ಬೇಡ್ತಿ-ಅಘನಾಶಿನಿ ಸಂರಕ್ಷಣಾ ಸಮಿತಿ ತೀರ್ಮಾನಕ್ಕೆ ಬದ್ಧ

ಪರಿಸರ ಸಂರಕ್ಷಣಾ ಜವಾಬ್ದಾರಿ ವೈಯಕ್ತಿಕ ನೆಲೆಯಲ್ಲಿ ಹೆಚ್ಚಿಸಿಕೊಳ್ಳಬೇಕು: ಸ್ಪೀಕರ್‌ ಕಾಗೇರಿ

Team Udayavani, Jun 6, 2022, 3:07 PM IST

16

ಶಿರಸಿ: ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಭವಿಷ್ಯದಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಿದ್ದು, ಅದರ ಅನುಷ್ಠಾನಕ್ಕೆ ಸರಕಾರದ ಮಟ್ಟದಲ್ಲೂ ಪ್ರಾಮಾಣಿಕ ಪ್ರಯತ್ನ ನಡೆಸುವದಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.

ಅವರು ಶಾಲ್ಮಲಾ ನದಿ ತಟದ ಸಹಸ್ರಲಿಂಗದಲ್ಲಿ ರವಿವಾರ ಜಾಗತಿಕ ಪರಿಸರ ದಿನಾಚರಣೆ ನಿಮಿತ್ತ ನದಿ ಪೂಜೆ ಸಲ್ಲಿಸಿ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ಬೇಡ್ತಿ ವರದಾ ನದಿ ಜೋಡಣೆ ವಿರೋಧಿ ಅಭಿಯಾನ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಕೊಳ್ಳ ಸಂರಕ್ಷಣಾ ಸಮಿತಿ ಪದಾಧಿಕಾರಿಯಾಗಿ ನಾನೂ ಇದ್ದೇನೆ. ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನೇತೃತ್ವದ ಸಮಿತಿ ಯಾವ ತೀರ್ಮಾನ ಕೈಗೊಳ್ಳುವುದೋ ಅದಕ್ಕೆ ಬದ್ಧ ಇದ್ದೇನೆ. ಪರಿಸರ ಸಂರಕ್ಷಣಾ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ವೈಯಕ್ತಿಕ ನೆಲೆಯಲ್ಲಿ ಹೆಚ್ಚಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಪರಿಸರ ಸಂರಕ್ಷಣೆಗೆ ಭಾರತದ ನೇತೃತ್ವದಲ್ಲಿ ವಿಶ್ವದ ಕೆಲಸ ನಡೆಯುತ್ತಿದೆ. ಪರಿಸರ ನಾಶ, ಸಂರಕ್ಷಣೆ ಎರಡೂ ಕೆಲಸ ಆಗುತ್ತಿದೆ. ಪರಿಸರ ನಾಶದ ವೇಗ ಹೆಚ್ಚೋ, ಸಂರಕ್ಷಣೆಯ ವೇಗ ಹೆಚ್ಚೋ ನಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಜನಜೀವನ ಅಗತ್ಯತೆ ಪೂರೈಸಿಕೊಳ್ಳುವ ಧಾವಂತದಲ್ಲಿ ಭವಿಷ್ಯದ ಪೀಳಿಗೆಯ ಜನಜಾಗೃತಿ ಇದ್ದರೂ ಕೈಗಾರಿಕೆಗಳು ಸೇರಿದಂತೆ ಹತ್ತಾರು ಕಾರಣಗಳಿಂದ ಪರಿಸರದ ಮೇಲಿನ ದಾಳಿಯೂ ಹೆಚ್ಚಾಗಿದೆ. ತ್ಯಾಜ್ಯ ನದಿ ಸೇರುವುದು ನೋಡಿದರೂ ಆತಂಕ ಆಗುತ್ತದೆ. ಪರಿಸರಕ್ಕೆ ಆಘಾತ ಕೂಡ ಆಗುತ್ತಿದೆ. ಪ್ಲಾಸ್ಟಿಕ್‌ ಕೂಡ ಸಮಸ್ಯೆ ಆಗಿದೆ. ಇರುವುದು ಒಂದೇ ಭೂಮಿ. ಇದರ ಸಂರಕ್ಷಣೆ ಆಗಬೇಕು. ನಮ್ಮ ಸಂಪತ್ತು ಬರಿದಾಗಿದೆ. ಬರಡಾಗುವುದು ಇದೆ ಎಂಬುದನ್ನು ನೆನಪಿಸಿಕೊಂಡರೂ ಆತಂಕ ಆಗುತ್ತದೆ. ಭೂ ತಾಪಮಾನ ಹೀಗೇ ಏರಿದರೆ ನಮ್ಮ ಹಾಗೂ ಭವಿಷ್ಯದ ಜೀವನದಲ್ಲಿ ಏನೆಲ್ಲ ನೋಡಬೇಕಾಗಿದೆಯೋ ಎಂಬ ನೋವೂ ಇದೆ ಎಂದರು.

ಕರಪತ್ರ ಬಿಡುಗಡೆಗೊಳಿಸಿದ ಹಿರಿಯ ಲೇಖಕ ನಾಗೇಶ ಹೆಗಡೆ, ಪವಿತ್ರ ಜೋಡಿ ನದಿಗಳು ಅಘನಾಶಿನಿ, ಬೇಡ್ತಿ ಇದೆ. ಇದು ನಮ್ಮ ನಾಡಿನ ಏಕೈಕ ಪರಿಶುದ್ಧ ನದಿಗಳು. ಈಗಲಾದರೂ ಮಾನವನ ಹಕ್ಕು ಸರಕಾರ ಕೊಡಬೇಕು. ಅದರಿಂದ ಕಾನೂನಾತ್ಮಕವಾಗಿ ಪರಿಸರ ಕೆಲಸ ಮಾಡಬೇಕು ಎಂದ ಅವರು, ನದಿ ನೀರಿಗೆ ಹರಿವ, ಮರಗಿಡಗಳು ಬೆಳೆಯಲು, ಪ್ರಾಣಿಗಳಿಗೆ ಸ್ವತ್ಛಂದ ಓಡಾಡುವ ಸ್ವಾತಂತ್ರ್ಯ ಬೇಕಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪರಿಸರ ಸಂರಕ್ಷಣಾ ಆಂದೋಲನ ಮಾಡಿದ್ದು ಶಿರಸಿಯಲ್ಲೇ ಎಂದರು.

ಧಾರವಾಡ ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸದಾಶಿವಳ್ಳಿ ಪಂಚಾಯ್ತಿ ಅಧ್ಯಕ್ಷ ನಾಗರಾಜ್‌ ಹೆಗಡೆ, ಸೋಂದಾ ಪಂಚಾಯ್ತಿ ಅಧ್ಯಕ್ಷೆ ಮಮತಾ ಜೈನ್‌, ಭೈರುಂಬೆ ಪಂಚಾಯ್ತ ಅಧ್ಯಕ್ಷ ರಾಘು ನಾಯ್ಕ, ಎಪಿಎಂಸಿ ಅಧ್ಯಕ್ಷೆ ಸವಿತಾ ಹುಳಗೋಳ, ಭೈರುಂಬೆ ಸೊಸೈಟಿ ಉಪಾಧ್ಯಕ್ಷ ಆರ್‌.ಎಸ್‌. ಹೆಗಡೆ ನಿಡಗೋಡ, ಮಠದ ಅಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ನಳ್ಳಿ ಇತರರು ಇದ್ದರು. ಸುರೇಶ ಹಕ್ಕಿಮನೆ ನಿರ್ವಹಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.

ಮಾನವ ಪ್ರಕೃತಿ ಪೂರಕವಾಗಿ ರೂಪಿಸುವ ಕಾರ್ಯ ಆಗಬೇಕು. ನಾಳಿನ ಜನಾಂಗಕ್ಕೆ ಇರುವುದೊಂದು ಭೂಮಿ ಉಳಿಸಿಕೊಡಬೇಕು. –ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ನೆನಪಿಡುವ ಪೂರ್ವಜರಾಗೋಣ. ಮುಂದಿನ ಮಕ್ಕಳಿಗೆ ಈ ಭೂಮಿ ಕೊಡಬೇಕಿದೆ. ಅದಕ್ಕಾಗಿ ನಾವೂ ನೆನಪಿಡುವ ಪೂರ್ವಜರಾಗೋಣ. –ನಾಗೇಶ ಹೆಗಡೆ, ಹಿರಿಯ ಬರಹಗಾರ

ಸಂವಿಧಾನದ ಆಶಯದ ಚಿಂತನೆಯಂತೆ ಪರಿಸರ ಸಂರಕ್ಷಣಾ ಜಾಗೃತಿಗೂ ಶಾಸನ ಸಭೆಯಲ್ಲಿ ಚಿಂತನಾ ಸಮಾವೇಶ ಮಾಡಬೇಕಿದೆ. -ಅನಂತ ಅಶೀಸರ, ಜೀವವೈವಿಧ್ಯ ಮಂಡಳಿ

ನಿಕಟಪೂರ್ವ ಅಧ್ಯಕ್ಷ ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನದ ಆರಂಭ. ಬೇಡ್ತಿ ನದಿ ನೀರನ್ನು ತಿರುಗಿಸುವ ಯೋಜನೆ ಮತ್ತೆ ಬಂದಿದ್ದು ಜೂ.14ಕ್ಕೆ ಮಂಚಿಕೇರಿ ಬೃಹತ್‌ ಸಮಾವೇಶ ನಡೆಯಲಿದೆ. –ವಿ.ಎನ್‌. ಹೆಗಡೆ ಬೊಮ್ನಳ್ಳಿ, ಮಠದ ಅಧ್ಯಕ್ಷ

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.