ಕಾರವಾರದಲ್ಲಿ ಗೋವಾದಿಂದ ತಂದಿದ್ದ ಭಾರಿ ಪ್ರಮಾಣದ ಮದ್ಯ ವಶ
ಬೋಟ್ ಮೂಲಕ ಸಮುದ್ರ ಮಾರ್ಗದಲ್ಲಿ ಅಕ್ರಮ ಸಾಗಾಟ... ಆರೋಪಿಗಳು ಪರಾರಿ
Team Udayavani, Apr 1, 2023, 2:45 PM IST
ಕಾರವಾರ : ಬೋಟ್ ಮೂಲಕ ಗೋವಾ ಸಮುದ್ರ ಮಾರ್ಗವಾಗಿ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದ ವೇಳೆ ,ದಾಳಿ ನಡೆಸಿದ ಕರಾವಳಿ ಕಾವಲು ಪಡೆ ಪೊಲೀಸರು ಲಕ್ಷಾಂತರ ರೂ.ಬೆಲೆಯ ಮದ್ಯ ಹಾಗೂ ಸ್ವತ್ತನ್ನ ಮಾಜಾಳಿ ಸಮುದ್ರ ತೀರದಲ್ಲಿ ವಶಪಡಿಸಿಕೊಂಡಿದ್ದಾರೆ.
ಗೋವಾ ವ್ಯಾಪ್ತಿ ಸಮುದ್ರ ಮಾರ್ಗವಾಗಿ ಬೋಟ್ ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದಾಗ ಮಾಜಾಳಿ ಕಡಲ ತೀರದಲ್ಲಿ ಇಂದು ಬೆಳಗಿನ ಜಾವ ಕರಾವಳಿ ಕಾವಲುಪಡೆ ಇನ್ಸ್ಪೆಕ್ಟರ್ ನಿಶ್ಚಲ ಕುಮಾರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಕ್ರಮ ಗೋವಾ ಮದ್ಯ ಸೇರಿ 2.90 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಗೋವಾ ಫೆನ್ನಿ, ವಿಸ್ಕಿ, ಉರಾಕ್ ಸೇರಿ ಗೋವಾ ಮದ್ಯ ಅಕ್ರಮ ಸಾಗಾಟಕ್ಕೆ ಯತ್ನಸಿದ್ದು,1.50 ಲಕ್ಷ ಮೌಲ್ಯದ ಗೋವಾ ಮದ್ಯ, 1.40 ಲಕ್ಷ ಮೌಲ್ಯದ ಬೋಟ್ ಹಾಗೂ ಎಂಜಿನ್ ವಶಕ್ಕೆ ಪಡೆದಿದ್ದಾರೆ. ಕಾವಲುಪಡೆ ಪೊಲೀಸ್ ಕಂಡು ಬೋಟ್ ನಲ್ಲಿ ಇದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕಾರವಾರ ಕರಾವಳಿ ಕಾವಲುಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್