ಜೀವನ್ಮರಣ ಹೋರಾಟದಲ್ಲಿದ್ದ ಗೋವನ್ನು ರಕ್ಷಿಸಿದ ಗೋ ರಕ್ಷಕರು


Team Udayavani, Sep 3, 2021, 2:55 PM IST

incident held at dandeli

ದಾಂಡೇಲಿ : ಗಾಯಗೊಂಡು ಹುಳವಾಗಿ ಜೀವನ್ಮರಣ ಹೋರಾಟದಲ್ಲಿದ್ದ ಗೋವೊಂದನ್ನು ನಗರದ ಗೋ ರಕ್ಷಕರು ರಕ್ಷಿಸಿ, ಆರೈಕೆ ಮಾಡಿದ ಮಾನವೀಯ ಕಾರ್ಯ ನಗರದ ಸಾಯಿನಗರದಲ್ಲಿ ನಡೆದಿದೆ.

ಇದನ್ನೂ ಓದಿ:ಕಾಲುಗಳು ಇಲ್ಲದಿದ್ದರೆ ಏನಂತೆ ?ಪ್ಯಾರಾಲಿಂಪಿಕ್ ನಲ್ಲಿ ಚಿನ್ನ ಗೆದ್ದ ಅವನಿ ಯಶಸ್ಸಿನ ಪಯಣ

ನಗರದ ಸಾಯಿನಗರದಲ್ಲಿ ಬಿಡಾಡಿ ಗೋವೊಂದು ಗಾಯಗೊಂಡು ಹುಳವಾಗಿ ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿತ್ತು. ಗಾಯವಾದ ಕಡೆಯಿಂದ ನಿರಂತರವಾಗಿ ರಕ್ತ ಸುರಿಯಲಾರಂಭಿಸಿ ನಿತ್ರಾಣವಾಗಿ ಬಸವಳಿದಿತ್ತು. ವಿಚಾರ ತಿಳಿದು ತಕ್ಷಣವೆ ಸ್ಥಳಕ್ಕಾಗಮಿಸಿದ ನಗರದ ಗೋರಕ್ಷಕರುಗಳಾದ ಗೋಪಾಲ ಜಾಧವ್, ಭೀಮುಶಿ ಬಾದುಲಿ, ವಿನೋದ್ ಶರ್ಮಾ, ರವೀಂದ್ರ ಇವರುಗಳು ತಕ್ಷಣವೇ ಗಾಯವಾಗಿದ್ದ ಗೋವನ್ನು ಆರೈಕೆ ಮಾಡಿ, ನಗರದ ಪಶುವೈದ್ಯ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿ ಸಂದೀಪ ಅವರು ಗಾಯಗೊಂಡಿದ್ದ ಗೋವಿಗೆ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡಿದರು. ನಗರದಲ್ಲಿ ಗೋವುಗಳಿಗೆ ತೊಂದರೆಯಾದಾಗ ತಡಮಾಡದೆ ಧಾವಿಸಿ ಚಿಕಿತ್ಸೆ ನೀಡುತ್ತಿರುವ ಸಂದೀಪ ಅವರ ಬಗ್ಗೆ ನಗರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ನಗರದಲ್ಲಿ ಬಿಡಾಡಿ ದನ ಕರುಗಳು ಆರೋಗ್ಯಬಾಧೆಯನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ತಕ್ಷಣವೆ ಧಾವಿಸಿ, ಅವುಗಳನ್ನು ಉಪಚರಿಸುವ ಗೋ ಸಂರಕ್ಷಕರ ಮಾನವೀಯ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೆಬೇಕು.

ಈ ಭಾಗದಲ್ಲಿ ಬಿಡಾಡಿ ದನ ಕರುಗಳ ಸಂಖ್ಯೆಯೂ ಬಹಳಷ್ಟಿರುವುದಲ್ಲದೇ, ಇತ್ತೀಚಿನ ಕೆಲ ವರ್ಷಗಳಿಂದ ವನ್ಯಪ್ರಾಣಿಗಳಾದ ಜಿಂಕೆಗಳು ನಗರ ಪ್ರದೇಶಕ್ಕೆ ಆಹಾರವನ್ನರಸಿ ಬರುತ್ತಿರುವುದರಿಂದ ಅನೇಕ ಬಾರಿ ಜಿಂಕೆಗಳು ಬಿಡಾಡಿ ನಾಯಿಗಳಿಗೆ ಬಲಿಯಾಗಿರುವ ಉದಾಹರಣೆಗಳಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಗರದ ಪಶುವೈದ್ಯ ಆಸ್ಪತ್ರೆಗೆ ಪೂರ್ಣಕಾಲಿಕ ವೈದ್ಯರ ನೇಮಕಾತಿ ಅಥವಾ ಸಂಚಾರಿ ಪಶುವೈದ್ಯ ಆಸ್ಪತ್ರೆಯನ್ನಾದರೂ ನೀಡಬೇಕೆಂಬ ಆಗ್ರಹಗಳು ಕೇಳಿ ಬರಲಾರಂಭಿಸಿವೆ.

ಟಾಪ್ ನ್ಯೂಸ್

3—harapanahalli

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

hiremutt

ಹಾವೇರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ; ಪಕ್ಷ ತೊರೆದ ಜಿಲ್ಲಾ ಅಧ್ಯಕ್ಷ!

tdy-13

ಥಿಯೇಟರ್‌ ಬಳಿಕ ಓಟಿಟಿಯಲ್ಲಿ ʼಕಬ್ಜʼ ಅಬ್ಬರಕ್ಕೆ ಡೇಟ್‌ ಫಿಕ್ಸ್? :‌ ರಿಲೀಸ್‌ ಡೇಟ್‌ ವೈರಲ್

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

TDY-12

ಜೆಡಿಎಸ್‌ ಭದ್ರಕೋಟೆಗೆ ಮೂರು ಬಾಗಿಲು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಅಡಿಕೆ ತೋಟ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಅರ್ಧ ಎಕರೆಗೂ ಅಧಿಕ ಅಡಿಕೆ ತೋಟ ಬೆಂಕಿಗಾಹುತಿ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

4-sirsi

ಕಗ್ಗದ ಮೇಲೆ ಸ್ವರ್ಣವಲ್ಲೀ ಶ್ರೀ ಪ್ರವಚನ; ಇಂದಿನಿಂದ ಶಿರಸಿ ಯೋಗ ಮಂದಿರದಲ್ಲಿ!

ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ‌

ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ‌

1-adsadsad

ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

dambula

ಇಡಬ್ಲೂಎಸ್ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರದಿಂದ ನಿರ್ಲಕ್ಷ್ಯ: ಹನುಮಂತ ಡಂಬಳ

3—harapanahalli

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

tdy-15

ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.