ಕೃಷಿಯೇ ನಮಗೆ ದೇವರು: ಸ್ವರ್ಣವಲ್ಲೀ ಶ್ರೀ

•ಕೃಷಿ ಜಯಂತಿ ಸಂಪನ್ನ•ಕೃಷಿ-ತೋಟಗಾರಿಕೆ ವಿಷಯಗಳು ಪ್ರೌಢಶಾಲೆ ಮಕ್ಕಳಿಗೆ ಪಠ್ಯಕ್ರಮವಾಗಲಿ

Team Udayavani, May 18, 2019, 2:45 PM IST

ಶಿರಸಿ:ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧೀರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಿರಸಿ: ಕೃಷಿಯೇ ನಮಗೆ ದೇವರು. ದೇವರ ದರ್ಶನಕ್ಕೂ ಭಕ್ತಿಯ ಕೃಷಿ ಅಗತ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಆಶಿಸಿದರು.

ಶುಕ್ರವಾರ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಕೃಷಿ ಪ್ರತಿಷ್ಠಾನ ಹಮ್ಮಿಕೊಂಡ ಕೃಷಿ ಜಯಂತಿ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು. ಭಗವಂತನ ದರ್ಶನಕ್ಕೆ ಕೃಷಿ ಮಾಡಬೇಕು. ಆಗ ದೇವರ ದರ್ಶನ ಸಾಧ್ಯ. ಲಕ್ಷ್ಮೀ ನೃಸಿಂಹ ಕೂಡ ಬರುತ್ತಾನೆ. ಕೃಷಿಗೂ ಅದೇ ತಪಸ್ಸು ಬೇಕು ಎಂದು ವಿಶ್ಲೇಷಿಸಿದರು.

ಕೃಷಿ ಹಾಗೂ ತೋಟಗಾರಿಕೆ ವಿಷಯವನ್ನು ಪ್ರೌಢಶಾಲೆಯಲ್ಲಿ ಪಾಠ ಮಾಡಿ ಮಕ್ಕಳಿಗೆ ಅಭಿರುಚಿಗೊಳಿಸಬೇಕು. ಅಧಿಕೃತ ರೂಪ ಬರಲು ಪಠ್ಯವಾಗಬೇಕು. ಆಗ ಯುವಕರು ಒಪ್ಪಿಕೊಳ್ಳಲು ಸಾಧ್ಯ. ಕಾನೂನು, ಪಠ್ಯ ಆದರೆ ಅದು ಅಧಿಕೃತವಾಗುತ್ತದೆ. ಪ್ರಾಯೋಗಿಕ ಭಾಗವಾಗಿ ಇಡಬೇಕು ಎಂದರು.

ನೃಸಿಂಹ ಜಯಂತಿ ಎಂದರೆ ಭಗವಂತ ಅವತಾರ ಎತ್ತಿದ ದಿನ. ಪ್ರಹ್ಲಾದ ಎಂಬ ಹುಡುಗನಿಗೋಸ್ಕರ ಕಂಬದಿಂದ ಎದ್ದು ಬಂದ. ವೈರಿಯ ಮಗನಿಗೆ ಎದ್ದು ಬಂದ. ಒಂದೇ ಕಾರಣಕ್ಕೆ ಭಗವಂತ ಅವತಾರ ಎತ್ತಿದ. ಪ್ರಹ್ಲಾದ ಅವನು ಭಕ್ತ ಶ್ರೇಷ್ಠನಾಗಿದ್ದನು ಎಂದ ಶ್ರೀಗಳು, ಪ್ರಹ್ಲಾದನಿಗೆ ಭಕ್ತಿ ಎಂದರೆ ಪ್ರೀತಿ. ಭಕ್ತ ಶ್ರೇಷ್ಠ ಆಗಿದ್ದರಿಂದಲೇ ಅವತಾರ ಎತ್ತಿ ಬಂದ. ಭಗವಂತ ಅವತಾರ ಎತ್ತಲು ಇಂಥದ್ದೊಂದು ಆಕಾರ ಇಲ್ಲ. ಮನುಷ್ಯನೂ ಪ್ರಾಣಿಯೂ ಅಲ್ಲದಂತೆಯೂ ಅವತಾರ ಎತ್ತಿದ್ದ ಎಂದರು.

ಕ್ಯಾಂಮ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ, ಕೃಷಿ ತಜ್ಞ ಶಂಕರ ಬದನಾಜೆ, ಮಠದ ಅಧ್ಯಕ್ಷ ವಿಘ್ನೕಶ್ವರ ಹೆಗಡೆ ಬೊಮ್ಮನಳ್ಳಿ, ಗ್ರಾಮಾಭ್ಯುದಯದ ಅಧ್ಯಕ್ಷ ಶಿವಾನಂದ ದೀಕ್ಷಿತ ಇತರರು ಇದ್ದರು.

ವಿ.ಜಿ. ಹೆಗಡೆ ಗೊಡವೆಮನೆ ಫಲ ಸಮರ್ಪಿಸಿದರು. ಆರ್‌.ಎನ್‌. ಹೆಗಡೆ ಉಳ್ಳಿಕೊಪ್ಪ ಸ್ವಾಗತಿಸಿದರು. ಜಿ.ವಿ. ಹೆಗಡೆ ಹುಳಗೋಳ ನಿರ್ಣಯ ಮಂಡಿಸಿದರು. ಸುರೇಶ್‌ ಹಕ್ಕಿಮನೆ ನಿರ್ವಹಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾವರ: ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆಯವರ ಸೆಲ್ಕೋ ಸೋಲಾರ್‌ ಸಂಸ್ಥೆ ಸೌರಶಕ್ತಿಯನ್ನು ಬಹುಪಯೋಗಿಯಾಗಿ ಗ್ರಾಮೀಣ ಭಾಗದ ಜನತೆಗೆ ಜೀವನಾಧಾರವಾಗಿ...

  • ಭಟ್ಕಳ: ಕಳೆದ ಮೂರು ದಿನಗಳಿಂದ ಶಿರಾಲಿ ಗ್ರಾಪಂನ್ನೇ ಮೀನು ಮಾರುಕಟ್ಟೆಯನ್ನಾಗಿ ಮಾಡಿಕೊಂಡ ಮೀನುಗಾರರ ಬೇಡಿಕೆಗೆ ಸ್ಪಂದಿಸುವಲ್ಲಿ ಗ್ರಾಪಂ ವಿಫಲವಾಗಿದ್ದು...

  • ಮುಂಡಗೋಡ: ಅಪಾರ ಪ್ರಮಾಣದ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಶಿಡ್ಲಗುಂಡಿ ಸೇತುವೆ ಕಾಮಗಾರಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವುದು ಸಾರ್ವಜನಿಕರಿಗೆ...

  • ಶಿರಸಿ: ನಾಡಿನ ಹೆಸರಾಂತ ಮಾರಿಕಾಂಬಾ ದೇವಸ್ಥಾನಕ್ಕೂ ಅನ ಧಿಕೃತ ಫೇಸ್‌ಬುಕ್‌, ವಾಟ್ಸಆ್ಯಪ್‌, ಟ್ವಿಟ್ಟರ್‌ಗಳ ಕಾಟದಿಂದ ಅನಧಿಕೃತ ಮಾಹಿತಿಗಳು ರವಾನೆಯಾಗಿ ಅನೇಕ...

  • ಹೊನ್ನಾವರ: ಜನಜೀವನಕ್ಕೆ ಉತ್ತಮ ಸಂಸ್ಕಾರ ಯಕ್ಷಗಾನ ಕಲೆಯಿಂದ ಸಿಗುತ್ತಿದೆ. ನಾಡಿನಲ್ಲಿ ಯಕ್ಷಗಾನ ಉಳಿಯಬೇಕು. ಇದಕ್ಕೆ ಸರಕಾರ ಮತ್ತು ಸಮಾಜ ಪ್ರೋತ್ಸಾಹ ನೀಡುವ...

ಹೊಸ ಸೇರ್ಪಡೆ