ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆಗೆ ಬ್ರೆಕ್‌

ನಿರಾಶರಾದ ಸಾವಿರಾರು ಪ್ರವಾಸಿಗರು: ಪ್ರವಾಸೋದ್ಯಮಕ್ಕೆ ಹಿನ್ನಡೆ

Team Udayavani, Apr 18, 2022, 4:39 PM IST

24

ಕಾರವಾರ: ಕಾಳಿ ನದಿ ಹರಿವ ಗಣೇಶ ಗುಡಿ ವ್ಯಾಪ್ತಿಯಲ್ಲಿ ಜಲ ಸಾಹಸ ಕ್ರೀಡೆ ಸೇರಿದಂತೆ ರಿವರ್‌ ರಾಫ್ಟ್‌ ನಡೆಸದಂತೆ ಜಿಲ್ಲಾಧಿಕಾರಿ ಮೌಖೀಕ ಆದೇಶದ ಹಿನ್ನೆಲೆಯಲ್ಲಿ ರವಿವಾರ ಸಾವಿರಾರು ಪ್ರವಾಸಿಗರು ನಿರಾಶೆಯಿಂದ ವಾಪಾಸ್‌ ಮರಳಿದ್ದಾರೆ.

ಇಳವಾ ಬಳಿ ಕಾಳಿ ನದಿಯಲ್ಲಿ ರ್ಯಾಪಿಡ್‌ ವಾಟರ್‌ ಬೋಟಿಂಗ್‌ ನಡೆವ ಸ್ಥಳಕ್ಕೆ ಆಗಮಿಸಿದ ಪ್ರವಾಸಿಗರು ಜಲ ಸಾಹಸ ಕ್ರೀಡೆಗಳ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ ವಾಪಾಸ್‌ ಆಗಿದ್ದಾರೆ. ರಜಾ ದಿನಗಳಲ್ಲಿ ವಾಟರ್‌ ಸ್ಪೋರ್ಟ್ಸ್ ಮಾಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ವಾಡಿಕೆ. ಅಲ್ಲದೇ ಕೋವಿಡ್‌ ನಂತರದ ದಿನಗಳಲ್ಲಿ ವಾಟರ್‌ ಸ್ಪೋರ್ಟ್ಸ್ ಕಾಳಿ ನದಿಯಲ್ಲಿ ಗರಿಗೆದರಿದ್ದು, ಸಾವಿರಾರು ಪ್ರವಾಸಿಗರು ಆಗಮಿಸಲು ಆರಂಭಿಸಿದ್ದರು.

ಕಳೆದ ಗುರುವಾರ ಏ. 14 ರಂದು ಅಡ್ವೆಂಚರ್ ಬೋಟ್‌ನಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಹಾಕಿದರೆಂಬ ಕಾರಣಕ್ಕೆ ಬೋಟ್‌ ರ್ಯಾಪಿಡ್‌ ವೇಳೆ ಕಲ್ಲಿಗೆ ತಾಗಿ ವಾಲಿತ್ತು. ತಕ್ಷಣವೇ ಪಕ್ಕದಲ್ಲಿದ್ದ ಮತ್ತೂಂದು ರ್ಯಾμಡ್‌ ಬೋಟ್‌ ಎಲ್ಲ ಪ್ರವಾಸಿಗರನ್ನು ರಕ್ಷಿಸಿತ್ತು. ವಾಟರ್‌ ಬೋಟ್‌ ರ್ಯಾಪಿಡ್‌ ವೇಳೆ ವಾಲಿರಲಿಲ್ಲ. ರ್ಯಾಪಿಡ್‌ ನಂತರ ಕಲ್ಲು ಬಂಡೆಗಳ ಮಧ್ಯೆ ಹರಿವ ನದಿಯಲ್ಲಿ ಜಾಕೋಜಿ ಬಾತ್‌ ಬಳಿ ಆಗಮಿಸಿದಾಗ ಬೋಟ್‌ ವಾಲಿತ್ತು ಎಂದು ಸಹ ಹೇಳಲಾಗುತ್ತಿದೆ.

ಘಟನೆ ನಂತರ ರಾಮನಗರ ಪೊಲೀಸರು ವಾಟರ್‌ ನ್ಪೋರ್ಟ್‌ ಆಯೋಜಕರ ವಿರುದ್ಧ ಪ್ರಕರಣ ಸಹ ದಾಖಲಿಸಿದ್ದರು. ನಂತರ ಸ್ಥಳಕ್ಕೆ ಏ. 16ರಂದು ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ಜಲ ಸಾಹಸ ಕ್ರೀಡೆಗಳನ್ನು ನಿಲ್ಲಿಸುವಂತೆ ಮೌಖೀಕವಾಗಿ ಆದೇಶಿಸಿದ್ದಾರೆ ಎನ್ನಲಾಗಿದೆ.  ರವಿವಾರ ಎಲ್ಲ ರೆಸಾರ್ಟ್‌ಗಳ ಬಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಹಾಗೂ ಜಲ ಸಾಹಸ ಕ್ರೀಡೆ ಹಾಗೂ ರಾಫ್ಟ್‌ ನಡೆಸುವ ಬಗ್ಗೆ ಇರುವ ಅನುಮತಿ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.

ರಿವರ್‌ ರ್ಯಾಪಿಡ್‌ ರಾಫ್ಟ್‌ ಆಯೋಜಿಸುವವರ ಪೈಕಿ ಒಬ್ಬರು ಮಾಡಿದ ತಪ್ಪಿಗೆ ಕಾಳಿ ನದಿಯಲ್ಲಿ ನಡೆಯುವ ಎಲ್ಲ ಜಲ ಸಾಹಸ ಚಟುವಟಿಕೆ ನಿಲ್ಲಿಸುವುದು ಸರಿಯಲ್ಲ. ಎಲ್ಲ ಜಲ ಸಾಹಸ ಮತ್ತು ರ್ಯಾಪಿಡ್‌ ವಾಟರ್‌ ಬೋಟಿಂಗ್‌ ಆಯೋಜಕರ ಕಾರ್ಯ ಚಟುವಟಿಕೆ ನಿಲ್ಲಿಸಿ ಪ್ರವಾಸೋದ್ಯಮ ಚಟುವಟಿಕೆಗೆ ತಡೆ ನೀಡುವುದು ಸರಿಯಲ್ಲ.

ಪ್ರವಾಸೋದ್ಯಮವನ್ನು ಅತ್ಯಂತ ಕಾಳಜಿಯಿಂದ ನಡೆಸಿ ಎಂದು ತಾಕೀತು ಮಾಡಲಿ ಎಂಬ ಮಾತು ಕೇಳಿ ಬಂದಿದೆ. ದಾಂಡೇಲಿ, ಜೋಯಿಡಾಕ್ಕೆ ಬರುವ ಪ್ರವಾಸಿಗರು ಜಲಸಾಹಸ ಮಾಡಲು ವಾಟರ್‌ ಬೋಟಿಂಗ್‌ ಚಟುವಟಿಕೆಗಾಗಿ ಗಣೇಶ ಗುಡಿ ಸುತ್ತಮುತ್ತ ಆಗಮಿಸುವುದು ಸಹಜ.  ಈಗ ತಾನೇ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲಿ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಕ್ರಮಬದ್ಧವಾಗಿ ರ್ಯಾಪಿಡ್‌ ವಾಟರ್‌ ಬೋಟಿಂಗ್‌: ಕಾಳಿ ನದಿಯಲ್ಲಿ ಇಳವಾ ಬಳಿ ಇರುವ ವೈಟ್‌ ವಾಟರ್‌, ಬೈಸನ್‌, ಹಾರ್ನಬಿಲ್‌ ರೆಸಾರ್ಟ್‌ಗಳು ಕ್ರಮಬದ್ಧವಾಗಿ ಜಲ ಸಾಹಸ ಚಟುವಟಿಕೆಗಳನ್ನು ನಡೆಸುತ್ತಿವೆ. ವೈಟ್‌ ವಾಟರ್‌ ಬಂದರು ಇಲಾಖೆಯಿಂದ ಬೋಟಿಂಗ್‌ಗೆ ಅನುಮತಿ ಪಡೆದಿದೆ.  ರ್ಯಾಪಿಡ್‌ ವಾಟರ್‌ ಬೋಟಿಂಗ್‌ ಚಟುವಟಿಕೆಗಳನ್ನು ಪ್ರವಾಸಿಗರಿಗೆ ಲೈಫ್‌ ಜಾಕೆಟ್‌ ಹಾಗೂ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಹಾಕಿಸಿಯೇ ರ್ಯಾಪಿಡ್‌ ಬೋಟಿಂಗ್‌ ಮಾಡಿಸುತ್ತದೆ. ತನ್ನ ಜಮೀನು ವ್ಯಾಪ್ತಿಯ ನದಿ ಪಾತ್ರದ 300 ಮೀಟರ್‌ ವ್ಯಾಪ್ತಿಯಲ್ಲಿ ಮಾತ್ರ ಜಲ ಕ್ರೀಡೆಗಳನ್ನು ನಡೆಸುತ್ತದೆ.

ಅಲ್ಲದೆ ನುರಿತ ಈಜುಗಾರರು ಹಾಗೂ ಬೋಟ್‌ ನಡೆಸುವ ಟ್ರೆçನಿಗಳನ್ನು ಹೊಂದಿದೆ. 3 ಕಿ.ಮೀ.ನಿಂದ ಹಾಗೂ ಅದಕ್ಕೂ ದೂರದ ರಾಫ್ಟಿಂಗ್ ಮಾಡುವುದು ಜಂಗಲ್‌ ಲಾಡ್ಜ್ಸ್‌ನವರು ಮಾತ್ರ. ಗಣೇಶ ಗುಡಿಯಿಂದ ಮಾವಳಂಗಿ ತನಕ ಮೂರು ತಾಸು ರಾಫ್ಟಿಂಗ್ ಕ್ರೀಡೆಯನ್ನು ಸಣ್ಣಪುಟ್ಟ ರೆಸಾಟ್‌ ìನವರು ಮಾಡುತ್ತಿಲ್ಲ ಎಂಬುದು ಸ್ಥಳೀಯ ರೆಸಾರ್ಟ್‌ ಮಾಲಿಕರ ವಾದ.

ಈತನ್ಮಧ್ಯೆ ವೈಟ್‌ ವಾಟರ್‌ ರೆಸಾರ್ಟ್‌ ಮಾಲೀಕರಾದ ನೋಬರ್ಟ್‌ ಎಫ್‌. ಮೆನೆಜಸ್‌ ಅವರು ರಾಜ್ಯ ಹೈಕೋರ್ಟ್‌ ಧಾರವಾಡ ಪೀಠದ ಪ್ರತಿಬಂಧಕಾಜ್ಞೆಯ ಆದೇಶ ಪ್ರತಿಯನ್ನು ಜೋಯಿಡಾ ತಹಶೀಲ್ದಾರರ ಗಮನಕ್ಕೆ ತಂದಿದ್ದಾರೆ. ಕಾನೂನು ಬದ್ಧವಾಗಿ ಜಲ ಸಾಹಸ ಕ್ರೀಡೆಗಳನ್ನು, ರ್ಯಾಪಿಡ್‌ ವಾಟರ್‌ ಬೋಟಿಂಗ್‌ ನಡೆಸುತ್ತಿದ್ದೇವೆ. ಈ ಸಂಬಂಧದ ಪತ್ರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಮುಖ್ಯಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಸಿಪಿಐ ಜೋಯಿಡಾ, ಕಾರವಾರ ಉಪ ವಿಭಾಗದ ಸಹಾಯಕ ಕಮಿಷನರ್‌ಗೆ ಸಹ ಈ ಮೇಲ್‌ ಮೂಲಕ ಕಳುಹಿಸಿದ್ದಾರೆ.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.