ಬಾಲ್ಯ ವಿವಾಹ ತಡೆಗೆ ಗ್ರಾಮಮಟ್ಟದಲ್ಲಿ ರಕ್ಷಣಾ ಸಮಿತಿ ರಚನೆ: ನಾಗಣ್ಣ ಗೌಡ


Team Udayavani, Jan 17, 2023, 4:56 PM IST

ಬಾಲ್ಯ ವಿವಾಹ ತಡೆಗೆ ಗ್ರಾಮಮಟ್ಟದಲ್ಲಿ ರಕ್ಷಣಾ ಸಮಿತಿ ರಚನೆ: ನಾಗಣ್ಣ ಗೌಡ

ಕಾರವಾರ: ಬಾಲ್ಯವಿವಾಹ ತಡೆಗೆ ಗ್ರಾಮ ಹಾಗೂ ಗ್ರಾಮ ಪಂಚಾಯತಿ ಹಾಗೂ ನಗರದ ವಾರ್ಡ್ ಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಲಾಗುವುದು.‌ ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹ ಎಂದರೆ ಜೈಲ್ ವಿವಾಹ ಎಂಬ ಎಚ್ಚರಿಗೆ ಮೂಡಿಸಲಾಗುವುದು ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಾಣ್ಣ ಗೌಡ ಹೇಳಿದರು.

ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಬೆಂಗಳೂರು ಶಾಲೆಯೊಂದರಲ್ಲಿ ಮಕ್ಕಳ ಬ್ಯಾಗ್ ನಲ್ಲಿ ಸಿಕ್ಕ ಆತಂಕಾರಿ ವಸ್ತುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಈ ಸಂಬಂಧ ಮೆಡಿಕಲ್ ಶಾಪ್ ಗಳಲ್ಲಿ ಅಪ್ರಾಪ್ತ ಮಕ್ಕಳಿಗೆ ಗರ್ಭನಿರೋಧಕಗಳನ್ನು ಮಾರದಂತೆ ಆರೋಗ್ಯ ಇಲಾಖೆಯ ಮೂಲಕ ಸೂಚನೆ ಕೊಡಿಸಲಾಗಿದೆ. ವೈನ್ ಶಾಪ್ ಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಅಬಕಾರಿ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ಕೊಡಿಸಲಾಗಿದೆ. ಅಪ್ರಾಪ್ತ ವಯಸ್ಕ ಮಕ್ಕಳಿಗೆ ಮದ್ಯ ಮಾರಾಟ ಮಾಡಿದರೆ ಅಂತ ಶಾಪ್ ಗಳ ಲೈಸೆನ್ಸ ರದ್ದು ಮಾಡಲಾಗುವುದು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 26 ಬಾಲ್ಯ ವಿವಾಹ ತಡೆದಿದ್ದೇವೆ. ಕಾರವಾರದಲ್ಲಿ ಒಂದು ಪ್ರಕರಣ ದಾಖಲಾಗಿದೆ. 45 ಜನ ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣ ಕಾರವಾರ ಜಿಲ್ಲೆಯಲ್ಲಿ ದಾಖಲಾಗಿವೆ. 26 ಜಿಲ್ಲೆ ಪ್ರಯಾಣ ಮಾಡಿದ್ದೇನೆ. ರಾಜ್ಯದಲ್ಲಿ 2600 ಅತ್ಯಾಚಾರ ಪ್ರಕರಣ ದಾಖಲಾಗಿವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಇಂತಹ ಘಟನೆಗಳಿವೆ. ಕೆಲವು ಕಡೆ ಶಿಕ್ಷಕರು ಮಕ್ಕಳ ಮೇಲೆ ದೌರ್ಜನ್ಯ ಮಾಡಿದ ಘಟನೆಗಳು ನಡೆದಿವೆ. ಇದು ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಹಾಗಾಗಿ ಶಿಕ್ಷಕರಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ಇಲಾಖೆಯ ಮುಖ್ಯಸ್ಥರ ಮೂಲಕ ನೀಡಲಾಗುತ್ತಿದೆ ಎಂದರು.

ಮಕ್ಕಳ ಭಿಕ್ಷಾಟನೆ ತಡೆಯಲು ಕ್ರಮಗಳಾಗುತ್ತಿವೆ. ಉತ್ತರ ಕನ್ನಡದಲ್ಲಿ ಸಹ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನು ಬಾಲಮಂದಿರದಲ್ಲಿ ರಕ್ಷಿಸಲಾಗಿದೆ ಎಂದರು.

ಶಿರಸಿ ಸುತ್ತಮುತ್ತ‌ ಇರುವ ದುರಮುರಗಿ ಜನಾಂಗದ ಮಕ್ಕಳ ಸಮೇತ‌ ದೇವರ ಹೆಸರಲ್ಲಿ ಸಂಪ್ರದಾಯಕ್ಕಾಗಿ ಊರೂರು ಅಲೆದು ಭಿಕ್ಷಾಟನೆಗೆ ಮಾಡುವ ಪದ್ದತಿ ತೊಡೆದು ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಎರಡು ದಶಕಗಳಿಂದ ಯಾಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಇಂದೇ ಮಾಹಿತಿ ಪಡೆಯುವೆ.‌ ಇದಕ್ಕಾಗಿ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದರು.

ಅಧಿಕಾರ ವಹಿಸಿಕೊಂಡು 75 ದಿನಗಳಾಗಿವೆ. ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರ ಅವಧಿ ಮೂರು ವರ್ಷ. ಆಯೋಗಕ್ಕೆ ಹಣಕಾಸಿನ ಕೊರತೆ ಇಲ್ಲ. ಮಕ್ಕಳ ರಕ್ಷಣೆ, ಅಲೆಮಾರಿ ಮಕ್ಕಳಿಗೆ ಶಿಕ್ಷಣ ಹಾಗೂ ಬಡ‌ಕುಟುಂಬ ಹಾಗೂ ಬುಡಕಟ್ಟು ಕುಟುಂಬದ ಮಕ್ಕಳ ರಕ್ಷಣೆಗೆ ಹಾಗೂ ಬಾಲ್ಯ ವಿವಾಹ ತಡೆಗೆ ಪ್ರಾಮಾಣಿಕ ಕೆಲಸ ಮಾಡುವೆ ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್ ಮತ್ತು ಮಕ್ಕಳ ರಕ್ಷಣಾ‌ ಘಟಕದ ಐಗಳ, ಡಿವೈಎಸ್ಪಿ ವೆಲಂಟೈನ್ ಡಿಸೊಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಬಿಜೆಪಿಯಿಂದ ಮೀಸಲಾತಿ ವೈಜ್ಞಾನಿಕ ಹಂಚಿಕೆ

ಬಿಜೆಪಿಯಿಂದ ಮೀಸಲಾತಿ ವೈಜ್ಞಾನಿಕ ಹಂಚಿಕೆ

lok adalat

ಹಣ ಸುಲಿಗೆ ಯತ್ನ : ಆರೋಪಿಗೆ ನಿರೀಕ್ಷಣಾ ಜಾಮೀನು

accident 2

ಬೈಕ್‌ – ಸ್ಕೂಟರ್‌ ಢಿಕ್ಕಿ ಗಾಯ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

1-sadsadsd

ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ: ಮಮತಾ ಬ್ಯಾನರ್ಜಿ

ಅಧಿಕ ಲಾಭಾಂಶ ನೀಡುವುದಾಗಿ ಹಣ ಪಡೆದು ಎನ್ ಐಟಿಕೆ ವಿದ್ಯಾರ್ಥಿಯಿಂದ 27.96 ಲ.ರೂ ವಂಚನೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fadadasd

ಕಾರವಾರ; ಹತ್ತು ಲಕ್ಷ ರೂ.ನಗದು ವಶ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

KAGERI BANNER

ಸಾಹೇಬ್ರು ಹೋದ ಮೇಲೆ ಬಂತು ಬ್ಯಾನರ್!

ಕೆಎಚ್‌ಬಿ ಕಾಲೋನಿಯನ್ನು ಮಿನಿ ಸಿಟಿ ಮಾದರಿಯಲ್ಲಿ ಅಭಿವೃದ್ಧಿ: ಶಾಸಕಿ ರೂಪಾಲಿ ನಾಯ್ಕ

ಕೆಎಚ್‌ಬಿ ಕಾಲೋನಿಯನ್ನು ಮಿನಿ ಸಿಟಿ ಮಾದರಿಯಲ್ಲಿ ಅಭಿವೃದ್ಧಿ: ಶಾಸಕಿ ರೂಪಾಲಿ ನಾಯ್ಕ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಅಡಿಕೆ ತೋಟ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಅರ್ಧ ಎಕರೆಗೂ ಅಧಿಕ ಅಡಿಕೆ ತೋಟ ಬೆಂಕಿಗಾಹುತಿ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಬಿಜೆಪಿಯಿಂದ ಮೀಸಲಾತಿ ವೈಜ್ಞಾನಿಕ ಹಂಚಿಕೆ

ಬಿಜೆಪಿಯಿಂದ ಮೀಸಲಾತಿ ವೈಜ್ಞಾನಿಕ ಹಂಚಿಕೆ

lok adalat

ಹಣ ಸುಲಿಗೆ ಯತ್ನ : ಆರೋಪಿಗೆ ನಿರೀಕ್ಷಣಾ ಜಾಮೀನು

accident 2

ಬೈಕ್‌ – ಸ್ಕೂಟರ್‌ ಢಿಕ್ಕಿ ಗಾಯ

ಭಾಷಾ ದ್ವೇಷ ತಡೆಯುವುದು ಅಗತ್ಯ: ವೈದೇಹಿ

ಭಾಷಾ ದ್ವೇಷ ತಡೆಯುವುದು ಅಗತ್ಯ: ವೈದೇಹಿ

1-sasdsad

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ