ವಾಹನ ಪಾರ್ಕಿಂಗ್ ಶುಲ್ಕ ವಸೂಲಿಗೆ ವಿರೋಧ
ಮೊದಲು ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಕಿಂಗ್ ಜಾಗ ಕಡ್ಡಾಯ ಮಾಡಿ
Team Udayavani, Apr 27, 2022, 10:34 AM IST
ಕಾರವಾರ: ನಗರದಲ್ಲಿನ ಕಟ್ಟಿದ ಹಾಗೂ ನಿರ್ಮಾಣ ಹಂತದ ಅಪಾರ್ಟಮೆಂಟ್‌ಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳ ಬಿಡುವುದನ್ನು ಮೊದಲು ಕಡ್ಡಾಯ ಮಾಡಿ. ನಂತರ ನಗರದಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಿಧಿಸುವುದರ ಬಗ್ಗೆ ಯೋಚಿಸಿ. ಅಲ್ಲಿ ತನಕ ನಗರದಲ್ಲಿ ವಾಹನಗಳಿಗೆ ಪಾರ್ಕಿಂಗ್ ಪೇ ವಿಧಿಸುವುದು ಬೇಡ ಎಂದು ನಗರಸಭೆ ವಿರೋಧ ಪಕ್ಷದ ಸದಸ್ಯ ಸಂದೀಪ ತಳೇಕರ್ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಲಹೆ ನೀಡಿದರು.
ಸಿಗ್ನೇಚರ್ ಅಪಾರ್ಟಮೆಂಟ್‌ಗೆ ದಾರಿಯೇ ಇಲ್ಲದ ಬಗ್ಗೆ ಹಾಗೂ ಅನಧಿಕೃತ ನಿರ್ಮಾಣದ ಬಗ್ಗೆ ಸದಸ್ಯೆ ಶಿಲ್ಪಾ ಆಕ್ಷೇಪ ಎತ್ತಿದರಲ್ಲದೇ, ಈ ಬಗ್ಗೆ ಕಳೆದ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಈಗ ಉತ್ತರ ನೀಡಿ ಎಂದು ಪೌರಾಯುಕ್ತ ಆರ್.ಪಿ. ನಾಯ್ಕರ ಬಳಿ ಪಟ್ಟು ಹಿಡಿದರು. ಇದೇ ವಿಷಯ ಮುಂದುವರಿಸಿದ ಹಿರಿಯ ಸದಸ್ಯ ಜಿ.ವಿ. ನಾಯ್ಕ ಮುಲ್ಲಾ ಸ್ಟಾಪ್ ಬಳಿ ಬ್ಯಾಂಕ್ ಹಾಗೂ ಮೋರ್ ಶಾಪ್‌ನವರು ರಸ್ತೆಯಲ್ಲಿ ಸಾರ್ವಜನಿಕರು ವಾಹನ ಪಾರ್ಕಿಂಗ್ ಮಾಡುವಂತೆ ಮಾಡಿದ್ದಾರೆ. ಇದನ್ನು ನಿಷೇಧಿಸಿ ಹಾಗೂ ಅಲ್ಲಿನ ವಿದ್ಯುತ್ ಕಂಬ ಸ್ಥಳಾಂತರಿಸಿ ಎಂದು ಗುಡುಗಿದರು. ಬಜೆಟ್ ಮಂಡನೆ ಸಭೆಯಲ್ಲಿ ಇದೇ ವಿಷಯಕ್ಕೆ ಆಕ್ಷೇಪ ಎತ್ತಿ, ಸಭೆ ಬಹಿಷ್ಕರಿಸಿ ನಡೆದಿದ್ದರೂ, ಸಭೆಗೆ ನಾನು ಬಂದೇ ಇಲ್ಲ ಎಂಬಂತೆ ಗೈರು ಹಾಜರಾಗಿದ್ದಾರೆಂದು ಬರೆದಿದ್ದೀರಿ. ಇದು ಸರಿಯಲ್ಲ ಎಂದು ಜಿ.ವಿ.ನಾಯ್ಕ ಅಧ್ಯಕ್ಷರು ಹಾಗೂ ಪೌರಾಯುಕ್ತರ ನಡೆಯನ್ನು ಖಂಡಿಸಿದರು.
ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರನ್ನು ಪಕ್ಷ ಬೇಧ ಮರೆತು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಉಳ್ವೇಕರ್, ಇದೇ ನಗರಸಭೆಯಲ್ಲಿ 4 ಸಲ ಸದಸ್ಯನಾಗಿ, ಒಂದು ಸಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು. ವಿಧಾನ ಪರಿಷತ್‌ನಲ್ಲಿ ನಗರಸಭೆಗೆ ಆಗಬೇಕಾದ ಕೆಲಸಗಳ ಬಗ್ಗೆ ಧ್ವನಿ ಎತ್ತುವೆ ಎಂದರು.
ಗ್ರಂಥಾಲಯ ಅವ್ಯವಸ್ಥೆ ಪ್ರಸ್ತಾಪ: ಸಾಮಾನ್ಯ ಸಭೆಯಲ್ಲಿ ಗ್ರಂಥಾಲಯ ಕರ ಸಂಗ್ರಹಿಸಿ, ಗ್ರಂಥಾಲಯಕ್ಕೆ ಲಕ್ಷ ಲಕ್ಷ ಹಣ ನೀಡಿದರೂ, ಅಲ್ಲಿ ಓದುಗರಿಗೆ ಕನಿಷ್ಠ ಸೌಲಭ್ಯ, ಶೌಚಾಲಯ ವ್ಯವಸ್ಥೆ, ಫ್ಯಾನ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸದಸ್ಯ ಮಕೂºಲ್ ಶೇಖ್ ಪ್ರಸ್ತಾಪಿಸಿದರು.
ಅಧ್ಯಕ್ಷರು ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಶೀಲಿಸಬೇಕು. ಅಲ್ಲದೆ ನಾವು ನೀಡಿದ ಜನರ ತೆರಿಗೆ ಹಣ ಹೇಗೆ ದುರ್ಬಳಕೆ ಆಗಿದೆ ಎಂಬ ಬಗ್ಗೆ ಗಮನಿಸಿ ಕ್ರಮಕೈಗೊಳ್ಳಿ ಎಂದರು. ವಿಪ ಸದಸ್ಯ ಉಳ್ವೇಕರ್ ಸಹ ಈ ಬಗ್ಗೆ ಗಮನ ನೀಡುವೆ ಎಂದರು. ನಗರಸಭೆಯಿಂದ ಓರ್ವ ಸದಸ್ಯರನ್ನು ಗ್ರಂಥಾಲಯಕ್ಕೆ ನಾಮ ನಿರ್ದೇಶನ ಮಾಡಬೇಕು ಎಂದು ಮಕ್ಬೂಲ್ ಹೇಳಿದರು.
ಅಂಬೇಡ್ಕರ್ ಜಯಂತಿ ಆಚರಿಸೋಣ; ಅಂಬೇಡ್ಕರ್ ಜಯಂತಿಗೆ ನಮ್ಮನ್ನು ಕರೆಯುತ್ತಿಲ್ಲ, ಹಾಗಾಗಿ ನಾವೇ ಮುಂದಿನ ವರ್ಷದಿಂದ ಅಂಬೇಡ್ಕರ್ ಜಯಂತಿ ಯಾಕೆ ಆಚರಿಸಬಾರದು ಎಂದು ಸದಸ್ಯ ಮಕೂºಲ್ ಶೇಖ್ ಪ್ರಸ್ತಾಪಿಸಿದರು. ಈ ಬೇಡಿಕೆಗೆ ತಕ್ಷಣ ಅಧ್ಯಕ್ಷ ನಿತಿನ್ ಪಿಕಳೆ ಸಮ್ಮತಿಸಿದರು. ಮುಂದಿನ ವರ್ಷದಿಂದ ಪ್ರತ್ಯೇಕವಾಗಿ ನಾವೇ ಅಂಬೇಡ್ಕರ್ ಜಯಂತಿ ಮಾಡೋಣ ಎಂಬ ಸಲಹೆಗೆ ಪೌರಾಯುಕ್ತರು ಹಾಗೂ ಸರ್ವ ಸದಸ್ಯರು ಸಮ್ಮತಿಸಿದರು.
ಯುಜಿಡಿ ಎರಡನೇ ಹಂತ ಜಾರಿ ಮಾಡಿ: ನಗರ ಬೆಳೆಯುತ್ತಿದೆ. ಯುಜಿಡಿ ಈಗ ನಗರದ ಹೃದಯಭಾಗದಲ್ಲಿ ಮಾತ್ರ ಇದೆ. ಅದನ್ನು ಮಾಲಾದೇವಿ ಕ್ರೀಡಾಂಗಣದ ಮುಖ್ಯ ರಸ್ತೆಯಿಂದ ಕೋಡಿಭಾಗದವರೆಗೆ ಹಾಗೂ ಕಾಜೂಭಾಗದಿಂದ ಸುಂಕೇರಿತನಕ ವಿಸ್ತರಿಸಿ ಎಂದು ಸದಸ್ಯ ಮಕೂºಲ್ ಶೇಖ್ ಗಮನಸೆಳೆದರು. ಇದಕ್ಕೆ ಅಧ್ಯಕ್ಷ ಪಿಕಳೆ, ವಿಪ ಸದಸ್ಯ ಉಳ್ವೇಕರ್ ಸಮ್ಮತಿಸಿದರು. ಎರಡನೇ ಹಂತದ ಪ್ಲಾನ್ ಸಿದ್ಧವಿದ್ದು, ಮೂಲಭೂತ ಸೌಕರ್ಯ ಇಲಾಖೆ, ನೀರು ಒಳಚರಂಡಿ ಸರಬರಾಜು ಇಲಾಖೆ ಅಧಿಕಾರಿಗಳ ಸಭೆ ಕರೆದು, ಸದಸ್ಯರಿಗೆ ಪ್ರತ್ಯೇಕ ಮೀಟಿಂಗ್ ಮಾಡುವುದಾಗಿ ಪೌರಾಯುಕ್ತರು ಹೇಳಿದರು.
ಕೋಣೆನಾಲಕ್ಕೆ ಕೊಳಚೆ ಸಂಸ್ಕರಣಾ ಘಟಕ: ಕೋಣೆನಾಲಕ್ಕೆ ಕೊಳಚೆ ಸಂಸ್ಕರಣಾ ಘಟಕವನ್ನು ಮಂಗಳೂರಿನ ಸಂಸ್ಥೆ ರೂಪಿಸಿದ್ದು, ಜಪಾನ್‌ನಿಂದ ಯಂತ್ರೋಪಕರಣ ತರಿಸಲಾಗಿದೆ. ಅದು ಮೂರ್‍ನಾಲ್ಕು ದಿನದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪೌರಾಯುಕ್ತರು ತಿಳಿಸಿದರು.
ಕೆಲವು ಸದಸ್ಯರು ಎಡಿಬಿ ಯೋಜನೆಯಡಿ ಕೈಗೊಂಡ ಕೆಯುಡಿಐಎಫ್‌ಸಿ ಯೋಜನೆ ಸಂಸ್ಕರಣಾ ಘಟಕದ ವೈಫಲ್ಯದಂತೆ ಇದು ಸಹ ಆಗದಿರಲಿ. ಉತ್ತಮವಾಗಿ ಕೆಲಸ ನಿರ್ವಹಿಸಿದರೆ, ಹೊಸ ಸೌಲಭ್ಯವನ್ನು ಜಾಗೂರುಕತೆಯಿಂದ ನಿರ್ವಹಣೆ ಮಾಡಿದರೆ ಸಂತೋಷ ಎಂದು ಸದಸ್ಯ ಮಕೂºಲ್ ಮತ್ತಿತರರು ಹೇಳಿದರು. ಅಧ್ಯಕ್ಷ ಪಿಕಳೆ ಸಹ ಈ ಅಭಿಪ್ರಾಯಕ್ಕೆ ದನಿಗೂಡಿಸಿದರು. 2010-11,11-12, 2012-13 ನೇ ಸಾಲಿನಲ್ಲಿ ಮಾಡಿದ ಗುತ್ತಿಗೆ ಕಾಮಗಾರಿಗಳಿಗೆ ಇನ್ನು ಬಿಲ್ ಪಾವತಿಯಾಗದ ಬಗ್ಗೆ ಚರ್ಚೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ
ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್
ರಾಹುಲ್ ಗಾಂಧಿ ಆಧುನಿಕ ಭಾರತದ ಮಿರ್ ಜಾಫರ್ – ಸಂಬಿತ್ ಪಾತ್ರ
80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು