
ಶಾಂತಿ ಕದಡಲು ಹಿಜಾಬ್ ಬಳಕೆ: ಕೋಟ ಶ್ರೀನಿವಾಸ ಪೂಜಾರಿ
ಯಕ್ಷಗಾನಕ್ಕೆ ತೊಂದರೆ ಇಲ್ಲ
Team Udayavani, Jun 3, 2022, 11:29 PM IST

ಕಾರವಾರ: ಹಿಜಾಬ್ ವಿಚಾರ ಈಗ ಮುಗಿದ ಅಧ್ಯಾಯ. ಹಿಜಾಬ್ ಹಾಕಿಕೊಂಡು ಬಂದಿದ್ದೇ ಅಶಾಂತಿ ಸೃಷ್ಟಿಸುವುದಕ್ಕಾಗಿ ಎನ್ನು ವುದು ಈಗ ಅನಿಸುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಎಷ್ಟು ಸರಿ ಎಂದವರು ಪ್ರಶ್ನಿಸಿದರು.
ಯಕ್ಷಗಾನಕ್ಕೆ ತೊಂದರೆ ಇಲ್ಲ
ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನ ಮಾಡುತ್ತಿದೆ. ಮಸೀದಿ, ದೇವಸ್ಥಾನಗಳ ಮೇಲಿರುವ ಲೌಡ್ ಸ್ಪೀಕರ್ ತೆಗೆಸಲಾಗುತ್ತಿದೆ.
ಯಕ್ಷಗಾನ ಒಂದು ವ್ಯವಸ್ಥೆ. ಕಟ್ಟಡದ ವ್ಯಾಪ್ತಿಯಲ್ಲಿ ನಡೆಯುವಂತಹದ್ದಲ್ಲ. ಆಯಾ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು, ಸೀಮಿತ ಧ್ವನಿವರ್ಧಕ ಬಳಸಿ ಯಕ್ಷಗಾನ ಮಾಡಬಹುದು ಎಂದರು.
ಟಾಪ್ ನ್ಯೂಸ್
