ಸರಕಾರದ ಆದೇಶ ಬಾರದಿದ್ದರೂ ಶಾಲೆಗಳಲ್ಲಿ ವಾಟರ್‌ ಬೆಲ್‌ ಅನುಷ್ಠಾನ

Team Udayavani, Dec 12, 2019, 5:32 AM IST

ಸಾಂದರ್ಭಿಕ ಚಿತ್ರ

ಮಂಗಳೂರು: ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ 15 ದಿನಗಳೊಳಗೆ ವಾಟರ್‌ ಬೆಲ್‌ ಕಾರ್ಯಕ್ರಮ ಜಾರಿಗೊಳಿಸುವುದಾಗಿ ಹೇಳಿದ್ದ ಸರಕಾರ ತಿಂಗಳಾದರೂ ಆದೇಶ ಹೊರಡಿಸಿಲ್ಲ. ಆದರೆ ಮಕ್ಕಳ ಆರೋಗ್ಯವನ್ನು ಗಮನ ದಲ್ಲಿಟ್ಟು ದ.ಕ. ಜಿಲ್ಲೆಯ ಬಹುತೇಕ ಶಾಲೆ ಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಇದನ್ನು ಪಾಲಿಸಲಾಗುತ್ತಿದೆ.

ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲೆಂದೇ ದಿನಕ್ಕೆ ಮೂರು ಬಾರಿ ಗಂಟೆ ಬಾರಿಸುವ ಬಗ್ಗೆ ವ್ಯಕ್ತಿಯೋರ್ವರು ಟ್ವಿಟರ್‌ನಲ್ಲಿ ಬರೆದುಕೊಂಡದ್ದನ್ನು ಗಮನಿಸಿದ್ದ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ರಾಜ್ಯದ ಶಾಲೆಗಳಲ್ಲಿಯೂ ಮುಂದಿನ 15 ದಿನಗಳೊಳಗೆ ಇದನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದರು. ಆದರೆ ತಿಂಗಳಾದರೂ ಈ ಬಗ್ಗೆ ಸರಕಾರದಿಂದ ಆದೇಶ ಬಂದಿಲ್ಲ. ಆದರೆ ಸರಕಾರದ ಆದೇಶಕ್ಕೆ ಕಾಯದೆ ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ಸರಕಾರಿ ಶಾಲೆಗಳಲ್ಲಿ ಪ್ರತಿದಿನ ಮೂರು ಬಾರಿ ನೀರು ಕುಡಿಯುವುದಕ್ಕಾಗಿ ಗಂಟೆ ಬಾರಿಸುವ ಪರಿಪಾಠ ಒಂದು ತಿಂಗಳಿನಿಂದ ನಡೆದುಕೊಂಡು ಬರುತ್ತಿದೆ. ಸರಕಾರಿ ಮಾತ್ರವಲ್ಲದೆ, ಬೆಂದೂರು ಸೈಂಟ್‌ ಆ್ಯಗ್ನೆಸ್‌ ಶಾಲೆ, ಪುತ್ತೂರಿನ ಅಂಬಿಕಾ ಶಾಲೆ, ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳಲ್ಲಿಯೂ ಇದನ್ನು ಪಾಲಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆಲವು ಶಾಲೆಗಳಲ್ಲಿ ಈ ಯೋಜನೆಯನ್ನು ಸ್ವಯಂಸ್ಫೂರ್ತಿಯಿಂದ ಜಾರಿಗೊಳಿಸಲಾಗಿದೆ.

ಜಾರಿಗೆ ಬಂದರೆ ಪಾಲನೆ
ವಾಟರ್‌ಬೆಲ್‌ ಮಾದರಿ ಯೋಜನೆಗೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ಅನಂತರ ಇದನ್ನು ಉಡುಪಿ ಜಿಲ್ಲೆಯಲ್ಲಿಯೂ ಜಾರಿಗೆ ತರಲಾಗುವುದು.
-ಶೇಷಶಯನ ಕಾರಿಂಜ,  ಉಡುಪಿ ಡಿಡಿಪಿಐ

ವಾಟರ್‌ ಬೆಲ್‌ ಬಗ್ಗೆ ಸರಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಆದರೂ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಸ್ವಯಂಸ್ಫೂರ್ತಿಯಿಂದ ಇದನ್ನು ರೂಢಿಸಿಕೊಂಡಿದ್ದು, ದಿನದಲ್ಲಿ ಮೂರು ಹೊತ್ತು ಬೆಲ್‌ ಬಾರಿಸಿ ಮಕ್ಕಳಿಗೆ ನೀರು ಕುಡಿಯುವಂತೆ ಹೇಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಕಾರ್ಯಕ್ರಮ.
-ವಾಲ್ಟರ್‌ ಡಿಮೆಲ್ಲೊ, ದ.ಕ. ಡಿಡಿಪಿಐ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ