ಮಳೆ-ಬಿಸಿಲಾಟ: ವಿಮೆಗೆ ದೋಖಾ

ಒಂದೇ ಹೋಬಳಿಯಲ್ಲಿ ಒಂದೆಡೆ ಬಿಸಿಲು-ಇನ್ನೊ ಂದೆಡೆ ಜೋರು ಮಳೆ

Team Udayavani, Aug 25, 2020, 4:59 PM IST

ಮಳೆ-ಬಿಸಿಲಾಟ: ವಿಮೆಗೆ ದೋಖಾ

ಸಾಂದರ್ಭಿಕ ಚಿತ್ರ

ಶಿರಸಿ: ಹೋಬಳಿ ಆಧರಿಸಿ ಮಳೆ ವರದಿ ಸಾರ್ವಜನಿಕವಾಗಿ ಬಿಡುಗಡೆ ಗೊಳಿಸುತ್ತಿರುವುದರಿಂದ ಹವಾಮಾನ ಆಧರಿತ ಬೆಳೆ ವಿಮೆ ಮುಂದಿನ ವರ್ಷ ರೈತರಿಗೆ ದೋಖಾ ಆಗಲಿದೆಯೇ ಎಂಬ ಶಂಕೆ ಉಂಟಾಗಿದೆ.

ಹೋಬಳಿ ಒಂದೇ ಆದರೂ ಒಂದು ಕಡೆ ಮಳೆ ಇನ್ನೊಂದು ಕಡೆ ಬಿಸಿಲು ಇರುವ ವಿಲಕ್ಷಣ ಹವಾಮಾನ ಶಂಕೆಗೆ ಕಾರಣ ವಾಗಿದೆ. ಹೋಬಳಿ ಆಧರಿಸಿ ಮಳೆ ವರದಿ ಪ್ರಕಟಿಸುತ್ತಿರುವುದರಿಂದ ಹೋಬಳಿಯ ಒಂದು ಭಾಗದಲ್ಲಿ ಮಳೆ ಇದ್ದರೆ, ಇನ್ನೊಂದೆಡೆ ಬಿಸಿಲು ಇರುತ್ತಿದೆ. ಎಲ್ಲ ಗ್ರಾಪಂ ಮಳೆ ವರದಿಯನ್ನು ಸಮೀಕರಣಗೊಳಿಸಿ ಸರಾಸರಿ ವರದಿ ಪ್ರಕಟಿಸಲಾಗುತ್ತಿದೆ. ಇದು ಅತಿ ಮಳೆಬಿದ್ದ ಪ್ರದೇಶದ ರೈತರಿಗೆ ಸಿಗಬಹುದಾದ  ಅಳಿದುಳಿದ ವಿಮೆಯ ಮೊತ್ತವೂ ಖೋತಾ ಆಗುವ ಸಾಧ್ಯತೆ ಇದೆ. ಬನವಾಸಿ ಹೋಬಳಿಯ ಬಿಸಲಕೊಪ್ಪದಲ್ಲಿ ಮಳೆ ಇದ್ದರೆ, ಬನವಾಸಿಯಲ್ಲಿ ಬಿಸಿಲು ಇರುವುದು, ಶಿರಸಿ ಹೋಬಳಿಯ ಕಾನಗೋಡಿನಲ್ಲಿ ಮಳೆ ಇದ್ದರೆ, ಕುಳವೆಯಲ್ಲಿ  ಮಳೆ ಇಲ್ಲ. ಈ ಸಮಸ್ಯೆ ಈಗ ಜ್ವಲಂತವಾಗಿ ಕಾಡುವಂತೆ ಆಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಸಹ  ಭಾಗಿತ್ವದ ಹವಾಮಾನ ಆಧರಿತ ಬೆಳೆವಿಮೆ ರೈತರಿಗೆ ಕಳೆದ ಮೂರು ವರ್ಷಗಳಿಂದ ಜಾರಿಗೊಳಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆವಿಮೆ ಈಗಾಗಲೇ ಅನುಷ್ಠಾನದಲಿದೆ. ಅಗ್ರಿಕಲ್ಚರಲ್‌ ಇನ್ಸುರೆನ್ಸ್‌ ಕಂಪನಿ ವಿಮಾ ಜವಾಬ್ದಾರಿ ಹೊತ್ತಿದೆ. ರೈತರು ಶೇ.5ರ ಪಾಲನ್ನು ಸಹಕಾರಿ ಸಂಘಗಳಲ್ಲಿ ಬೆಳೆಸಾಲ ಪಡೆಯುವಾಗ ಅಥವಾ ಬೆಳೆಸಾಲ ಪಡೆಯದೇ ಇದ್ದರೂ ವಿಮೆ ಪಾವತಿಸಲು ಅನುಕೂಲವಿದೆ. ಜಿಲ್ಲಾ ತೋಟಗಾರಿಕಾ ಇಲಾಖೆ ಇದರ ಅನುಷ್ಠಾನ ಅಧಿಕಾರ ಹೊಂದಿದೆ.

ಕಳೆದ ವರ್ಷದ ತನಕ ಪ್ರತಿ ಗ್ರಾಪಂ ಮಟ್ಟದ ಮಳೆ ವರದಿಯನ್ನು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿತ್ತು. ಬಹುತೇಕ ಪಂಚಾಯ್ತಿ ಕಟ್ಟಡದ ಮೇಲೆಯೇ ಮಳೆ ಮಾಪನ ಘಟಕ ಕೂಡ ಇದೆ. ಇದೇ ಯಂತ್ರ ಮಳೆಯ ಪ್ರಮಾಣ ಅಳೆದು ಸೆಟ್‌ಲೆçಟ್‌ ಮೂಲಕ ದಾಖಲಿಸುತ್ತದೆ. ಅದೇ ವಿಮೆಗೂ ಮೂಲ. ಇದರಿಂದ ರೈತರು, ವಿಮೆ ಕಟ್ಟಿದ ಗ್ರಾಹಕರು ಮಳೆಯ ಪ್ರಮಾಣವನ್ನು ಅಂದಾಜಿಸಿಕೊಳ್ಳುತ್ತಿದ್ದರು. ಬಿದ್ದ ಮಳೆಗೂ ದಾಖಲಾದ ವಿವರಕ್ಕೂ ಹೋಲಿಕೆಗೆ ಅನುಕೂಲ ಆಗುತ್ತಿತ್ತು. ಆದರೆ ಈ ಮಳೆಗಾಲದಿಂದ ಪಂಚಾಯ್ತಿ ಮಟ್ಟದ ವರದಿ ನೀಡದೇಹೋಬಳಿ ಮಟ್ಟದ ವರದಿ ನೀಡುತ್ತಿರುವುದೇ  ಸಮಸ್ಯೆಗೆ ಮೂಲವಾಗಿದೆ. ವೈಯಕ್ತಿಕವಾಗಿ ನಂತರ ಸಂಗ್ರಹಿಸಲಾಗುತ್ತದೆ ಎಂದಿದ್ದರೂ ಮಾನದಂಡ ಯಾವುದು ಎಂಬ ಗೊಂದಲ ಉಂಟಾಗಿದೆ.

ಆಗಸ್ಟ್‌ದಲ್ಲಿ ಧೋ ಧೋ ಎಂದು ಮಳೆ ಸುರಿದರೂ ಹೋಬಳಿ ಮಟ್ಟದ ವರದಿಯಲ್ಲಿ ಆಗಸ್ಟ್‌ ಮೊದಲ ಸೋಮವಾರ ಮಳೆ ಪ್ರಮಾಣ ತೀರಾ ಕಡಿಮೆ ಇತ್ತು. ಈ ವ್ಯತ್ಯಾಸದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತೋಟಗಾರಿಕಾ ಇಲಾಖೆ ಮೂಲವೊಂದು ಹೇಳಿದೆ. ಹೋಬಳಿ ಮಟ್ಟದ ಪಂಚಾಯ್ತಿಗಳ ಸರಾಸರಿ ಮಳೆ ವರದಿ ಸಮಸ್ಯೆ ಆಗುತ್ತದೆ. ವಿಮೆ ಪಂಚಾಯ್ತ ಘಟಕವಾಗಿ ದಾಖಲಿಸಬೇಕಾದ್ದರಿಂದ ಮಳೆ ವರದಿ ಹೋಬಳಿಗೆ ಏರಿದೆ. ಕಳೆದ ಜು.22ಕ್ಕೆ ಉದಯವಾಣಿ ವರದಿ ಪ್ರಕಟಿಸಿದ್ದರೂ  ಸರಕಾರ ಇನ್ನೂ ಕಣ್ಣೆತ್ತಿಲ್ಲ, ಸ್ಪೀಕರ್‌ ಅವರ ಹೆಗಲ ಮೇಲೆ ಈ ಸಮಸ್ಯೆ ಇದ್ದು, ತಿಂಗಳಿಂದ ರೈತರು ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ! ಈ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಕಳೆದ ವರ್ಷ ಜುಲೈದಲ್ಲೇ 2018ರಂದು ಕಟ್ಟಿದ ವಿಮೆ ಹಣ ಬಂದಿತ್ತು. ಆದರೆ, ಈ ಬಾರಿ ಆಗಸ್ಟ್‌ ಕೊನೆಗೆ ಬಂದರೂ ವಿಮಾ ಹಣ ಬಂದಿಲ್ಲ. ವಿಮೆ ಕಟ್ಟಿಸಿಕೊಂಡವರಿಗೂ, ಅನುಷ್ಠಾನದ ಅಧಿಕಾರಿಗಳಿಗೂ ಗೊತ್ತಿಲ್ಲ. -ಜಿ.ವಿ. ಹೆಗಡೆ, ರೈತ, ವಿಮಾ ಗ್ರಾಹಕ

ವಿಮಾ ನಿರ್ವಹಣೆಯಲ್ಲಿ ಜಿಲ್ಲೆಗೆ ವಿಮೆಯ ಪ್ರತಿನಿಧಿಯೊಬ್ಬರು ನೋಡೆಲ್‌ ಅಧಿಕಾರಿಯಾಗಿದ್ದರೆ ಇಂತಹ ಸಮಸ್ಯೆಗೆ ನಿವಾರಣೆ ಸಾಧ್ಯ. -ವಿನಾಯಕ ಹೆಗಡೆ, ರೈತ

 

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.