Udayavni Special

100 ಮೀ ರಸ್ತೆ ಡಾಂಬರೀಕರಣ ಕಳಪೆ


Team Udayavani, Jun 8, 2021, 3:03 PM IST

100 ಮೀ ರಸ್ತೆ ಡಾಂಬರೀಕರಣ ಕಳಪೆ

ಮುಂಡಗೋಡ: ಇತ್ತೀಚಿಗಷ್ಟೆ ಲಕ್ಷಾಂತರ ರೂ. ಖರ್ಚು ಮಾಡಿ ಪಟ್ಟಣದ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮಹಾಲೆ ಮಿಲ್‌ ಹತ್ತಿರ ರಸ್ತೆ ಡಾಂಬರೀಕರಣ ಮಾಡಿದ್ದು ಮಳೆ ಆರಂಭದ ಮುನ್ನವೇ ಗುಂಡಿಗಳು ಬಿದ್ದಿದ್ದು ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ಲೋಕೋಪಯೋಗಿ ಇಲಾಖೆಯ 2019-20ನೇ ಸಾಲಿನ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಹೊರವಲಯದ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಮಹಾಲೆಮಿಲ್‌ ಹತ್ತಿರ ನಿರ್ಮಾಣ ಮಾಡಲಾಗಿರುವ 100 ಮೀಟರ್‌ ರಸ್ತೆ ಡಾಂಬರೀಕರಣ ಕಾಮಗಾರಿ ಇದಾಗಿದೆ. ಕಳೆದ ವರ್ಷ ಈ ಹದಗೆಟ್ಟ ರಸ್ತೆಯಲ್ಲಿಯೇ ಸಾವು-ನೋವುಗಳು ಸಂಭವಿಸಿದ್ದರಿಂದ ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು.

ನಂತರ ಲೋಕೋಪಯೋಗಿ ಇಲಾಖೆಯವರು ಎಚ್ಚೆತ್ತುಕೊಂಡು ರಸ್ತೆಯನ್ನು ಅಗೆದು ತುರ್ತು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ಈ ಜಾಗದಲ್ಲಿ ಡಾಬರ್‌ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೆ ಮಳೆಗಾಲ ಪ್ರಾರಂಭವಾಗವ ಮುನ್ನವೇ ರಸ್ತೆ ಮಧ್ಯ ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿವೆ. ಅದರಲ್ಲಿಯೂ ಕೋವಿಡ-19 ಪರಿಣಾಮ ಲಾಕ್‌ಡೌನ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡಿಲ್ಲ. ಒಂದೆರಡುಬಾರಿ ದೊಡ್ಡ ಮಳೆಯಾಗಿದೆ. ಅದಾಗಲೇ ಈ ಸ್ಥಳದಲ್ಲಿ ಗುಂಡಿಗಳು ಬಿದ್ದು ಬೈಕ್‌ ಸವಾರರಿಗೆ ಕಿರಿಕಿರಿ ಉಂಟಾಗಿದೆ.

ಇಂಥ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣದಿಂದ ಸರ್ಕಾರದ ಹಣ ಪೋಲು. ಇದರಿಂದ ಸರ್ಕಾರಕ್ಕೆ ಹಾಗೂ ಸಚಿವರಿಗೆ ಕೆಟ್ಟ ಹೆಸರು ಬರುತ್ತದೆ. ಮುಂದಿನ ದಿನದಲ್ಲಾದರೂ ಶಾಶ್ವತ ಗುಣಮಟ್ಟದ ರಸ್ತೆ ಆಗಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.– ಗುಡ್ಡಪ್ಪ ಕಾತೂರ ಮಂಡಗೋಡ ನ್ಯಾಯವಾದಿ

ರಸ್ತೆ ಕಾಮಗಾರಿ ಗುಣಮಟ್ಟದಾಗಿದೆ. ಒಂದು ಕಡೆ ಮಾತ್ರ ಗುಂಡಿ ಬಿದ್ದಿದೆ. ಹೀಗೇಕೆ ಆಗುತ್ತಿದೆ ಎಂಬುವುದು ಗೊತ್ತಿಲ್ಲ. ಆದಷ್ಟು ಬೇಗ ಗುಂಡಿ ಮುಚ್ಚಿಸುತ್ತೇವೆ. ಮುಂದೆಯೂ ಹೀಗೇ ಆದರೆ ಆ ಜಾಗವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಮೇಲಧಿ ಕಾರಿ ಜೊತೆ ಚರ್ಚಿಸಿ ಮತ್ತೂಮ್ಮೆ ದುರಸ್ತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.-ವಿ.ಎಂ.ಭಟ್ಟ ಪಿಡಬ್ಲ್ಯುಡಿ ಹೆಚ್ಚುವರಿ ಪ್ರಭಾರಿ ಎಇಇ

 

-ಮುನೇಶ ತಳವಾರ

ಟಾಪ್ ನ್ಯೂಸ್

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

Minister Aravind  Limbavali

ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವಾದರೆ, ಸಂಬಂಧಪಟ್ಟವರ ಮೇಲೆ ಕ್ರಮ : ಸಚಿವ ಲಿಂಬಾವಳಿ ಎಚ್ಚರಿಕೆ

Minister Basavaraj Bommai On River Krishna water sharing with Maharashtra

ಕೃಷ್ಣಾ ನದಿ ನೀರು ಹಂಚಿಕೆ : ಅಂತಿಮ ಅಧಿಸೂಚನೆಗೆ ಕರ್ನಾಟಕ-ಮಹಾರಾಷ್ಟ್ರ ಜಂಟಿ ಪ್ರಯತ್ನ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

Maharashtra: Former minister Sunil Deshmukh quits BJP, joins Congress on Rahul Gandhi’s birthday

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!

ಉತ್ತರಪ್ರದೇಶ: ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ

ಉತ್ತರಪ್ರದೇಶ: ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ

The world health organization says new species of coronavirus are spreading across the world data are available variant concern virus origin

ಕೋವಿಡ್ ಹೊಸ ರೂಪಾಂತರಿ ‘ಲಾಂಡಾ’ 29 ದೇಶಗಳಲ್ಲಿ ಪತ್ತೆ : ವಿಶ್ವ ಆರೋಗ್ಯ ಸಂಸ್ಥೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌ಕದ್ರಾ ಅಣೆಕಟ್ಟಿನಿಂದ 5500 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ

‌ಕದ್ರಾ ಅಣೆಕಟ್ಟಿನಿಂದ 16627 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ

Untitled-2

ರಸ್ತೆ ದಾಟಲು ವಾಹನ ಸವಾರರ ಪರದಾಟ

img-20210617-wa0008

ಶಿರಸಿ, ಸಿದ್ದಾಪುರದಲ್ಲಿಅತೀಹೆಚ್ಚುಮಳೆ 

j16srs2

ಅಡಕೆ-ಕಾಳುಮೆಣಸು ದರ ಹೆಚ್ಚಳ

k-3

ಕದ್ರಾ-ಕೊಡಸಳ್ಳಿ ನೀರು ಬಿಡುವ ಮುನ್ಸೂಚನೆ

MUST WATCH

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ಹೊಸ ಸೇರ್ಪಡೆ

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

Minister Aravind  Limbavali

ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವಾದರೆ, ಸಂಬಂಧಪಟ್ಟವರ ಮೇಲೆ ಕ್ರಮ : ಸಚಿವ ಲಿಂಬಾವಳಿ ಎಚ್ಚರಿಕೆ

Minister Basavaraj Bommai On River Krishna water sharing with Maharashtra

ಕೃಷ್ಣಾ ನದಿ ನೀರು ಹಂಚಿಕೆ : ಅಂತಿಮ ಅಧಿಸೂಚನೆಗೆ ಕರ್ನಾಟಕ-ಮಹಾರಾಷ್ಟ್ರ ಜಂಟಿ ಪ್ರಯತ್ನ

ಸದ್ಗಹಮಗ್ದ್ಗಹಜ

20 ದಿನಗಳಲ್ಲಿ ನಿರ್ಮಾಣವಾದ ಯಲಹಂಕ ಕೋವಿಡ್‌ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಸಿಎಂ

mysore news

ಮನೆ ಮೇಲ್ಚಾವಣಿಯ ಪುಟ್ಟ ಜಾಗದಲ್ಲೇ ಸುಂದರ ಸಸ್ಯಕಾಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.