ಕಳಪೆ ರೇಷನ್ ಅಕ್ಕಿ ವಿತರಣೆ:ಆಕ್ರೋಶ
Team Udayavani, Feb 8, 2023, 10:36 AM IST
ಜೋಯಿಡಾ: ತಾಲೂಕಿನಾದ್ಯಂತ ಪೋರ್ಟಿಫೈಡ್ ಅಕ್ಕಿ ಹೆಸರಿನಲ್ಲಿ ಜನರಿಗೆ ರೇಷನ್ ನೀಡಲಾಗುತ್ತಿದ್ದು, ಈ ರೇಷನ್ ಅಕ್ಕಿಯಲ್ಲಿ ಬೇಯಿಸಿದ ಅನ್ನವನ್ನು ಒಣಗಿಸಿ ರೇಷನ್ ಅಕ್ಕಿಯಲ್ಲಿ ಬೆರೆಸಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಜನಸಾಮಾನ್ಯರು ಇಂದಿಗೂ ಸಹಿತ ಇದೇ ರೇಷನ್ ಅಕ್ಕಿ ಊಟ ಮಾಡುತ್ತಾರೆ, ಕಳಪೆ ಮಟ್ಟದ ಅಕ್ಕಿಯನ್ನು ಜನರಿಗೆ ವಿತರಿಸಲಾಗುತ್ತಿದ್ದು, ಈ ಬಗ್ಗೆ ಯಾರು ಹೇಳುವವರು ಕೇಳುವವರೂ ಇಲ್ಲವಾಗಿದ್ದಾರೆ.
ಕಳೆದ ಒಂದು ವರ್ಷಗಳಿಂದ ಈ ಕಳ್ಳ ದಂಧೆ ನಡೆಯುತ್ತಿದ್ದು, ಇದರಿಂದ ಜನರಿಗೆ ಗುಣಮಟ್ಟದ ಅಕ್ಕಿ ಸರಬರಾಜು ಆಗುತ್ತಿಲ್ಲ, ಜನಸಾಮಾನ್ಯರು ದಿನವೂ ಇದೇ ಅಕ್ಕಿ ಊಟ ಮಾಡುತ್ತಿದ್ದು, ಬಡವರ ಕಷ್ಟಕ್ಕೆ ಸ್ಪಂದಿಸುವವರು ಯಾರು ಎನ್ನುವುದು ಪ್ರಶ್ನೆಯಾಗಿದೆ. ಈ ಅಕ್ಕಿ ತೊಳೆಯುತ್ತಿದಂತೆ ಉತ್ತಮ ಅಕ್ಕಿ ಜೊತೆ ಮಿಕ್ಸ್ ಮಾಡಿದ ಕಳಪೆ ಗುಣಮಟ್ಟದ ಅಕ್ಕಿಯು ನೀರಿನಲ್ಲಿ ಮೇಲೆ ತೇಲುತ್ತದೆ, ಅದಾಗಿಯೂ ಅನ್ನವನ್ನು ಮಾಡಿದರೆ ಅಂಟು ಅನ್ನವಾಗಿ ಊಟ ಮಾಡಲು ಸಾಧ್ಯವಾಗುವುದಿಲ್ಲ, ಹೀಗಾಗಿ ಜನರು ರೇಷನ್ ಅಕ್ಕಿಯನ್ನು ಊಟ ಮಾಡಲು ಆಗದೆ, ಸಿಗುವ ರೇಷನ್ ಅಕ್ಕಿಯನ್ನು ಚೆಲ್ಲಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೇಷನ್ ಅಕ್ಕಿಯಲ್ಲಿಯೂ ಕಾಳ ದಂಧೆಯೇ?: ಇಂತಹ ರೇಷನ್ ಅಕ್ಕಿಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆಯೇ ಅಥವಾ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ನೀಡಲಾಗಿದೆಯೇ ಅಥವಾ ಜೋಯಿಡಾ ತಾಲೂಕಿನ ಜನರು ಮುಗ್ಧರು ಎಂದು ಇಲ್ಲಿಯ ಬಡ ಜನರಿಗೆ ಮೋಸ ಮಾಡಲಾಗುತ್ತಿದೆಯೇ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದ್ದು, ಇಂತಹ ರೇಷನ್ ಅಕ್ಕಿ ವಿತರಿಸುವಲ್ಲಿ ಅಧಿಕಾರಿಗಳು ಶಾಮೀಲಿದ್ದಾರೆಯೇ? ಅಥವಾ ಕಾಳ ದಂಧೆಕೋರರ ಕೈವಾಡವೇ? ಎಂಬುದು ತನಿಖೆಯನಂತರ ತಿಳಿದು ಬರಬೇಕಿದೆ.
ಬಡವರ ಅಕ್ಕಿ ಮೇಲೂ ಸರ್ಕಾರದ ಕರಿನೆರಳು
ಒಂದು ವರ್ಷದಿಂದ ಕಳಪೆ ಗುಣಮಟ್ಟದ ರೇಷನ್ ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಈ ಅಕ್ಕಿಯಿಂದ ಅನ್ನಮಾಡಲು ಆಗುವುದಿಲ್ಲ, ನಮಗೆ ರೇಷನ್ ನೀಡುವ ಅಧಿಕಾರಿಗಳು ಈ ಅಕ್ಕಿಯ ಅನ್ನವನ್ನು ಒಮ್ಮೆ ಊಟ ಮಾಡಿ ತೋರಿಸಲಿ.ಕೂಡಲೇ ಜಿಲ್ಲಾಧಿಕಾರಿಗಳು ವ್ಯವಸ್ಥೆ ಸರಿಪಡಿಸಬೇಕು.
ಪರಶುರಾಮ ದೇಸಾಯಿ, ಸ್ಥಳೀಯರು ಯರಮುಖ.
ಈ ಬಗ್ಗೆ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಜನರ ಸಮಸ್ಯೆ ಬಗೆಹರಿಸಿ, ಉತ್ತಮ ಗುಣಮಟ್ಟದ ಅಕ್ಕಿ ನೀಡುವಂತೆ ಕ್ರಮ ಕೈಗೊಳ್ಳುತ್ತೇನೆ.
ಪ್ರಮೋದ ನಾಯ್ಕ ತಹಶೀಲ್ದಾರ್ ಜೋಯಿಡಾ
ಅಧಿಕಾರಿಗಳ ನಿರ್ಲಕ್ಷ್ಯ:
ಕಳೆದ ಒಂದು ವರ್ಷದಿಂದ ಉಣ್ಣಲು ಯೋಗ್ಯವಿಲ್ಲದ ಅಕ್ಕಿಯನ್ನು ಜನರಿಗೆ ನೀಡಲಾಗುತ್ತಿದ್ದರು ಅಧಿ ಕಾರಿಗಳು ಮಾತ್ರ ತಿಳಿದು ತಿಳಿಯದಂತೆ ವರ್ತಿಸುತ್ತಿರುವುದು ಜನರ ಶಾಪಕ್ಕೆ ಗುರಿಯಾಗಿದ್ದಾರೆ. ಬಹಳಷ್ಟು ದಿನಗಳಿಂದ ಇಂತಹ ಅಕ್ಕಿಯನ್ನು ನೀಡಲಾಗುತ್ತಿದ್ದು, ಈ ಅಕ್ಕಿಯನ್ನು ಅಧಿಕಾರಿಗಳು ಒಮ್ಮೆ ಅನ್ನ ಮಾಡಿ ತಿಂದು ನೋಡಲಿ ಎಂಬುದು ಸಾರ್ವಜನಿಕರ ಮಾತಾಗಿದೆ.ಈ ಹಿಂದೆ ಪೂರ್ಟಿಫೈಡ್ ಅಕ್ಕಿ ಎಂದರೆ ಆರೋಗ್ಯಕರ ಅಕ್ಕಿ ಎಂದು ಅರ್ಥ, ಆದರೆ ಪೋರ್ಟಿಫೈಡ್ ಅಕ್ಕಿ ಹೆಸರಿನಲ್ಲಿ ಇಂಥ ಹಾಳಾದ ಅಕ್ಕಿಯನ್ನು ನೀಡಲಾಗುತ್ತಿರುವುದು ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಲಕ್ಷ್ಯವಹಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇಂತಹ ಅಕ್ಕಿಯ ಅನ್ನ ಊಟಕ್ಕೆ ಯೋಗ್ಯವಲ್ಲ, ಇದನ್ನು ಊಂಡರೆ ಹೊಟ್ಟೆಯಲ್ಲಿ ತೊಂದರೆ ಆಗುತ್ತದೆ, ಬಡವರು, ಹೊಟ್ಟೆಗೆ ಅನ್ನ ಇಲ್ಲದವರು ಅನಿವಾರ್ಯವಾಗಿ ಇದೆ. ಅಕ್ಕಿಯಿಂದ ಅನ್ನ ಮಾಡಿ ಊಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಜೋಯಿಡಾ ತಾಲೂಕಿನ ಸಾರ್ವಜನಿಕರು. ಕೂಡಲೇ ಈ ವ್ಯವಸ್ಥೆ ಸರಿಪಡಿಸಿ ಜನರಿಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಸರ್ಕಾರ ನೀಡಬೇಕಿದ್ದು, ಅಧಿಕಾರಿಗಳು ಜನರಿಗೆ ಯಾವ ಗುಣಮಟ್ಟದ ಅಕ್ಕಿ ಸಿಗುತ್ತಿದೆ ಎಂಬುದನ್ನು ಪರಿಶೀಲಿಸಿ ಜನರಿಗೆ ನ್ಯಾಯ ಒದಗಿಸಬೇಕಿದೆ.
ಸಂದೇಶ ದೇಸಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ರೈತರ ಹಕ್ಕಿಗಾಗಿ ಸಂಘಟಿತರಾಗಿ ಹೋರಾಟ ಅನಿವಾರ್ಯ; ಶಾಂತಿ ಪ್ರಸಾದ್ ಹೆಗ್ಡೆ
ಸುಳ್ಯ ನ.ಪಂ. ಸಾಮಾನ್ಯ ಸಭೆ; ನೀರಿನ ಮಿತಬಳಕೆ, ಜಾಗೃತಿ ಅಗತ್ಯ
ಚಿಕ್ಕಮಗಳೂರು: ಮತದಾರರಿಗೆ ಹಂಚಲು ತಂದಿದ್ದ 150 ಕ್ವಿಂಟಾಲ್ ಅಕ್ಕಿ ವಶ
ಎ. 2: “ಬಸಂತ್ ಉತ್ಸವ್’; ಸಿತಾರ್-ಬಾನ್ಸುರಿ ಜುಗಲ್‌ಬಂದಿ