Mundgod: ಮೂರು ದಿನದ ಹಸುಗೂಸನ್ನು ಆಸ್ಪತ್ರೆಯ ತೊಟ್ಟಿಲಿನಲ್ಲಿ ಬಿಟ್ಟುಹೋದ ತಾಯಿ
Team Udayavani, Aug 4, 2023, 2:55 PM IST
ಮುಂಡಗೋಡ: ತಾಯಿಯೊಬ್ಬಳು ಮೂರು ದಿನದ ಹಸುಗೂಸನ್ನು ಆಸ್ಪತ್ರೆಯ ತೊಟ್ಟಿಲಿನಲ್ಲಿ ಬಿಟ್ಟುಹೋದ ಘಟನೆ ಪಟ್ಟಣದ ಜ್ಯೋತಿ ಆರೋಗ್ಯ ಆಸ್ಪತ್ರೆಯಲ್ಲಿ ಆ.4ರ ಶುಕ್ರವಾರ ನಡೆದಿದೆ.
ಯಾರೋ ತಮ್ಮ ಮೂರು ದಿನದ ಹಸುಗೂಸನ್ನು ಶುಕ್ರವಾರ ನಸುಕಿನ ವೇಳೆ ಆಸ್ಪತ್ರೆಯ ಮುಂದೆ ಇಟ್ಟಿರುವ ತೊಟ್ಟಿಲಿನಲ್ಲೇ ಮಗುವನ್ನು ಹಾಕಿ ಹೋಗಿದ್ದಾರೆ.
ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಗುವನ್ನು ಹೆತ್ತು ಸಾಕಲಾಗದೇ ಇರುವವರಿಗಾಗಿ ತೊಟ್ಟಿಲೊಂದನ್ನು ಕಟ್ಟಿಡಲಾಗಿದ್ದು, ನಾಮಫಲಕ ನೋಡಿ ಯಾರೋ ತಮ್ಮ ಹಸುಗೂಸನ್ನು ನಸುಕಿನ ಜಾವ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ.
ಮಗುವನ್ನು ಗಮನಿಸಿದ ಆಸ್ಪತ್ರೆಯವರು ತಕ್ಷಣವೇ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಗುವನ್ನು ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ವಹಿಸಿದ್ದಾರೆ.
ಕ್ರೈಂ ಪಿಎಸ್ಐ ಎಚ್.ಬಿ. ಕುಡಗುಂಟಿ, ಸಿಬ್ಬಂದಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ