ಕ್ಷೇತ್ರಕ್ಕೆ ಯುಪಿಎ ಸರಕಾರ ಕೊಡುಗೆ ಅನನ್ಯ: ಪ್ರಮೋದ್‌ ಮಧ್ವರಾಜ್‌

Team Udayavani, Apr 17, 2019, 6:30 AM IST

ಉಡುಪಿ: ಕಳೆದ ಬಾರಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಕೇಳಿ ಗೆದ್ದು ಕ್ಷೇತ್ರದಲ್ಲಿ ನಿಷ್ಕ್ರಿಯರಾಗಿದ್ದ ರಾಷ್ಟ್ರೀಯ ಹೆದ್ದಾರಿ, ಅಡಿಕೆ ಬೆಳೆಗಾರರ ಸಮಸ್ಯೆ, ಕಾಫಿ ಬೆಳೆಗಾರರ ಸಮಸ್ಯೆ, ಮರಳಿನ ಸಮಸ್ಯೆ, ಸಿಆರ್‌ಝಡ್‌ ಸಮಸ್ಯೆ, ಮೀನುಗಾರರ ಸಮಸ್ಯೆ, ರೈತರ ಸಮಸ್ಯೆಗೆ ಸ್ಪಂದಿಸದ ಸಂಸದೆ ಶೋಭಾ ಕರಂದ್ಲಾಜೆ ಅವರು ಸ್ಪಂದಿಸಿಲ್ಲ. ಆದರೆ ಯುಪಿಎ ಸರಕಾರ ರೈತರ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿತ್ತು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2005-06ರಲ್ಲಿ ದೇಶವ್ಯಾಪ್ತಿ 72 ಸಾವಿರ ಕೋ.ರೂ. ಮೊತ್ತದ ರೈತರ ಸಾಲ
ಮನ್ನಾ ಯೋಜನೆಯಲ್ಲಿ ಚಿಕ್ಕಮಗಳೂರು ಜಿÇÉೆಯ 24,599 ರೈತರಿಗೆ 184.84 ಕೋಟಿ ಸಾಲ ಮನ್ನಾ ಮಾಡಿತ್ತು. ಅದರಲ್ಲಿ ಅಡಿಕೆ ಬೆಳೆಗಾರರಿಗೆ 62.54 ಕೋ.ರೂ. ಮನ್ನಾ ಆಗಿತ್ತು¤. 2007ರಲ್ಲಿ ವಿದರ್ಭ ಪ್ಯಾಕೇಜ್‌ ಯೋಜನೆ- ಚಿಕ್ಕಮಗಳೂರು ಜಿÇÉೆ ಸೇರಿದಂತೆ 6 ಜಿÇÉೆಗಳಿಗೆ 300 ಕೋ.ರೂ.
ಮೊತ್ತದ ಪ್ಯಾಕೇಜ್‌ ನೀಡಲಾಗಿತ್ತು.

ಕೃಷಿಕರಿಗೆ ಸವಲತ್ತು
ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಅಡಿಯಲ್ಲಿ (ಎನ್‌.ಎಚ್‌.ಎಂ.) 2005-06ರಿಂದ 2013-14ರ ವರೆಗೆ ಅಡಿಕೆ ಬೆಳೆಗಾರರಿಗೆ 27.56 ಕೋ. ರೂ. ಬಿಡುಗಡೆ ಆಗಿತ್ತು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌.ಕೆ.ವಿ.ವೈ) ತೋಟಗಾರಿಕಾ ಯಾಂತ್ರಿಕರಣ ವ್ಯವಸ್ಥೆಯಡಿ 2009-10ರಿಂದ 2013- 14 ವರೆಗಿನ 6. 76 ಕೋ. ಬಿಡುಗಡೆ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.

ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಮಿಷನ್‌ ಯೋಜನೆಯಡಿ ಸಣ್ಣ ನೀರಾವರಿಗೆ 2005-06ರಿಂದ 2013-14ರ ವರೆಗೆ 47.12 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 16 ಸಾವಿರ ರೈತರು ಫ‌ಲಾನುಭವಿಗಳಾಗಿದ್ದರು.

2005ರಲ್ಲಿ ಕಾಫಿ ಬೆಳೆಗಾರರು ಪಡೆದುಕೊಂಡರೂ 65 ಕೋ. ರೂ. ಅಭಿ
ವೃದ್ಧಿ ಸಾಲ ಮನ್ನಾ ಮಾಡಲಾಗಿದೆ. 2006ರಲ್ಲಿ ಕರ್ನಾಟಕ, ಆಂಧ್ರ ಹಾಗೂ
ಕೇರಳದ 25 ಜಿÇÉೆಗಳ ಕಾಫಿ ಬೆಳೆಗಾರರ ಸಾಲದ ಮೇಲಿನ ಜುಲೈ 1ರ ತನಕದ ಬಾಕಿ ಬಡ್ಡಿ ಮನ್ನಾ ಮಾಡಲಾಗಿದೆ. ಇದರಿಂದ ಚಿಕ್ಕಮಗಳೂರು ಜಿÇÉೆಯ19,870 ಕಾಫಿ ಬೆಳೆಗಾರರಿಗೆ 1985 ಕೋ. ರೂ. ಬಡ್ಡಿ ಮನ್ನಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2010ರಲ್ಲಿ ಕಾಫಿ ಬೆಳೆಗಾರರ ಎಸ್‌. ಟಿ.ಸಿ.ಎಲ್‌. ಸಾಲಕ್ಕೆ ಶೇ. 75, ಬೆಳೆ
ಸಾಲಕ್ಕೆ ಶೇ. 20 ಹಾಗೂ 2003ರ ಅನಂತರದ ಸಾಲಕ್ಕೆ ಶೇ. 10 ಮನ್ನಾ
ಮಾಡಲು ನಿಗದಿಗೊಳಿಸಿದ ಮೊಬಲಗಿನಿಂದ ರಾಜ್ಯದ ಒಟ್ಟು 1,35,280
ಕಾಫಿ ಬೆಳೆಗಾರರಿಗೆ ಅನುಕೂಲವಾಗಿದ್ದು ಚಿಕ್ಕಮಗಳೂರು ಜಿÇÉೆಯಲ್ಲಿ 80,256 ಬೆಳೆಗಾರರು ಪ್ರಯೋಜನ ಪಡೆದಿರುತ್ತಾರೆ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆದ್ದಾರಿ ಸಂಪರ್ಕ
ಕುಂದಾಪುರ ಶಾಸ್ತ್ರೀ ಸರ್ಕಲ್‌ ಬಳಿ ಫ್ಲೈಓವರ್‌ ನಿುìಸಲು ಮಂಜೂರಾತಿ, ಕೋಟೇಶ್ವರ ಬೈಪಾಸ್‌ ಸೂಕ್ತ ವಿಸ್ತರಣೆಯೊಂದಿಗೆ ಅಂಡರ್‌ ಪಾಸ್‌ ನಿರ್ಮಿಸಲು ಮಂಜೂರಾತಿ, ಬೀಜಾಡಿ ಒಳ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಎಂಬ್ಯಾಕೆ¾ಂಟ್‌ ತೆಗೆದು ನೆಲ ಮಟ್ಟದ ರಸ್ತೆ ನಿರ್ಮಾಣ, ಬ್ರಹ್ಮಾವರ ಆಕಾಶವಾಣಿ ಬಳಿ ಬಾಕೂìರಿನ ಕಡೆ ಹೋಗುವ ದೊಡ್ಡ ವಾಹನಗಳಿಗೆ ಅಡಚಣೆಯಾಗದಂತೆ ಹಿಂದಿನ ಯೋಜನೆಯನ್ನು ಬದಲಾಯಿಸಿ ಸಾರ್ವಜನಿಕರ ಅಭಿಪ್ರಾಯದಂತೆಯೇ ಕಾಮಗಾರಿ ನಡೆಸಲು ತೀರ್ಮಾನ, ಉಡುಪಿ ಕರಾವಳಿ ಬೈಪಾಸ್‌, ಕಟಪಾಡಿ, ಪಡುಬಿದ್ರಿಯಲ್ಲಿ ಸಾರ್ವಜನಿಕರ ಕೋರಿಕೆಯಂತೆಯೇ ಯೋಜನೆಯಲ್ಲಿ ಬದಲಾವಣೆ, ಬ್ರಹ್ಮಾವರ ಎಸ್‌ಎಂಎಸ್‌ ಕಾಲೇಜು ಮತ್ತು ಕಲ್ಯಾಣಪುರ ಜಂಕ್ಷನ್‌ ಬಳಿ ಪಾದಚಾರಿಗಳಿಗೆ ಫ‌ುಟ್‌ಓವರ್‌ ಬ್ರಿಡ್ಜ್, ಸಾಲಿಗ್ರಾಮ ರಥಬೀದಿಯಲ್ಲಿ ಉಗ್ರನರಸಿಂಹ ದೇವಾಲಯದ ಆಂಜನೇಯ ದೇವಾಲಯದ ವರೆಗೆ ರಾಷ್ಟ್ರೀಯ ಹೆ¨ªಾರಿಗೆ ಸಮನಾಗಿ ಪೂರ್ವ ಮತ್ತು ಪಶ್ಚಿಮ ರಸ್ತೆಗಳನ್ನು ಎತ್ತರಿಸಿ ರಥಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದೆ. ಇವೆಲ್ಲವೂ ಹಿಂದೆ ಕಾಂಗ್ರೆಸ್‌ನಿಂದ ಸಂಸದರಾಗಿದ್ದ ಜಯ ಪ್ರಕಾಶ ಹೆಗ್ಡೆಯವರ ಸಲಹೆಯಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ
ಕೈಗೊಳ್ಳಲಾಗಿತ್ತು ಎಂದಿದ್ದಾರೆ.

ರೈಲು ಸಂಚಾರ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯುಪಿಎ ಅವಧಿಯಲ್ಲಿ ಹಲವು ರೈಲ್ವೇ ಸೌಲಭ್ಯ ಕಲ್ಪಿಸಲಾಗಿದೆ. ಯಶವಂತಪುರ- ಮಂಗಳೂರು ಹಗಲು ರೈಲು ಸಂಚಾರವನ್ನು ಕಾರವಾರದ ವರೆಗೆ ವಿಸ್ತರಣೆ, ಯಶವಂತಪುರ- ಮಂಗಳೂರು ರಾತ್ರಿ ರೈಲು ಸಂಚಾರವನ್ನು ಕಾರವಾರದ ವರೆಗೆ ವಿಸ್ತರಣೆ, ಬೆಂಗಳೂರು – ಮಂಗಳೂರು ಎಕ್ಸ್‌ಪ್ರೆಸ್‌ ರೈಲು (ವಾರಕ್ಕೊಮ್ಮೆ), ಕಡೂರು- ಚಿಕ್ಕಮಗಳೂರು ರೈಲಿಗೆ ಚಾಲನೆ, ಕುಂದಾಪುರದಲ್ಲಿ ಗಣಕೀಕೃತ‌ ಮುಂಗಡ ರೈಲು ಟಿಕೇಟ್‌ ಕಾದಿರಿಸುವ ಕೇಂದ್ರ ಆರಂಭ, ಚಿಕ್ಕಮಗಳೂರು ರೈಲು ನಿಲ್ದಾಣ ಉದ್ಘಾಟನೆ, ಚಿಕ್ಕಮಗಳೂರು – ಸಕಲೇಶಪುರ ರೈಲ್ವೇ ಯೋಜನೆ ಕಾಮಗಾರಿ ಆರಂಭ, ಚಿಕ್ಕಮಗಳೂರು – ಬೆಂಗಳೂರು ಎಕ್ಸ್‌ ಪ್ರಸ್‌ರೈಲು ಮಂಜೂರು, ಬೆಲೆನಹಳ್ಳಿ ರೈಲು ನಿಲ್ದಾಣದಲ್ಲಿ ಚಿಕ್ಕಮಗಳೂರು – ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ನಿಲುಗಡೆ, ಮಡಗಾಂವ್‌- ಮಂಗಳೂರು ಇಂಟರ್ಸಿಟಿ ಎಕ್ಸ್‌ಪ್ರೆಸ್‌ ರೈಲು, ಭಟ್ಕಳ – ಮಂಗಳೂರು ಡಿ.ಇ.ಎಂ.ಯು. ರೈಲು ಆರಂಭ, ಮಂಗಳೂರಿನಿಂದ – ಮಾಹೆ ರೈಲು ಪುದುಚೇರಿಗೆ ವಿಸ್ತರಣೆ, ಬೀರೂರು-ಅಜ್ಜಂಪುರ – ಶಿವನಿ ರೈಲು ಮಾರ್ಗದ ಹಳಿ ದ್ವಿಗುಣ ಕಾಮಗಾರಿ, ಮಂಗಳೂರು -ಕಾಚಿಗುಡರೈಲು ಆರಂಭ ಹಾಗೂ ತಿರುವನಂತಪುರ – ನಿಜಾಮುದ್ದೀನ್‌ಎಕ್ಸ್‌ಪ್ರೆಸ್‌ ರೈಲು ಕೊಂಕಣ್‌ ಮಾರ್ಗದಲ್ಲಿ ಮಂಜೂರು (ಕೊಟ್ಟಾಯಂ ಮತ್ತು ಆಲೆಪಿ ಮೂಲಕ ಬೆರೆ ಬೇರೆ ದಿನಗಳಂದು) ಮಾಡಲಾಗಿತ್ತು ಎಂದಿದ್ದಾರೆ.

ಕೇಂದ್ರೀಯ ವಿದ್ಯಾಲಯವೂ ಯುಪಿಎ ಕೊಡುಗಡೆ
ಮಲ್ಪೆಯಲ್ಲಿರುವ ಕೇಂದ್ರೀಯ ವಿದ್ಯಾಲಯವೂ ಯುಪಿಎ ಅವಧಿಯಲ್ಲಿ ಕಾಂಗ್ರೆಸ್‌ ಸಂಸದ ಜಯಪ್ರಕಾಶ್‌ ಹೆಗ್ಡೆ ಅವಧಿಯಲ್ಲಿ ಮಂಜೂರಾಗಿತ್ತೇ ಹೊರತು ಈಗಲ್ಲ. ಆದರೆ ಸಂಸದೆ ಶೋಭಾ ತಮ್ಮ ಅವಧಿಯದ್ದು ಎಂದು ಹೇಳುತ್ತಿದ್ದಾರೆ. ಇದು ಜನರ ದಾರಿ ತಪ್ಪಿಸುವ ಯತ್ನ ಎಂದು ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ