9 ವಿಭಾಗಕ್ಕೆ ತಲಾ 45 ಹೊಸ ಬಸ್‌

Team Udayavani, Dec 29, 2019, 3:38 PM IST

uk-tdy-1

ಶಿರಸಿ: ಒಂಬತ್ತು ವಿಭಾಗಗಳನ್ನು ಒಳಗೊಂಡವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ತಲಾ 45 ಹೊಸ ಬಸ್‌ಗಳನ್ನು ಮಾರ್ಚ್‌ ಒಳಗೆ ಒದಗಿಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ತಿಳಿಸಿದರು. ಅವರು ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಶನಿವಾರ ಶಿರಸಿಯಿಂದ ಹುಬ್ಬಳ್ಳಿಗೆ ಸಂಚರಿಸಲು ಎರಡು ಹೊಸ ಬಸ್ಸನ್ನು ಸೇವೆಗೆ ಒದಗಿಸಿ ಮಾತನಾಡಿದರು.

ಎಂಟು ಲಕ್ಷ ಕಿಮೀ ಓಡಿದ ಬಸ್‌ಗಳು ಸಾಕಷ್ಟಿವೆ. ಅವುಗಳೆಲ್ಲವನ್ನೂ ಏಕಕಾಲಕ್ಕೆ ಬದಲಿಸಲು ಆಗುತ್ತಿಲ್ಲ. ಆದರೂ ಹೊಸ ಬಸ್‌ ಗಳು ಹಾಗೂ ಹೊಸ ಹೊಸ ಮಾರ್ಗಗಳಲ್ಲಿ ಓಡಿಸುವುದು ನಮ್ಮ ಆಶಯವಾಗಿದೆ. ಹತ್ತು ಲಕ್ಷ ಕಿಮೀ ಓಡಿದ ಬಸ್‌ಗಳನ್ನು ಬದಲಿಸಲಾಗುತ್ತದೆ. 36 ಶಾಸಕರು ವಾಯವ್ಯ ಸಂಸ್ಥೆ ವ್ಯಾಪ್ತಿಯಲ್ಲಿದ್ದು, ಅವರೊಂದಿಗೆ ಸಹ ಬರುವ ಬಜೆಟ್‌ನಲ್ಲಿ ಸಂಸ್ಥೆಗೆ ಹೆಚ್ಚಿನ ಅನುದಾನ ಒದಗಿಸಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳ ಬಳಿಯೂ ವಿನಂತಿಸಿಕೊಂಡಿದ್ದೇವೆ ಎಂದರು.

ಶಿರಸಿ ಹಳೆಯ ಬಸ್‌ ನಿಲ್ದಾಣದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಆದರೆ, ಹಳೆ ನೀಲನಕ್ಷೆ ಈಗಿದ್ದ ಕಟ್ಟಡದಲ್ಲೇ ಇತ್ತು. ಆದರೆ, ಇದನ್ನು ಬದಲಿಸಿ ಹೆಚ್ಚಿನ ಬಸ್‌ ಸಂಚರಿಸಲು ಅನುಕೂಲ ಆಗುವಂತೆ ಎಲ್‌ ಆಕಾರದಲ್ಲಿ ಬಳಸಲಾಗುತ್ತದೆ.ಪಕ್ಕದ ಸ್ಥಳವನ್ನೂ ಪಡೆದುಕೊಳ್ಳಲು ಸರಕಾರದ ಮುಂದೆ ಪ್ರಸ್ತಾಪಿಸಲಾಗುತ್ತದೆ. ಶೀಘ್ರ ನೂತನ ಬಸ್‌ ನಿಲ್ದಾಣವನ್ನೂ ನಿರ್ಮಿಸಲಾಗುತ್ತದೆ ಎಂದ ಪಾಟೀಲ, ನೂತನ ಬಸ್‌ ನಿಲ್ದಾಣ ಕಟ್ಟಲು ಹಳೆ ಬಸ್‌ ನಿಲ್ದಾಣ ಕೆಡವಬೇಕಿತ್ತು. ಆದರೆ, ಟೆಂಡರ್‌ ಕರೆದರೂ ಬಂದಿಲ್ಲ. ಈಗ ಸಂಸ್ಥೆಯವರೇ ಅದನ್ನುಕೆಡವುತ್ತಿದ್ದಾರೆ. ಜಾತ್ರೆ ಬಳಿಕ ಈ ಕಾರ್ಯ ನಡೆಯಲಿದೆ ಎಂದರು.

24 ಗಂಟೆ ಬಸ್‌ ನಿಲ್ದಾಣದ ಕ್ಯಾಂಟೀನ್‌ ತೆರೆದಿಡುವಂತೆ ಕ್ರಮ ವಹಿಸಲಾಗುವುದು. ಮಾರಿಕಾಂಬಾ ದೇವಿ ಜಾತ್ರಾಗೆ ಲಕ್ಷಾಂತರ ಭಕ್ತರು ಬರುವ ಕಾರಣ ಅವರಿಗೆ ಅನುಕೂಲ ಆಗುವಂತೆ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇವೆ. ಐದು ಕತ್ರಿಯ ಬಳಿ ಒತ್ತಡ ಕೂಡ ಕಡಿಮೆ ಆಗವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಪಾಟೀಲ, ಬಸ್‌ ನಿಲ್ದಾಣದಲ್ಲಿ ಸಿಸಿಕ್ಯಾಮರಾ ಅಳವಡಿಸಲು ಗುತ್ತಿಗೆ ಕರೆದರೂ ಯಾರೂ ಬಂದಿಲ್ಲ. ನಿಯಮ ಸರಳೀಕರಿಸಿ ಗುತ್ತಿಗೆ ಕರೆಯುವಂತೆ ಸೂಚಿಸಲಾಗಿದೆ. ನಗರಸಭೆ, ತಾಪಂ, ಶಾಸಕರು ಕೂಡ ಸಿಸಿಟಿವಿ ಅಳವಡಿಸುವದಿದ್ದರೆ ಅವಕಾಶ ಕೊಡುವುದಾಗಿ ಹೇಳಿದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ

ಹೆಗಡೆ, ಪ್ರವೀಣ, ರವಿ ಹಳದೋಟ, ವೀಣಾ ಶೆಟ್ಟಿ, ಆರ್‌.ವಿ. ಹೆಗಡೆ, ಶ್ರೀರಾಮ ನಾಯ್ಕ ಇತರರು ಇದ್ದರು.

ಗಮನ ಸೆಳೆದ ಚಾಲನೆ: ನೂತನ ಬಸ್‌ಗಳಿಗೆ ಪೂಜೆ ಸಲ್ಲಿಸಿದ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಸ್ಪಲ್ವ ದೂರ ಓಡಿಸಿಯೂ ಗಮನ ಸೆಳೆದರು. ಬಿಎಸ್‌4 ವಾಹನ ಇದಾಗಿದ್ದು, ಮುಂದೆ ಬಿಎಸ್‌ 6 ಬಸ್‌ಗಳೂ ಬರಲಿವೆ. ಹಾಲಿ ಹುಬ್ಬಳ್ಳಿಗೆ ಇಲ್ಲಿಂದ ಈ ಹೊಸ ಬಸ್‌ಗಳು ಓಡಲಿವೆ ಎಂದೂ ಹೇಳಿದರು.

ಟಾಪ್ ನ್ಯೂಸ್

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

ಪ್ರಶ್ನೆಪತ್ರಿಕೆ ಸೋರಿಕೆಗೆ ಬುಲ್ಡೋಜರ್‌ ಕ್ರಮ? ತಪ್ಪಿತಸ್ಥರಿಗೆ ಭಾರೀ ದಂಡ

ಪ್ರಶ್ನೆಪತ್ರಿಕೆ ಸೋರಿಕೆಗೆ ಬುಲ್ಡೋಜರ್‌ ಕ್ರಮ? ತಪ್ಪಿತಸ್ಥರಿಗೆ ಭಾರೀ ದಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–eweqwe

Ankola:ಹಣ ಕೀಳುತ್ತಿದ್ದ ನಕಲಿ ಮಂಗಳಮುಖಿಗೆ ಹಿಗ್ಗಾಮುಗ್ಗಾ ಗೂಸಾ

police crime

Pune ಸ್ಫೋಟ ಪ್ರಕರಣ: ಭಟ್ಕಳದ ಯುವಕನ ಮನೆಗೆ ನೋಟಿಸ್ ಅಂಟಿಸಿದ ಎಟಿಎಸ್

Gokarna ಅಪಾಯದ ಕಡಲಿನಲ್ಲಿಯೂ ಮೋಜು-ಮಸ್ತಿ ಮಾಡುವ ಪ್ರವಾಸಿಗರು

Gokarna ಅಪಾಯದ ಕಡಲಿನಲ್ಲಿಯೂ ಮೋಜು-ಮಸ್ತಿ ಮಾಡುವ ಪ್ರವಾಸಿಗರು

11-yellapur

Yellapur: ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಪಾರು

3-yellapur

Yellapur: ಜಲಪಾತ ವೀಕ್ಷಿಸಲೆಂದು ಬಂದ ವ್ಯಕ್ತಿ ಈಜಲು ಹೋಗಿ ಮುಳುಗಿ ಸಾವು

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.