ಭತ್ತದ ಗದ್ದೆ ಇದ್ದರೂ ಅಡಿಕೆಗೆ ಸಿಗಬೇಕಾದ ಸೌಲಭ್ಯಕ್ಕೆ ಖೋತಾ 


Team Udayavani, Oct 20, 2021, 5:00 PM IST

ಭತ್ತದ ಗದ್ದೆ ಇದ್ದರೂ ಅಡಿಕೆಗೆ ಸಿಗಬೇಕಾದ ಸೌಲಭ್ಯಕ್ಕೆ ಖೋತಾ 

ಶಿರಸಿ: ಕೋವಿಡೋತ್ತರ ಸಂಕಷ್ಟದಲ್ಲೇ ಮುಂದುವರಿದ ಬೆಳೆಗಾರರಿಗೆ ನೀಡಬೇಕಿದ್ದ ಪ್ರೋತ್ಸಾಹಕ್ಕೂ ಸರಕಾರ ಕತ್ತರಿ ಹಾಕಿದೆ. ಒಂದಡೆಗೆ ಹನಿ ನೀರಾವರಿಗೆ ಉತ್ತೇಜಿಸಿ ನೀರಿನ ಮಿತ ಬಳಕೆ ಹಾಗೂ ಸಮೃದ್ಧ ಬೇಸಾಯಕ್ಕೆ ನೆರವಾಗಬೇಕಿದ್ದ ತೋಟಗಾರಿಕಾ ಇಲಾಖೆ ಈಗ ಯೋಜನೆಯನ್ನು ಕನ್ನಡಿಯೊಳಗಿನ ಗಂಟಾಗಿಸುತ್ತಿದೆ.

ಕಳೆದ ವರ್ಷ ಅರ್ಜಿ ಸಲ್ಲಿಸಿ, ಕೋವಿಡ್ಸಂಕಷ್ಟದಲ್ಲಿಯೂ ರೈತರು ಹನಿ ನೀರಾವರಿ ಅಳವಡಿಸಿಕೊಂಡಿದ್ದರೆ, ಅದರ ಸಹಾಯಧನದ ಮೊತ್ತ ಪಾವತಿ ಆಗದ ರೈತರಿಗೆ ಈಗ ಇನ್ನಷ್ಟು ದಾಖಲೆ ಕೇಳಿದೆ.

ಅಂದು ಅರ್ಜಿ ಸಲ್ಲಿಸಿದ್ದರೂ ರೈತರಿಗೆ ಸಹಾಯಧನ ಪಾವತಿಸದೇ ಇರುವದು ಸರಕಾರದ ಸಮಸ್ಯೆ. ಆದರೆ, ಈಗ ಆ ಸಹಾಯಧನ ಪಡೆಯಲು ಸರಕಾರ ಭೂಮಿ ಮಾರಾಟಕ್ಕೆ ಬೇಕಾದ ಇಸಿಹಾಗೂ ಮ್ಯುಟೇಶನ್ ಎಂಟ್ರಿ ಕೇಳುತ್ತಿದೆ! ತನ್ನದಲ್ಲದ ತಪ್ಪಿಗೆ ಫಲಾನುಭವಿ ನೆರವುಪಡೆಯಬೇಕಾದರೆ ಕಂದಾಯ ಇಲಾಖೆಗೆ ಅಲೆದಾಟ ಮಾಡಬೇಕಾಗಿದೆ.

ಇನ್ನೊಂದಡೆ 50 ಗುಂಟೆಗಿಂತ ಅರ್ಧ ಅಣೇ ಅಡಿಕೆ ಭಾಗಾಯತ ಹೆಚ್ಚಿದ್ದರೂ ಇಲಾಖೆಯ ಸಬ್ಸಿಡಿ ಶೇ.90ರಷ್ಟು ಸಿಗದಂತೆ ಆಗಿದೆ. ಅರ್ಧ ಎಕರೆ ಅಡಿಕೆ ತೋಟವಿದ್ದು, ಉಳಿದದ್ದು ಭತ್ತದ ಕ್ಷೇತ್ರ, ಮಾಲ್ಕಿ ಬೇಣ ಇದ್ದರೂ ರೈತರಿಗೆ ಈ ಯೋಜನೆಯ ಲಾಭ ಗೇಟ್ ಪಾಸ್ ಆಗಲಿದೆ.

ಮೊದಲೆಲ್ಲ 2 ಹೆಕ್ಟೇರ್ ತನಕ ಶೇ.90 ರಷ್ಟು ಸಹಾಯಧನ ಹಾಗೂ ಅದಕ್ಕೂ ನಂತರದ ಹನಿ ನೀರಾವರಿಗೆ ಶೇ.45ರಷ್ಟು ಸಹಾಯಧನ ಸೌಲಭ್ಯ ಇತ್ತು. ಆದರೆ, ಈಗ ಕಂದಾಯ ಇಲಾಖೆಯ ಪ್ರಮಾಣ ಪತ್ರ ಕೂಡ ಬೇಕಾಗಿದೆ ಎಂದು ತೋಟಗಾರಿಕಾ ಇಲಾಖೆ ಹೇಳುತ್ತಿದ್ದು, ಅದರ ಪರಿಣಾಮ ಕಂದಾಯ ಇಲಾಖೆ ಭಾಗಾಯತ ಗುಣಿಸಿ ಎಕರೆಗೆ ಎರಡುವರೆ ಎಕರೆ ಪ್ರಮಾಣ ಪತ್ರ ನೀಡುತ್ತಿದೆ. ಇದು ಸಮಸ್ಯೆಗೆ ‌ಕಾರಣವಾಗಿದೆ.

ಪ್ರಸಕ್ತ 2021-2022 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿರೈತರಿಗೆ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಕಾಫಿ, ಟೀ ಹಾಗೂ ರಬ್ಬರ ಹೊರತುಪಡಿಸಿ ಹನಿ ನೀರಾವರಿ ಘಟಕಗಳ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿಆಹ್ವಾನಿಸಿದೆ. ರೈತರು ಅನಮೋದಿತ ಹನಿ ನೀರಾವರಿ ಕಂಪನಿಯವರಿಂದ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.

ಸಣ್ಣ, ಅತಿ ಸಣ್ಣ ರೈತ ಪ್ರಮಾಣ ಪತ್ರ ನೀಡಿದವರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 5 ಎಕರೆಗೆ ವರೆಗೆ ಶೇ.90 ರ ಸಹಾಯಧನ, ಅದಕ್ಕಿಂತ ಜಾಸ್ತಿ ಇದ್ದವರಿಗೆ ಶೇ.45 ರ ಸಹಾಯಧನ ಹಾಗೂ ದೊಡ್ಡ ರೈತರಿಗೆ ಒಟ್ಟಾರೆ 12 ಎಕರೆ 20 ಗುಂಟೆವರೆಗೆ ಶೇ.45 ರಷ್ಟು ಸಹಾಯಧನ ಲಭ್ಯವಿದೆ.  ಮೊದಲು ಆರಂಭಕ್ಕೇ ಶೇ.45 ರ ಪ್ರಸ್ತಾಪವೇ ಇದ್ದಿರಲಿಲ್ಲ. ಸರಕಾರದ ಪ್ರಕಾರ 5ಎಕರೆ ಮೇಲ್ಪಟ್ಟ ಇದ್ದವರಿಗೆ ಚಿಕ್ಕ ಹಿಡುವಳಿ ಬರುವದಿಲ್ಲ. ಕಂದಾಯ ಇಲಾಖೆ ಭಾಗಾಯತ ಒಂದುಕಾಲು ಎಕರೆ ಭೂಮಿ ಇದ್ದರೆ ನಾಲ್ಕು ಪಟ್ಟು ಗುಣಿಸಿ ಪ್ರಮಾಣಪತ್ರ ನೀಡುತ್ತದೆ. ಅಲ್ಲಿಗೆ 5ಎಕರೆ ದಾಟುತ್ತದೆ. ಬಡ ರೈತರಿಗೂ ಕಂದಾಯ ಇಲಾಖೆಯ ಗುಣಾಕಾರ ಭಾಗಾಕಾರ ಅರ್ಥವಾಗದೇ ಸಮಸ್ಯೆ ಆಗಿದೆ.

ಮೊದಲೆಲ್ಲ ಸುಲಭ ಹಾಗೂ ಸರಳವಾಗಿದ್ದ ಯೋಜನೆ ಬಳಸಿಕೊಂಡು ಅನೇಕ ರೈತರು ಅಡಿಕೆ, ತರಕಾರಿ ಬೇಸಾಯಗಳಿಗೆ ಹನಿ ನೀರಾವರಿ, ಮೈಕ್ರೋ ಸ್ಪಿಂಕ್ಲರ್ ಸೌಲಭ್ಯ ಸುಲಭವಾಗಿ ಪಡೆದುಕೊಳ್ಳುತ್ತಿದ್ದರು. ಆದರೆ, ಈಗ ಪ್ರಮಾಣಿಕೃತ ಏಜೆಂಟರ ಬದಲಾಗಿ ನೇರವಾಗಿ ಕಂಪನಿಯಿಂದಲೇ ನೀಲನಕ್ಷೆ ತರಿಸಬೇಕಾಗಿದೆ. ಏನೇ ಸಮಸ್ಯೆ ಆದರೂ ಸಿದ್ದಗೊಳಿಸಿದ, ಅಥವಾನಿರ್ವಹಣಾ ಜವಬ್ದಾರಿ ವಸ್ತು ನೀಡಿದ ಏಜೆಂಟರಿಗೆಸಂಬಂಧವೇ ಇಲ್ಲ. ಕೆಳ ಹಂತದಲ್ಲಿ ಗೋಲ್ಮಾಲ್ ಆಗುತ್ತದೆ ಎಂದು ಹೀಗೆ ಸರಕಾರ ಮಾಡಿದೆ ಎಂದು ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಅದಾಯ್ತು, ಆದರೆ,ಕಾಗದಪತ್ರಗಳ ಕಟ್ಟಳೆ ಏನು ಎಂದು ಕೇಳಿದರೆ ಅಧಿಕಾರಿಗಳ ಬಳಿ ಉತ್ತರವೇ ಇಲ್ಲವಾಗಿದೆ.

ಮೊದಲು ರೈತರ ಪಹಣಿ, ಹಾತ್ ನಕಾಶೆ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ೨೦ ರೂ. ಬಾಂಡ್, ಬಾವಿ ಸರ್ಟಿಫಿಕೇಟ, ಮಣ್ಣು ನೀರು ತಪಾಸಣೆ ವರದಿಗಳು, ರೇಷ್ಮೆ, ಕೃಷಿ ಇಲಾಖೆಯ ನಿರಪೇಕ್ಷಣಾ ಪ್ರಮಾಣಪತ್ರ ಬೇಕಿದ್ದವು.

ಆದರೆ, ಈಗ ಹಳೆ ಬಾಕಿ ಪಡೆದುಕೊಳ್ಳಲು ಸರಕಾರ ಭೂಮಿ ಪರಭಾರೆ ಮಾಡುವಾಗ ಕೇಳುವ ಕಂದಾಯ ಇಲಾಖೆ ನೀಡುವ 5 ವರ್ಷದ ಇಸಿ ಹಾಗೂ ಮ್ಯುಟೇಶನ್ ಎಂಟ್ರಿ ಕೂಡಬೇಕಾಗಿದೆ. ಈ ಮಧ್ಯೆ ಹನಿ ನೀರಾವರಿಗೆ ಬಳಕೆಗೆಬೇಕಾಗುವ ಉಪಕರಣಗಳಮಾರುಕಟ್ಟೆಯ ದರಕ್ಕೂ, ಸರಕಾರದಗೈಡ್‌ಲೈನ್ ದರಕ್ಕೂ ಸಂಬಂಧವೇ ಇಲ್ಲ.ಸಾಕಷ್ಟು ದರದ ವ್ಯತ್ಯಾಸವಿದೆ. ಇದರಿಂದ ರೈತರಿಗೆ ಉತ್ತರಿಸುವದೂ ಕಷ್ಟವಾಗುತ್ತದೆ ಎನ್ನುತ್ತಾರೆ ಸಿದ್ಧ ಏಜನ್ಸಿಯ ರೋಹಿತ್ ಹೆಗಡೆ.

ಶೇ.45 ರಷ್ಟು ಸಹಾಯಧನ ಪಡೆಯಲು ಹೋದರೆ ಕಾಗದಪತ್ರಗಳ ಅಲೆದಾಟಕ್ಕೇ ಅಧಿಕ ಖರ್ಚಾಗುತ್ತದೆ. ಸರಕಾರ ರೈತರ ಪಾಲಿಗೆ ಯೋಜನೆಯನ್ನು ಗಗನ ಕುಸುಮವಾಗಿಸಿದೆ. – ಕಮಲಾಕರ ನಾಯ್ಕ, ರೈತ

ಹನಿ ನೀರಾವರಿ ಯೋಜನೆಗೆ ಎರಡು ಹೆಕ್ಟೇರ್ ಇದ್ದರೆ ಅಥವಾ ಕಡಿಮೆ ಇದ್ದರೆ ಸಣ್ಣ ರೈತರು. ಆದರೆ, ಕಂದಾಯ ಇಲಾಖೆ ಅದನ್ನು ಗುಣಿಸುವದು ಬಹುತೇಕ ರೈತರಿಗೆತೊಂದರೆ ಆಗುತ್ತಿದೆ. ಸರಕಾರದಗಮನಕ್ಕೆ ಕೂಡ ತರುತ್ತಿದ್ದೇವೆ. ಮೊದಲು 2 ಹೆಕ್ಟೇರ್‌ಗೆ ಶೇ.90, ನಂತರ ಶೇ.45 ಸಹಾಯಧನ ಇತ್ತು. ಆದರೆ, ಈಗ ನಿಯಮ ಬದಲಾಗಿದೆ. 5 ಎಕರೆ ಒಳಗೆ ಇದ್ದರೆ ಶೇ.೯೦ ಹಾಗೂ ನಂತರ ಉಳ್ಳವರಿಗೆ ಶೇ.45 ಸಹಾಯಧನ ಸಿಗಲಿದೆ. – ಬಿ.ಪಿ.ಸತೀಶ, ಉಪ ನಿರ್ದೇಶಕರು ಜಿಲ್ಲಾ ತೋಟಗಾರಿಕೆ ಇಲಾಖೆ

 

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದೆಹಲಿ ಬೈಕ್ ಮಾಲೀಕರಿಗೆ ಶುರುವಾದ “ಸೆಕ್ಸ್” ಸಮಸ್ಯೆ

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

bommai

ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುತ್ತೇವೆ: ಸಿಎಂ ಬೊಮ್ಮಾಯಿ

ಕ್ರೆಡಿಟ್ ಕಾರ್ಡ್ ನಿಂದ ಬೆಂಕಿಪೊಟ್ಟಣ ದರದವರೆಗೆ..: ಇಂದಿನಿಂದ ಏನೇನು ಬದಲಾವಣೆ?

ಕ್ರೆಡಿಟ್ ಕಾರ್ಡ್ ನಿಂದ ಬೆಂಕಿಪೊಟ್ಟಣ ದರದವರೆಗೆ..: ಇಂದಿನಿಂದ ಏನೇನು ಬದಲಾವಣೆ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fight

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

ಸುಧೀರ್‌ ಶೆಟ್ಟಿ

ಹಾಲಿನ ವ್ಯಾಪಾರದಲ್ಲಿ ಯಶಸ್ಸು ಕಂಡ ಸ್ನಾತಕೋತ್ತರ ಪದವೀಧರ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟನೆ

ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟನೆ

1-ffdf

ಮಂಜುಗಣಿಯಲ್ಲಿ ಜಯತೀರ್ಥ ಮೇವುಂಡಿ ಗಾನ ನಾದ ಸೇವೆ

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

high court

ಸಿಡಿ ತನಿಖಾ ವರದಿ ಅನುಮೋದಿಸಿದ ಎಸ್‌ಐಟಿ

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

fight

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದೆಹಲಿ ಬೈಕ್ ಮಾಲೀಕರಿಗೆ ಶುರುವಾದ “ಸೆಕ್ಸ್” ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.