
ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ
Team Udayavani, May 20, 2022, 8:24 PM IST

ಭಟ್ಕಳ: ತಾಲೂಕಿನಲ್ಲಿ ಸುರಿಯುತ್ತಿದ್ದ ಭಾರೀ ಮಳೆ ಬೆಳಿಗ್ಗೆಯಿಂದಲೇ ಬಿಡುವು ನೀಡಿದ್ದು ಬಹುತೇಕ ನೀರು ತುಂಬಿದ್ದ ಪ್ರದೇಶಗಳಲ್ಲಿನ ನೀರು ಒಣಗಿದ್ದು ಅಪಾಯದ ಪರಿಸ್ಥಿತಿಯಿಂದ ಕೊಂಚ ಹೊರಬಂದಂತಾಗಿದೆ.
ಬುಧವಾರ ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದು ಎಲ್ಲಿಯೂ ತಿರುಗಾಡದಂತಾಗಿತ್ತು.
ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆಯ ತನಕ ಒಟ್ಟೂ 187.2 ಮಿ.ಮಿ. ಮಳೆಯಾಗಿದ್ದು ಇಲ್ಲಿಯ ತನಕ ಒಟ್ಟೂ 360.8 ಮಿ.ಮಿ. ಮಳೆಯಾದಂತಾಗಿದೆ. ಮೇ. 19ರಂದು ರಾತ್ರಿ ಮಾರುಕೇರಿ ಗ್ರಾಮ ಪಂಚಾಯತ್‌ನ ಕೋಟಖಂಡ ಮಜಿರೆಯ ಮಾಸ್ತಿ ಸುಕ್ರ ಗೊಂಡ ಎನ್ನುವವರ ಮನೆಯು ಸಂಪೂರ್ಣ ಕುಸಿದು ಹಾನಿಯಾಗಿದ್ದು ಯಾರೂ ವಾಸ್ತವ್ಯ ಇಲ್ಲದಿರುವುದರಿಂದ ಅಪಾಯದಿಂದ ಪಾರಾದಂತಾಗಿದೆ.
ಮೇ. 20 ರಂದು ಸುರಿದ ಭಾರೀ ಮಳೆಗೆ ಕಾಯ್ಕಿಣಿಯ ಶಂಕರ ಮುರ್ಡೇಶ್ವರ ಬಾಕಡ ಎನ್ನುವವರ ಮನೆಗೆ ಭಾಗಶ ಹಾನಿಯಾಗಿದೆ. ಮೂಡಶಿರಾಲಿಯ ಶಿವಮ್ಮ ಜಟ್ಟ ನಾಯ್ಕ ಎನ್ನುವವರ ಮನೆಗೆ ಕೂಡಾ ಹಾನಿಯಾಗಿದ್ದು ಮನೆಯು ಸಂಪೂರ್ಣ ಕುಸಿದು ಬಿದ್ದಿದೆ. ಒಟ್ಟಾರೆ ತಾಲೂಕಿನಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಹಾನಿ ಸಂಭವಿಸಿದ್ದು ಇನ್ನೂ ಕೂಡಾ ಅಪಾಯದ ಮುನ್ಸೂಚನೆ ಇದೆ. ತಾಲೂಕಾ ಆಡಳಿತ ಎಲ್ಲಾ ನೋಡಲ್ ಅಧಿಕಾರಿಗಳಿಗೆ ಜಾಗೃತ ಸ್ಥಿತಿಯಲ್ಲಿ ಇರಲು ಸೂಚನೆ ನೀಡಿದ್ದು ಯಾವುದೇ ರೀತಿಯ ಅಪಾಯ ಎದುರಾದರೂ ಸಹ ತಕ್ಷಣ ಸ್ಪಂಧಿಸಲು ಸಿದ್ಧತೆಯಲ್ಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

ಕೆಂಪಣ್ಣ ಹೊಸ ಕಮಿಷನ್ ಬಾಂಬ್ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

Kerala ಸರಕಾರದ ಆದೇಶ ಕಚೇರಿಗಳ ಫಲಕ ಮಲಯಾಳದಲ್ಲಿ- ಗಡಿನಾಡಿನ ಕನ್ನಡ ಫಲಕಗಳಿಗೆ ಕತ್ತರಿ ಆತಂಕ

Kukke Subrahmanya: ಡಿ. 10 – 24 ಕುಕ್ಕೆಯಲ್ಲಿ ಚಂಪಾಷಷ್ಠಿ ಮಹೋತ್ಸವ

Law: ನಾಳೆ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್
MUST WATCH
ಹೊಸ ಸೇರ್ಪಡೆ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್

ಕೆಂಪಣ್ಣ ಹೊಸ ಕಮಿಷನ್ ಬಾಂಬ್ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ