ಪೊಲೀಸ್ ಸ್ಟೇಷನ್-ಸೊರ್ಕಳ ರಸ್ತೆ ಕಾಂಕ್ರಿಟೀಕರಣಗೊಂಡು ವರುಷ ಕಳೆದರೂ ಬೀದಿ ದೀಪಗಳಿಲ್ಲದೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಸೊರ್ಕಳ ಪ್ರದೇಶದಲ್ಲಿ ಈ ರಸ್ತೆಯಲ್ಲಿ ಹಾದುಹೋಗುವ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿವೆ. ರಾತ್ರಿ ವೇಳೆ ಕತ್ತಲು ಇರುವುದರಿಂದ ಪಾದಾಚಾರಿಗಳು ನಡೆದುಕೊಂಡು ಹೋಗಲು ಪರದಾಡುತ್ತಿದ್ದು,ಸಂಕಷ್ಟ ಎದುರಿಸುವಂತಾಗಿದೆ.
ಶಿರ್ವ-ಬೆಳ್ಮಣ್ ಮುಖ್ಯ ರಸ್ತೆಯಿಂದ ಸುಮಾರು 300 ಮೀ. ದೂರದಲ್ಲಿ ಶಿರ್ವ ಪೊಲೀಸ್ ಠಾಣೆ ಈ ರಸ್ತೆಯ ಬದಿಯಲ್ಲಿದೆ. ಠಾಣೆಯ ಮುಂಭಾಗದಲ್ಲಿ ಠಾಣೆಯಿಂದಲೇ ಒಂದು ಬೀದಿ ದೀಪ ಅಳವಡಿಸಲಾಗಿದೆ.
ಆದರೆ ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದರೂ ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆ ಪೊಲೀಸ್ ಠಾಣೆಗೆ ಬರುವ ನಾಗರಿಕರು,ವಾಹನ ಸವಾರರು ವಾಹನಗಳ ಬೆಳಕನ್ನೇ ಅಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ವ್ಯವಸ್ಥೆ ಕಲ್ಪಿಸಲಾಗುವುದು
ಗ್ರಾ.ಪಂ.ನ 14ನೇ ಹಣಕಾಸು ನಿಧಿಯಿಂದ ಅನುದಾನ ಮೀಸಲಿರಿಸಿದ್ದು, ಕೂಡಲೇ ಬೀದಿ ದೀಪ ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗುವುದು.
-ಅನಂತಪದ್ಮನಾಭ ನಾಯಕ್,
ಪಂ. ಅಭಿವೃದ್ಧಿ ಅಧಿಕಾರಿ,ಶಿರ್ವ
ಸ್ಪಂದನೆ ಇಲ್ಲ
ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ದೀಪದ ಬಗ್ಗೆ ಹಲವಾರು ಲಿಖೀತ ಮನವಿ ಸಲ್ಲಿಸಲಾಗಿದೆ.ಗ್ರಾಮ ಸಭೆಯಲ್ಲೂ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಲಾಗಿದ್ದರೂ ಈವರೆಗೆ ಗ್ರಾ.ಪಂ.ಆಡಳಿತದಿಂದ ಯಾವುದೇ ಸ್ಪಂದನೆ ಇಲ್ಲ.
– ಅಬ್ದುಲ್ ಖಾದರ್,ಶಿರ್ವ ಪೊಲೀಸ್ ಠಾಣಾಧಿಕಾರಿ
Ad
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್‌ನ ಶವ ಪತ್ತೆ – ಫ್ಯಾನ್ಸ್ ಶಾಕ್
You seem to have an Ad Blocker on.
To continue reading, please turn it off or whitelist Udayavani.