ಉತ್ತರ ಕನ್ನಡದಲ್ಲಿ ಭಾರೀ ಮಳೆ: ಗುರುವಾರವೂ ಶಾಲಾ ಕಾಲೇಜಿಗೆ ರಜೆ ಘೋಷಣೆ
Team Udayavani, Jul 6, 2022, 5:47 PM IST
ಕಾರವಾರ : ಉತ್ತರ ಕನ್ನಡದ ಕರಾವಳಿಯಲ್ಲಿ ಬುಧುವಾರ ಅಪರಾಹ್ನದ ನಂತರ ಭಾರೀ ಮಳೆ ಸುರಿಯುತ್ತಿದೆ. ಗುರುವಾರ ಮಳೆ ಹೆಚ್ಚಾಗುವ ಸುಳಿವು ಹವಾಮಾನ ಇಲಾಖೆಯಿಂದ ದೊರೆಯುತ್ತಿದ್ದಂತೆ ಜಿಲ್ಲಾಧಿಕಾರಿ ಮುಗಿಲನ್ ಶಾಲಾ ಕಾಲೇಜುಗಳಿಗೆ , ಅಂಗನವಾಡಿ ,ತಾಂತ್ರಿಕ ಶಿಕ್ಷಣ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ನೀಡಿದ್ದಾರೆ.
ಗುರುವಾರದ ರಜೆ ಸಂಗತಿಯನ್ನು ಬುಧುವಾರ ಸಂಜೆ ಘೋಷಿಸಿದರು ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದರು. ವಿಪತ್ತು ನಿರ್ವಹಣಾ ಸಮಿತಿ ಸೆಕ್ಷನ್ 34 ರ ಅಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಉದಯವಾಣಿಗೆ ತಿಳಿಸಿದರು .
ಕರಾವಳಿ, ಘಟ್ಟ, ಮಲೆನಾಡಿನಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದೆ. ಕಾಳಿ, ಗಂಗಾವಳಿ, ಅಘನಾಶಿನಿ,ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ಹಾಗಾಗಿ ನದಿ ದಂಡೆಯ ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.