
ಸೃಷ್ಟಿಕರ್ತನ ಪ್ರತಿಮೆ ನಾಡಿಗೇ ಹೆಮ್ಮೆ: ವಿಶ್ವೇಶ್ವರ ಹೆಗಡೆ ಕಾಗೇರಿ
ಪರಶುರಾಮ ಥೀಂ ಪಾರ್ಕ್‌ಗೆ ವಿಧಾನ ಸಭಾಧ್ಯಕ್ಷರ ಭೇಟಿ
Team Udayavani, Jan 24, 2023, 6:30 AM IST

ಕಾರ್ಕಳ: ಶಿಲ್ಪಕಲೆ ಸಹಿತ ಸಂಸ್ಕೃತಿ, ಕಲೆ, ಸಾಹಿತ್ಯ, ಪ್ರವಾಸೋದ್ಯಮದ ಜತೆಗೆ ಉದ್ಯಮ ಕ್ಷೇತ್ರಕ್ಕೆ ಕಾರ್ಕಳ ಪ್ರಸಿದ್ಧಿ ಪಡೆದಿದೆ. ಈ ಕಿರೀಟಕ್ಕೆ ಪರಶುರಾಮ ಥೀಂ ಪಾರ್ಕ್ ನಿರ್ಮಾಣದಿಂದ ನವಿಲುಗರಿ ಸೇರಿಸಿದಂತಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಕಾರ್ಕಳದ ಬೈಲೂರಿನ ಉಮಿಕ್ಕಳ ಬೆಟ್ಟಕ್ಕೆ ಸೋಮವಾರ ಭೇಟಿ ನೀಡಿ ಪ್ರತಿಮೆಯನ್ನು ವೀಕ್ಷಿಸಿ ಮಾತನಾಡಿದ ಅವರು, ತುಳುನಾಡ ಸೃಷ್ಟಿಕರ್ತ ಪರಶುರಾಮನ ಪ್ರತಿಮೆ ಸ್ಥಾಪನೆ ಅಭಿಮಾನ ಪಡುವ ಕಾರ್ಯ. ಊರಿಗೆ ಕೀರ್ತಿ ತರುವಂತಹ ಐತಿಹಾಸಿಕ ಕಾರ್ಯಕ್ರಮದಿಂದ ಹೆಮ್ಮೆಯಾಗಿದೆ. ಇದು ಕಾರ್ಕಳಕ್ಕೆ ಮಾತ್ರವಲ್ಲಿ ಇಡೀ ನಾಡಿಗೆ ಹೆಮ್ಮೆ ತರುವ ಕಾರ್ಯ ಎಂದು ಶ್ಲಾಘಿಸಿದರು.
ಕನಸುಗಾರ ಸುನಿಲ್
ಸಚಿವ ವಿ. ಸುನಿಲ್ ಓರ್ವ ಕನಸುಗಾರ. ಒಳ್ಳೆಯದು ಆಗಬೇಕು, ಏನಾದರೂ ಮಾಡಬೇಕು ಎಂದು ಸದಾ ಕನಸು ಕಾಣುತ್ತಿರುತ್ತಾರೆ. ಅವರ ಇಚ್ಛಾಶಕ್ತಿ. ಬದ್ಧತೆ ಮೆಚ್ಚುವಂಥದ್ದು ಎಂದು ಸುನಿಲ್ ಕಾರ್ಯವೈಖರಿಯನ್ನು ಕಾಗೇರಿ ಕೊಂಡಾಡಿದರು.
ಸಚಿವ ವಿ. ಸುನಿಲ್ ಕುಮಾರ್ ಕಾಗೇರಿ ಅವರನ್ನು ಸ್ವಾಗತಿಸಿದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ತಾ.ಪಂ. ಇಒ ಗುರುದತ್ತ್, ನಿರ್ಮಿತಿ ಕೇಂದ್ರದ ಅರುಣ್‌ಕುಮಾರ್, ಜಿ.ಪಂ. ಮಾಜಿ ಸದಸ್ಯ ಸುಮಿತ್ ಕೌಡೂರು ಸಹಿತ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
