Udayavni Special

ಹಾರ್ಟೀ ಕ್ಲೀನಿಕ್‌ಗೆ ಗೇಟ್‌ ಪಾಸ್‌!: ರೈತರಿಗೆ ಕೃಷಿ ಮಾಹಿತಿ ಪಡೆಯಲು ಸರಕಾರಿ ಕತ್ತರಿ


Team Udayavani, May 24, 2020, 10:47 AM IST

ಹಾರ್ಟೀ ಕ್ಲೀನಿಕ್‌ಗೆ ಗೇಟ್‌ ಪಾಸ್‌!:

ಸಾಂದರ್ಭಿಕ ಚಿತ್ರ ಬಳಸಲಾಗಿದೆ

ಶಿರಸಿ: ಹತ್ತು ವರ್ಷಗಳ ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆರಂಭಿಸಲಾಗಿದ್ದ ಹಾರ್ಟಿ ಕ್ಲೀನಿಕ್‌ಗೆ ರಾಜ್ಯ ಸರಕಾರ ಗೇಟ್‌ ಪಾಸ್‌ ನೀಡಲು ಮುಂದಾಗಿದೆ. ಸಂಕಷ್ಟದಲ್ಲಿದ್ದ ರೈತರಿಗೆ ತೋಟಗಾರಿಕಾ ಬೆಳೆಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದ ಹಾರ್ಟಿ ಕ್ಲೀನಿಕ್‌ ಈಗ ಕೋವಿಡ್‌ 19 ಕಾರಣದಿಂದ ರೈತರಿಂದ ದೂರವಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ತೋಟಗಾರಿಕಾ ಇಲಾಖೆ ಪ್ರಧಾನ ಕಚೇರಿ ಆವರಣದಲ್ಲೇ 2010-11ದಲ್ಲಿ ಹಾರ್ಟಿ ಕ್ಲೀನಿಕ್‌ ಆರಂಭಿಸಲಾಗಿತ್ತು. ಆಯಾ ಜಿಲ್ಲೆಯಲ್ಲಿ ಕೃಷಿ ಪದವಿ ಓದಿದ ವಿಷಯ ತಜ್ಞರನ್ನು ಸರಕಾರ ಮಾಸಿಕ 20 ಸಾವಿರ ರೂ. ಕೊಟ್ಟು ನೇಮಕ ಮಾಡಿಕೊಳ್ಳುತ್ತಿತ್ತು. ಯಾವುದಾದರೂ ಕೃಷಿ ಸಂಸ್ಥೆ ಅಡಿಯಲ್ಲಿ ವಿಷಯ ತಜ್ಞರ ನೇಮಕ ಮಾಡಿಕೊಂಡಿತ್ತು.

ಯಾಕೆ ಬೇಕಿತ್ತು?: ಅಡಿಕೆ, ಕಾಳು ಮೆಣಸು, ಅನಾನಸ್‌, ಮಾವು, ತೆಂಗು, ಬಾಳೆ, ಮಲ್ಲಿಗೆ, ಎಲೆ, ಪಪ್ಪಾಯಿ ದ್ರಾಕ್ಷಿ ಸೇರಿದಂತೆ ಅನೇಕ ತರಾವರಿ ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಯಾವ ಕಾಲಕ್ಕೆ ಯಾವ ಗೊಬ್ಬರ ಹಾಕಬೇಕು? ಯಾವ ರೋಗಕ್ಕೆ ಯಾವ ಔಷಧ ಹಾಕಬೇಕು? ವರ್ಷದಲ್ಲಿ ನೂರಾರು ತರಬೇತಿ ಶಿಬಿರವನ್ನೂ ನಡೆಸುತ್ತಿದ್ದರು. ರೈತರ ತೋಟಕ್ಕೆ ತೆರಳಿ ಮಾಹಿತಿ ನೀಡುತ್ತಿದ್ದರು. ಯಾವ ಭೂಮಿಗೆ ಯಾವ ಬೆಳೆ ಸೂಕ್ತ ಎಲ್ಲ ಮಾಹಿತಿಗಳನ್ನೂ ಸ್ಥಳಕ್ಕೆ ತೆರಳಿ ನೀಡುತ್ತಿದ್ದರು. ರೈತರಿಗೆ ಮಾಹಿತಿ ಕರಪತ್ರವನ್ನೂ ನೀಡುತ್ತಿದ್ದರು. ರೈತರ ಆಪತ್‌ ಬಾಂಧವ ಆಗಿತ್ತು ಹಾರ್ಟಿ ಕ್ಲೀನಿಕ್‌. ಸಂಶೋಧನೆ ಹಾಗೂ ರೈತ, ಇಲಾಖೆ ಹಾಗೂ ರೈತರ ನಡುವೆ ಕೊಂಡಿಯಾಗಿತ್ತು.

ನಿಯಮ ಉಲ್ಲಂಘನೆ? ಕೋವಿಡ್‌ 19ರ ಕಾರಣದಿಂದ ಯಾವ ಖಾಸಗಿ, ಅರೆ ಖಾಸಗಿ ಸಂಸ್ಥೆಗಳು ಯಾರನ್ನೂ ಸೇವೆಯಿಂದ ಕಡಿತಗೊಳಿಸಬಾರದು ಎಂದು ಕಾರ್ಮಿಕ ಇಲಾಖೆ ಆದೇಶ ಮಾಡಿತ್ತು. ಆದರೆ, ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದ ಸರಕಾರವೇ ಹಾರ್ಟಿ ಕ್ಲೀನಿಕ್‌ ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳದಂತೆ ಆದೇಶ ಮಾಡಿದೆ. ಸರಕಾರದ ಈ ಆದೇಶವನ್ನು ಸ್ವತಃ ಇಲಾಖೆ ಉಲ್ಲಂಘಿಸಿದೆ. ಈ ಬಾರಿ ಕೂಡ ಅತಿ ಮಳೆ, ಅಡಕೆ, ಕಾಳು ಮೆಣಸು, ಕೊಕ್ಕೋ ಕೊಳೆ ರೋಗದ ಕಾಟದ ಆತಂಕದ ಮಧ್ಯೆ ಕೊರೊನಾ ವೈರಸ್‌ ಆತಂಕ ರೈತರನ್ನು ಧೃತಿಗೆಡಿಸಿದೆ. ಈ ಮಧ್ಯೆ ಭರವಸೆ ನೀಡುತ್ತಿದ್ದ ತೋಟಗಾರಿಕಾ ವಿಷಯ ತಜ್ಞರೂ ಸೇವೆಗೆ “ಬರ’ದಂತೆ ನೋಡಿಕೊಂಡಿದೆ. 28 ಜಿಲ್ಲೆ ಹಾಗೂ ಬೆಂಗಳೂರು ಲಾಲ್‌ ಭಾಗ್‌ ಸೇರಿ ಒಟ್ಟೂ 29 ವಿಷಯ ತಜ್ಞರಿಗೆ ಸರಕಾರ
ಆರ್ಥಿಕ ನೆಪವೊಡ್ಡಿ ರೈತರ ಮಾರ್ಗದರ್ಶಿಗಳಿಗೆ ಗೇಟ್‌ ಪಾಸ್‌ ನೀಡಿದೆ.

ವಿಷಯ ತಜ್ಞರ ನಿಯೋಜನೆ ಅನುಮೋದನೆ ಆಗದೇ ಇರುವ ಕುರಿತು ಸರಕಾರ ಗಮನಕ್ಕೆ ತರುತ್ತೇನೆ. 
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ಹಸಿರು ಶಾಲು, ರೈತ ಹೋರಾಟದ ಮೂಲಕವೇ ಸಿಎಂ ಆದವರ ಸರಕಾರದಲ್ಲಿ ತೋಟಗಾರಿಕಾ ಸಮಗ್ರ ಮಾಹಿತಿ ನೀಡುವ ತಜ್ಞರ ನೇಮಕವನ್ನು ರದ್ದುಗೊಳಿಸಿದ್ದು ಸರಿಯಲ್ಲ.
ದೀಪಕ್‌ ದೊಡ್ಡೂರು, ಪ್ರಗತಿಪರ ರೈತ

ರಾಘವೇಂದ್ರ ಬೆಟ್ಟಕೊಪ್ಪ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯೋಧರು ಎಫ್ ಬಿ ಬಳಸುವಂತಿಲ್ಲ

ಯೋಧರು ಎಫ್ ಬಿ ಬಳಸುವಂತಿಲ್ಲ

ಕಾಂಗ್ರೆಸ್‌ನ 3 ಟ್ರಸ್ಟ್‌ಗಳಿಗೆ ತನಿಖೆಯ ಬಿಸಿ

ಕಾಂಗ್ರೆಸ್‌ನ 3 ಟ್ರಸ್ಟ್‌ಗಳಿಗೆ ತನಿಖೆಯ ಬಿಸಿ

Sholey-Jagadish

‘ಶೋಲೆ’ಯ ಶೂರ್ಮ ಬೋಪಾಲಿ ಖ್ಯಾತಿಯ ನಟ ಜಗದೀಪ್ ನಿಧನ

Kashmir-BJP-Leader

ಕಾಶ್ಮೀರದಲ್ಲಿ ಬಿಜೆಪಿ ನಾಯಕ ಹಾಗೂ ಕುಟುಂಬ ಸದಸ್ಯರ ಮೇಲೆ ಗುಂಡಿನ ದಾಳಿ

6000 ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ: ಸುಧಾಕರ್

6000 ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ: ಸುಧಾಕರ್

yadagiri covid case

ಯಾದಗಿರಿ ಮತ್ತೆ 11ಜನರಿಗೆ ಕೋವಿಡ್ ಪಾಸಿಟಿವ್! ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಆರೆಂಜ್‌ ಅಲರ್ಟ್‌

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಆರೆಂಜ್‌ ಅಲರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳಿಯಾಳದಲ್ಲಿ ಕೋವಿಡ್ ವಾರಿಯರ್ಸ್ ಗೆ ಸನ್ಮಾನ

ಹಳಿಯಾಳದಲ್ಲಿ ಕೋವಿಡ್ ವಾರಿಯರ್ಸ್ ಗೆ ಸನ್ಮಾನ

ಅಂಚೆ ಕಚೇರಿ ಸ್ಥಳಾಂತರಕ್ಕೆ ಪರಿಶೀಲನೆ

ಅಂಚೆ ಕಚೇರಿ ಸ್ಥಳಾಂತರಕ್ಕೆ ಪರಿಶೀಲನೆ

21 ಜನರಿಗೆ ಕೋವಿಡ್‌ ಪಾಸಿಟಿವ್‌

21 ಜನರಿಗೆ ಕೋವಿಡ್‌ ಪಾಸಿಟಿವ್‌

ತರಬೇತಿ ಕೇಂದ್ರದಲ್ಲಿ 50 ಜನರಿಗೆ ಚಿಕಿತ್ಸೆಗೆ ಸಿದ್ಧತೆ

ತರಬೇತಿ ಕೇಂದ್ರದಲ್ಲಿ 50 ಜನರಿಗೆ ಚಿಕಿತ್ಸೆಗೆ ಸಿದ್ಧತೆ

ಬಡವರಿಗೆ ದಿನಸಿ ಕಿಟ್‌ ವಿತರಣೆ

ಬಡವರಿಗೆ ದಿನಸಿ ಕಿಟ್‌ ವಿತರಣೆ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ಬಹು ನಿರೀಕ್ಷೆಯ ಪಂದ್ಯಕ್ಕೆ ಮಳೆ ಕಾಟ

ಬಹು ನಿರೀಕ್ಷೆಯ ಪಂದ್ಯಕ್ಕೆ ಮಳೆ ಕಾಟ

ಕುಸಿಯುವ ಭೀತಿಯಲ್ಲಿ ದೇವಗಿರಿ ಸರಕಾರಿ ಶಾಲೆ

ಕುಸಿಯುವ ಭೀತಿಯಲ್ಲಿ ದೇವಗಿರಿ ಸರಕಾರಿ ಶಾಲೆ

ಯೋಧರು ಎಫ್ ಬಿ ಬಳಸುವಂತಿಲ್ಲ

ಯೋಧರು ಎಫ್ ಬಿ ಬಳಸುವಂತಿಲ್ಲ

ಉಡುಪಿ ಯತಿಗಳಿಗೆ ನಾಲ್ಕು ತಿಂಗಳು ಭಿನ್ನ ಆಹಾರ ಕ್ರಮ

ಉಡುಪಿ ಯತಿಗಳಿಗೆ ನಾಲ್ಕು ತಿಂಗಳು ಭಿನ್ನ ಆಹಾರ ಕ್ರಮ

agian 24

ಒಂದೇ ದಿನದಲ್ಲಿ ಮತ್ತೆ 24 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.