
ಗಂಗಾವಳಿ ಪ್ರವಾಹ: ಕೊಚ್ಚಿ ಹೋದ ನೆರೆ ಪೀಡಿತ ಜನರ ಬದುಕು
Team Udayavani, Jul 27, 2021, 9:57 PM IST

ಅಂಕೋಲಾ : ತಾಲೂಕಿನಲ್ಲಿ ಅಬ್ಬರಿಸಿದ ಜೀವನದಿ ಗಂಗಾವಳಿಯ ನದಿ ಪ್ರವಾಹ ನದಿ ತಟದ ನಿವಾಸಿಗಳ ಬದುಕನ್ನೇ ಕಿತ್ತುಕೊಂಡಿದೆ.
ನರೆ ಬಂದು ಇಳಿದು ಹೋಗಿದೆ. ಆದರೆ ಹೋಗುವಾಗ ಎಲ್ಲವನ್ನು ತನ್ನೊಡಲಿಗೆ ಸೇರಿಸಿಕೊಂಡು ಹೊಗಿದೆ. ಹೊಲಗದ್ದೆಯಲ್ಲಿನ ಬತ್ತದ ಸಸಿ ಕಾಣುವಲ್ಲಿ ರಾಡಿ ಮಣ್ಣಿನ ರಾಶಿಯೆ ಕಾಣುತ್ತಿದೆ. ಮನೆಯಲ್ಲಿರುವ ಬಟ್ಟೆಗಳು ಮಣ್ಣಿನ ರಾಶಿಯಲ್ಲಿ ಸೇರಿಕೊಂಡಿದೆ. ಮನೆಯಲ್ಲಿಟ್ಟಿದ್ದ ಅಕ್ಕಿ ಬೆಳೆಗಳು ನೀರು ಪಾಲಾಗಿದೆ. ಉಡಲು ಬಟ್ಟೆ ಇಲ್ಲ ತಿನ್ನಲು ಅನ್ನಕ್ಕೆ ತತ್ವಾರ ಎದುರಾಗಿದೆ.
ಕೋವಿಡ್ ನಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಕೆಲಸವು ಇಲ್ಲದೆ ಕೈಯಲ್ಲಿ ಹಣವು ಇಲ್ಲ, ವಸ್ತುಗಳು ಖರೀದಿ ಮಾಡಬೇಕು ಎಂದರೆ ಆಗದಂತಹ ಪರಿಸ್ಥಿತಿ ನೆರೆ ಪೀಡಿತ ಜನರದ್ದಾಗಿದೆ.
ಶಿರೂರು ಗ್ರಾಮದ ಸಂತ್ರಸ್ಥರು ನೀರಿನಲ್ಲಿ ಸಿಲುಕಿ ಮಣ್ಣು ಬಡೆದಿರುವ ಮನೆಯಲ್ಲಿದ್ದ ಬಟ್ಟೆಗಳನ್ನು ಹೊತ್ತು ತಂದು ಹೆದ್ದಾರಿ ಪಕ್ಕದಲ್ಲಿನ ಸಣ್ಣ ಹಳ್ಳದಲ್ಲಿ ತೊಳೆದು ಕಾಮಗಾರಿ ಮುಗಿಯದ ಹೆದ್ದಾರಿಯ ಮೇಲೆ ಬಟ್ಟೆಯನ್ನು ಒಣ ಹಾಕಿರುವುದು ಕಂಡುಬರುತ್ತಿದೆ.
ಸಣ್ಣ ಮಕ್ಕಳಿಂದ ಹಿಡಿದು ಹೀರಿಯರವರೆಗೆ ತಮ್ಮ ಮನೆಯಲ್ಲಿದ್ದ ಎಲ್ಲಾ ಬಟ್ಟೆಗಳನ್ನು ತಂದು ಒಣ ಹಾಕಿ ಗಂಟು ಕಟ್ಟಿಕೊಂಡು ಹೊಗುತ್ತಿರುವುದು ಕಳೆದೆರಡು ದಿನದಿಂದ ಸಾಮಾನ್ಯವಾಗಿ ಕಂಡುಬರುವಂತ್ತಿತ್ತು.
ತಮ್ಮ ಬಡತನದ ನಡುವೆಯೆ ಚಿಕ್ಕ ಸೂರನ್ನು ಕಟ್ಟಿಕೊಂಡ್ಡು ಮನೆಗೆ ಬೇಕಾದ ವಸ್ತುಗಳ ಸಂಗ್ರಹಿಸಿಟ್ಟ ಜನತೆಗೆ ನೆರೆ ಆರ್ಭಟ ನಲುಗಿಸುವಂತೆ ಮಾಡಿದೆ.
ಕೃಷಿಯೆ ಜೀವಾಳ:
ರೈತನಿಗೆ ಕೃಷಿಯೆ ಜೀವಾಳ. ಆದರೆ ಮಳೆಯ ಅಬ್ಬರದಿಂದಾಗಿ ಶ್ರಮ ಪಟ್ಟು ಬಿತ್ತಿದ ಭತ್ತದ ಸಸಿಗಳು ನದಿಯ ಪಾಲಾಗಿದೆ. ಕಬ್ಬು ನೆಲಕ್ಕೆ ಹಾಸಿ ಮಲಗಿದೆ. ಅಡಿಕೆ ಬಾಳೆ ಗಿಡಗಳು ಕೊಚ್ಚಿ ಹೋಗಿದೆ. ಹೀಗೆ ಎಲ್ಲವು ಅನ್ನದಾತನ ಕೈಗೆ ಕೊಡಲಿ ಏಟು ನೀಡಿದ್ದು, ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆ ಮನೆ ಮಾಡಿದೆ.
ತುತ್ತು ಅನ್ನಕ್ಕೂ ತತ್ವಾರ ;
ತಾಲೂಕಾಡಳಿತ ತೆರೆದಿರುವ ಗಂಜಿ ಕೇಂದ್ರವು, ನೆರೆ ಇಳಿಯವರೆಗೆ ಅನ್ನ, ಆಶ್ರಯ ನೀಡಲಿದೆ. ನೆರೆ ಇಳಿದ ಮೇಲೆ ಸಂತ್ರಸ್ಥರು ತಾವು ಕಟ್ಟಿಕೊಂಡ ಸೂರಿಗೆ ಹೋಗಲೆಬೇಕು. ಆದರೆ ಇರುವ ಸೂರು ಸಹ ಪಾತಾಳಕ್ಕೆ ಮುಖ ಮಾಡಿದಾಗ ಹೋಗುದಾದಾರೆ ಎಲ್ಲಿ ಎಂಬ ಚಿಂತೆ ಸಂತ್ರಸ್ಥರದ್ದಾಗಿದೆ. ಸರಕಾರ ಸಮಿಕ್ಷೆ ನಡೆಸಿ ವರದಿ ನೀಡಿ ಪರಿಹಾರ ನೀಡುವುದು ತಿಂಗಳು ಕಳೆಯುತ್ತದೆ. ಅಲ್ಲಿಯವರೆಗೆ ಸಂತ್ರಸ್ಥರು ಆಶ್ರವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಬಹುದು. ಇರುವ ಆಹಾರ ಪದಾರ್ಥಗಳು ನೀರಿಗೆ ಕೊಚ್ಚಿ ಹೋಗಿ, ಹೊಟ್ಟೆಯ ಮೇಲೆ ತಣ್ಣೀರು ಪಟ್ಟೆ ಎಂಬ ಗತಿಯಾಗಿದೆ.
ನಮ್ಮ ಮನೆಯಲ್ಲಿಟ್ಟಿದ್ದ ಎಲ್ಲಾ ಸಾಮಾಣುಗಳು ನೀರಿಗೆ ಕೊಚ್ಚಿಕೊಂಡು ಹೋಗಿದೆ. ಅಳಿದು ಉಳಿದ ಬಟ್ಟೆಯನ್ನು ನಾವು ತೊಳೆದು ಒಣಗಿಸುತ್ತಿದ್ದೇವೆ. ಅಕ್ಕಿ ಚಿವು ನೀರಿನಲ್ಲಿ ಹಾಳಾಗಿದೆ. ಮನೆಯಲ್ಲಿ ಯಾವುದೆ ಸಾಮಾನುಗಳಿಲ್ಲಿ. ಕೆಲಸವು ಇಲ್ಲ. ಎನಾದರು ಕರಿದಿಸಬೇಕೆಂದರೆ ಕೈಯಲ್ಲಿ ಹಣವು ಇಲ್ಲದ ಪರಿಸ್ಥಿತಿ ನಮ್ಮದಾಗಿದೆ.-ಸೋಮಿ ಗೌಡ ,ಶಿರೂರು
-ಅರುಣ ಶೆಟ್ಟಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
