
Ankola ಗೋಡೆಗಂಟಿಸಿದ ನಿಗೂಢ ಬರಹದ ಪೋಸ್ಟರ್ ಗಳು!
ಪಾಕಿಸ್ತಾನ ಕಾಂಟ್ರಾಕ್ಟ್ ಎಂದು...
Team Udayavani, Jun 4, 2023, 4:14 PM IST

ಅಂಕೋಲಾ: ಇಲ್ಲಿನ ಬಂಡೀಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಗೆ ಯಾರೋ ಮೂರು ಪೋಸ್ಟರಗಳನ್ನು ಅಂಟಿಸಿದ್ದಾರೆ. ಬೆಳಿಗ್ಗೆ ಹಲವರು ಇದನ್ನು ಗಮನಿಸಿದ್ದಾರೆ ಬಿಳಿ ಗಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಬರೆದಿರುವ ಬರಹಗಳಿವೆ.
ಇಂಗ್ಲಿಷ್ ನಲ್ಲಿ ಬರೆದಿರುವ ಬರಹ ನಿಗೂಢವಾಗಿದ್ದು ಓದಿದರೆ ಸರಿಯಾಗಿ ಅರ್ಥವಾಗುತ್ತಿಲ್ಲ. ಮೇಲ್ಗಡೆ ಸಂಗ್ಲಾನಿ ವೆಲ್ ಫೇರ್ ಟ್ರಸ್ಟ್ ಎಂದು ಬರೆದಿದ್ದು ಅದರ ಕೆಳಗೆ ಪಾಕಿಸ್ತಾನ ಕಾಂಟ್ರಾಕ್ಟ್ ಎಂದು ಬರೆಯಲಾಗಿದೆ. ಮುಂದಿನ ಬರಹಗಳು ನಿಗೂಢವಾಗಿದೆ. ಕೆಲವು ಹೈಸ್ಕೂಲ್ ಮತ್ತು ಟ್ರಸ್ಟಗಳ ಹೆಸರುಗಳನ್ನು ಬರೆದಿದ್ದು ಫಾರೆಸ್ಟ್ , ಪೊಲೀಸ್ ಶಬ್ದಗಳನ್ನೂ ಬರೆಯಲಾಗಿದೆ. ಕೊನೆಯಲ್ಲಿ ಇಂತಿ ನಿಮ್ಮ ನಾಗರಿಕ ಎಂದು ಬರೆಯಲಾಗಿದೆ.
ಇನ್ನೊಂದು ಪೋಸ್ಟರ್ ನಲ್ಲಿ ಬರೆದಿದ್ದು ಅಲ್ಪ ಸ್ವಲ್ಪ ಅಳಿಸಿ ಹೋಗಿದೆ. ಮೂರನೆ ಪೋಸ್ಟರ್ ನಲ್ಲಿ ಹೈಸ್ಕೂಲ್ ಗರ್ಲ್ಸ್ ಎಂಡ್ ಬಾಯ್ಸ್ ಎಂದು ಬರೆಯಲಾಗಿದೆ. ಹಾಗೂ ನೂರು ಬಿಲಿಯನ್ ಡಾಲರ್ ಎಂದೂ ಬರೆಯಲಾಗಿದೆ. ಹಾಗೆ ನೋಡಿದರೆ ಯಾರೋ ಮಾನಸಿಕ ಅಸ್ವಸ್ಥರು ಬರೆದು ಅಂಟಿಸಿದಂತಿದೆ. ಆದರೂ ನಿರ್ಲಕ್ಷಿಸುವಂತಿಲ್ಲ ಇದನ್ನು ಅಂಟಿಸಿದವರ ಜಾಡು ಹಿಡಿದು ಇದರ ಹಿಂದೆ ಏನಾದರೂ ಉದ್ದೇಶವಿದೆಯೇ ಎನ್ನುವದನ್ನೂ ಪೊಲೀಸರು ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಕೇಳಿಕೊಳ್ಳುತ್ತಿದ್ದಾರೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumta ; ಮಸೀದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ

Sirsi ; ಬೇಲಿಯ ಬಲೆಯಲ್ಲಿ ಸಿಕ್ಕಿಕೊಂಡ ಬೃಹತ್ ಹೆಬ್ಬಾವಿನ ರಕ್ಷಣೆ

Sirsi:ಸೇತುವೆಯ ರಕ್ಷಣಾ ಗೋಡೆಗೆ ಢಿಕ್ಕಿ ಹೊಡೆದ ವಾಹನ; ಒಂದು ಜಾನುವಾರು ಸಾವು; ಇಬ್ಬರಿಗೆ ಗಾಯ

Yakshagana ; ಥಂಡಿಮನೆ ಅವರಿಗೆ ಹೊಸ್ತೋಟ ಪ್ರಶಸ್ತಿ ಪ್ರದಾನ

Karwar Tunnel ; ಸತಾಯಿಸುವುದು ಒಳ್ಳೆಯದಲ್ಲ: ವಿಧಾನ ಪರಿಷತ್ ಸದಸ್ಯ ಉಳ್ವೇಕರ್
MUST WATCH
ಹೊಸ ಸೇರ್ಪಡೆ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

Kumta ; ಮಸೀದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ

Doddaballapur:15 ಟನ್ ಗೋ ಮಾಂಸ ಸಾಗಿಸುತ್ತಿದ್ದ ಏಳು ಮಂದಿಯ ಬಂಧನ

Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

ಪ್ರೀತಿ, ಗೀತಿ ಇತ್ಯಾದಿ…: ನೆಚ್ಚಿನವಾಡು ತೆಲುಗು ಸಿನಿಮಾ