
ಕೆಆರ್‌ಐಡಿಎಲ್ ಎಂಬ ಭರವಸೆಯ ಸಂಸ್ಥೆ: ಗುಣಮಟ್ಟದ ಕಾಮಗಾರಿ ನಿರ್ವಹಣೆ
ಅಂಕೋಲಾದಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯಿಂದ ನಿರ್ಮಾಣಗೊಂಡ ಸರಕಾರಿ ಮಹಾವಿದ್ಯಾಲಯ
Team Udayavani, Jul 2, 2022, 12:00 PM IST

2022-23ನೇ ಸಾಲಿಗೆ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಲ್ಲಿ ಮಳೆ ಪರಿಹಾರದ 5054 ಯೋಜನೆಯಲ್ಲಿ ವಿವಿಧ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನೆಯಡಿ ಹಲವು ಕಾಮಗಾರಿ, ಮಾನ್ಯ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನಿಗಮದ ಮೇಲೆ ಸರ್ಕಾರ ಭರವಸೆ ಇಟ್ಟಿದೆ. ಅದನ್ನು ಉತ್ತಮವಾಗಿ ನಿರ್ವಹಿಸಿ ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಕಾಮಗಾರಿ ಮಾಡಿ ಕೊಡುವುದು ಕೆಆರ್‌ಐಡಿಎಲ್ ಸಂಸ್ಥೆಯ ಪರಮಧ್ಯೇಯವಾಗಿರುತ್ತದೆ.
1971ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಭೂ ಸೇನಾ ನಿರ್ದೇಶನಾಲಯವು 1974 ಆಗಸ್ಟ್ 9ರಂದು ಕರ್ನಾಟಕ ಸರ್ಕಾರದ ಅಧೀನಕ್ಕೊಳಪಟ್ಟ ಸಂಸ್ಥೆಯಾಗಿ ಕರ್ನಾಟಕ ಭೂ ಸೇನಾ ನಿಗಮವಾಗಿ ಪರಿವರ್ತನೆ ಹೊಂದಿತು.
ಕರ್ನಾಟಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಹಮ್ಮಿಕೊಂಡಿರುವ ವಿವಿಧ ಯೋಜನೆಯಡಿ ಸಾವಿರಾರು ಕೋಟಿ ರೂ.ಗಳ ವೆಚ್ಚದಲ್ಲಿ ಅನೇಕ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಣೆ ಮಾಡುತ್ತಾ ಬಂದಿದೆ.
ಕರ್ನಾಟಕ ಭೂಸೇನಾ ನಿಗಮದ ನಿಯಮಿತ ಸಂಸ್ಥೆಯ ಹೆಸರನ್ನು 06-08-2009 ರಂದು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್)ಎಂದು ಮರು ನಾಮಕರಣ ಮಾಡಲಾಗಿದೆ.
ನಿಗಮವು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೇಂದ್ರವಾಗಿ ಒಂದು ವಿಭಾಗ ಕಚೇರಿ, ಕಾರವಾರ- ಶಿರಸಿಯಲ್ಲಿ ತಲಾ ಒಂದು ಉಪ ವಿಭಾಗ ಹೊಂದಿದೆ.
2020-2021ರಲ್ಲಿ ಕಾರವಾರ ವಿಭಾಗದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, ಗ್ರಾಮೀಣ ಪ್ರದೇಶದ ರಸ್ತೆಗಳು, ಪಂಚಾಯತ್ ರಾಜ್ಯ ಇಲಾಖೆಯ 3054 ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ರಸ್ತೆ, ಜಿಲ್ಲೆಯ ವಿವಿಧ ತಾಲೂಕು ಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ರೈತ ಸಂಪರ್ಕ ಕೇಂದ್ರ, ಪ್ರವಾಸೋದ್ಯಮ ಇಲಾಖೆಯ ಕಾಮಗಾರಿ, ಪಶು ವೈದ್ಯ ಚಿಕಿತ್ಸಾಲಯ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಒಟ್ಟು 31.16 ಕೋಟಿ ರೂ.ಗಳ ಕಾಮಗಾರಿಗಳನ್ನು ನಿರ್ವಹಿಸಲಾಗಿರುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

India’s first ever ಬುಲೆಟ್ ಟ್ರೈನ್ ಟರ್ಮಿನಲ್ ಅನಾವರಣ ; Video

Chennai ದೊರೆಯಲಿದೆ ನಗರ ಪ್ರವಾಹ ನಿಯಂತ್ರಣ ವ್ಯವಸ್ಥೆ :ದೇಶದಲ್ಲಿಯೇ ಮೊದಲ ಬಾರಿಗೆ

South Africa Tour; ಭಾರತೀಯ ತಂಡ ಡರ್ಬಾನ್ಗೆ ಆಗಮನ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ