ಕಾರವಾರ ನಗರಸಭೆ: 39.10 ಲಕ್ಷ ರೂ. ಉಳಿತಾಯ ಬಜೆಟ್‌

ಅಧ್ಯಕ್ಷ ನಿತಿನ್‌ ಪಿಕಳೆಯವರಿಂದ 44,69,64,775 ರೂ. ಮೊತ್ತದ ಬಜೆಟ್‌ ಮಂಡನೆ

Team Udayavani, Mar 20, 2022, 4:19 PM IST

13

ಕಾರವಾರ: ಇಲ್ಲಿನ ನಗರಸಭೆ ಸಭಾ ಭವನದಲ್ಲಿ ಶನಿವಾರ ನಗರಸಭೆ ಅಧ್ಯಕ್ಷ ನಿತಿನ್‌ ಪಿಕಳೆ ಸರ್ವ ಸದಸ್ಯರ ಸಮ್ಮುಖದಲ್ಲಿ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. 44,69,64,775 ರೂ. ಮೊತ್ತದ ಬಜೆಟ್‌ನಲ್ಲಿ 44.30 ಕೋಟಿ ರೂ. ನಗರಸಭೆಯ ವೆಚ್ಚ ತೋರಿಸಿದ್ದು, 39.10 ಲಕ್ಷ ರೂ, ಉಳಿತಾಯ ಬಜೆಟ್‌ ಮಂಡಿಸಿದರು.

ನಗರಸಭೆಯ ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನಗರದ ಸ್ವತ್ಛತೆ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅವುಗಳಿಗೆ ನಾಮಫಲಕ ಬರೆಸಲಾಗುವುದು. ಅಲ್ಲದೇ ಕೋಣೆನಾಲ ಅಭಿವೃದ್ಧಿಗೆ 450 ಲಕ್ಷ ರೂ. ಮೀಸಲಿಡಲಾಗಿದೆ. ರಸ್ತೆಗಳ ನಿರ್ಮಾಣ , ನವೀಕರಣಕ್ಕೆ 170 ಲಕ್ಷ, ರಸ್ತೆ ಬದಿ ಚರಂಡಿ ನಿರ್ಮಾಣ, ನಿರ್ವಹಣೆ ಹಾಗೂ ಸ್ಲ್ಯಾಬ್‌ಗೆ 165 ಲಕ್ಷ, ಚರಂಡಿ ಹೂಳು ತೆಗೆಯಲು 115 ಲಕ್ಷ ರೂ. ಮೀಸಲಿಡಲಾಗಿದೆ. ಗಾರ್ಡನ್‌ ನಿರ್ವಹಣೆ, ನಿರ್ಮಾಣಕ್ಕೆ 100 ಲಕ್ಷ ರೂ, ಬೀದಿ ದೀಪ ಜೋಡಣೆಗೆ 74 ಲಕ್ಷ, ನೀರು ಪೂರೈಕೆ ಹೊಸ ಪೈಪ್‌ಲೈನ್‌ ಅಳವಡಿಸಲು 85 ಲಕ್ಷ, ಆರ್‌.ಒ.ಘಟಕ ನಿರ್ಮಾಣಕ್ಕೆ 20 ಲಕ್ಷ, ಸ್ವಚ್ಛ ಭಾರತ ಮಿಷನ್‌ಗೆ 50 ಲಕ್ಷ ರೂ, ನಿಗದಿ ಮಾಡಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆ ಬೋರ್ಡ್‌, ಥರ್ಮೋಪ್ಲಾಸ್ಟರ್‌, ಫೈಬರ್‌ ಡಿವೈಡರ್‌ ಅಳವಡಿಸಲು 40 ಲಕ್ಷ ಮೀಸಲಿಡಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ನಾಮಫಲಕ ಅಳವಡಿಸಲು 40 ಲಕ್ಷ , ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 20 ಲಕ್ಷ, ಸ್ಮಶಾನ ಅಭಿವೃದ್ಧಿ, ದುರಸ್ತಿಗೆ 35 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.

ಯಂತ್ರೋಪಕರಣ ಖರೀದಿಗೆ, ಸಾರ್ವಜನಿಕ ಶೌಚಾಲಯ ಮಿಷನ್‌, ಎಸ್ಟಿಪಿ ನೀರು ಪುರ್ನಬಳಕೆ ಮಾಡುವ ಯಂತ್ರ ಖರೀದಿ, ಬೀದಿ ಗುಡಿಸುವ ಮಿಷನ್‌ ಖರೀದಿಗೆ 12 ಲಕ್ಷ ರೂ. ಮೀಸಲಿಡಲಾಗಿದೆ. ಅಭಿಲೇಖಾಲಯ ಡಿಜಿಟಲೀಕರಣಕ್ಕೆ 20 ಲಕ್ಷ ರೂ, ಲಘು ವಾಹನ ಖರೀದಿಗೆ , ಆರೋಗ್ಯ ವಿಭಾಗಕ್ಕೆ ವಾಹನ ತಳ್ಳುವ ಗಾಡಿ, ವಿದ್ಯುತ್‌ ಚಾಲಿತ ಬೈಕ್‌ ಖರೀದಿಗೆ 17.50 ಲಕ್ಷ ಮೀಸಲಿಡಲಾಗಿದೆ. ಅಧ್ಯಕ್ಷರ ವಾಹನ ಖರೀದಿಗೆ 25 ಲಕ್ಷ, ನೀರು ಸರಬರಾಜು ದುರಸ್ತಿ ಕಾಮಗಾರಿಗಳಿಗಾಗಿ 30 ಲಕ್ಷ , ಜಲ ಮಂಡಳಿಯಿಂದ ನೀರು ಖರೀದಿಗೆ 100 ಲಕ್ಷ, ನೈರ್ಮಲ್ಯ ಸಾಮಗ್ರಿ ಖರೀದಿಗೆ 10 ಲಕ್ಷ, ಬೀದಿ ದೀಪ ನಿರ್ವಹಣೆಗೆ 75 ಲಕ್ಷ ರೂ., ಬೀದಿ ದೀಪ ದುರಸ್ಥಿಗೆ 10 ಲಕ್ಷ, ಇಲಾಖೆಯ ವಾಹನಗಳ ದುರಸ್ಥಿಗೆ 10 ಲಕ್ಷ, ನಗರಸಭೆಯಿಂದ ನೀಡುವ ದೇಣಿಗೆಗೆ 4 ಲಕ್ಷ ರೂ, ಇಡಲಾಗಿದೆ.

ವಿದ್ಯುತ್‌ ಬಿಲ್‌: ವಿದ್ಯುತ್‌ ಬಿಲ್‌ ತುಂಬಲು 550 ಲಕ್ಷ ರೂ, ಕಾದಿರಿಸಲಾಗಿದೆ. ಸಿಬ್ಬಂದಿ ವೇತನ ಪಾವತಿಗೆ 349 ಲಕ್ಷ ರೂ.ತೆಗೆದಿರಿಸಲಾಗಿದೆ. ಬಡವರ ಕಲ್ಯಾಣಕ್ಕೆ 9.15 ಲಕ್ಷ, ಕೌನ್ಸಿಲ್‌ ಸಂಬಂ ಧಿತ ವೆಚ್ಚ 27 ಲಕ್ಷ, ಕೆಎಚ್‌ಬಿಯಲ್ಲಿ ಪಂಪ್‌ ಹೌಸ್‌ ಬ್ರಾಂಚ್‌ ಕಚೇರಿ ನಿರ್ಮಾಣಕ್ಕೆ 5 ಲಕ್ಷ , ವೃದ್ಧಾಶ್ರಮ ನಿರ್ಮಾಣಕ್ಕೆ 20 ಲಕ್ಷ, ಗೋಶಾಲೆ ನಿರ್ಮಾಣಕ್ಕೆ 25 ಲಕ್ಷ ರೂ. ಖರ್ಚು ಮಾಡಲಾಗುವುದು.

ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ, ನೈಟ್‌ ಶೇಟ್ಲರ್‌ ಬೆಡ್ಸ್‌ ವ್ಯವಸ್ಥೆಗೆ 5 ಲಕ್ಷ, ಹೊರಗುತ್ತಿಗೆ ಗಾರ್ಡನ್‌ ಗಳ ನೌಕರರ ವೇತನಕ್ಕೆ 48, ನಾಯಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಅಪರೇಶನ್‌ ಥೇಟರ್‌ ನಿರ್ಮಾಣಕ್ಕೆ 22 ಲಕ್ಷ, ವಾಲ್‌ ಮ್ಯಾನ್‌ ವೇತನಕ್ಕೆ 13 ಲಕ್ಷ, ಬೀಚ್‌ನಲ್ಲಿ ಮೀನು ಮಾರುಕಟ್ಟೆ ಹಳೆ ಬಟ್ಟೆ ಸಂಗ್ರಹ ಕೇಂದ್ರವಾಗಿ ಮಾರ್ಪಡಿಸಲು 5 ಲಕ್ಷ, ಬೀಚ್‌ ನಿರ್ವಹಣೆಗೆ, ಎಸ್ಟಿಪಿ ನಿರ್ವಹಣೆಗೆ 215 ಲಕ್ಷ ರೂ, ಮೀಸಲಿಡಲಾಗಿದೆ. ಅಂಗವಿಕಲರ ಕಲ್ಯಾಣಕ್ಕೆ 6.25 ಲಕ್ಷ ಮೀಸಲಿಡಲಾಗಿದೆ ಎಂದರು.

ಬಜೆಟ್‌ ಮಂಡಿಸಿದ ನಂತರ ಅಧ್ಯಕ್ಷರು, ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು. ಹಸೀರಿಕರಣ ಮತ್ತು ಗಿಡ ನೆಡಲು 20 ಲಕ್ಷ ರೂ, ಕಾದಿಡಲಾಗಿದೆ ಎಂದು ಅಧ್ಯಕ್ಷ ಪಿಕಳೆ ವಿವರಿಸಿದರು.

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.